1.5 C
Munich
Sunday, March 5, 2023

SS Rajamouli Spent 83 crores For RRR Oscar Campaign Says Report | ‘RRR’ ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ ಖರ್ಚು ಮಾಡಿದ ಹಣದಲ್ಲಿ ಮತ್ತೊಂದು ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು

ಓದಲೇಬೇಕು

ಆಸ್ಕರ್​, ಗೋಲ್ಡನ್ ಗ್ಲೋಬ್ಸ್ ಮೊದಲಾದ ಪ್ರಶಸ್ತಿಗಳು ಹಾಲಿವುಡ್​ ಅವಾರ್ಡ್​ಗಳು. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ.

ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರ ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡುತ್ತಲೇ ಇದೆ. ವಿದೇಶಿ ನೆಲದಲ್ಲಿ ಈ ಸಿನಿಮಾ ಪ್ರಶಸ್ತಿ ಬಾಚಿಕೊಳ್ಳುತ್ತಿದೆ. ‘ಗೋಲ್ಡನ್ ಗ್ಲೋಬ್’​ ಸೇರಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಿನಿಮಾ ಗೆದ್ದಿದೆ. ಈ ಚಿತ್ರ ಆಸ್ಕರ್​ ರೇಸ್​ನಲ್ಲೂ ಇದೆ. ವಿದೇಶಿ ನೆಲದಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂದರೆ ದೊಡ್ಡ ಮಟ್ಟದ ಕ್ಯಾಂಪೇನ್ ಮಾಡಬೇಕು. ಇದಕ್ಕಾಗಿ ರಾಜಮೌಳಿ (SS Rajamouli) ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿ ಆಗಿದೆ.

ಆಸ್ಕರ್​, ಗೋಲ್ಡನ್ ಗ್ಲೋಬ್ಸ್ ಮೊದಲಾದ ಪ್ರಶಸ್ತಿಗಳು ಹಾಲಿವುಡ್​ ಅವಾರ್ಡ್​ಗಳು. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, ‘ಆರ್​ಆರ್​ಆರ್​’ ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನು ಗೆಲ್ಲುತ್ತಿದೆ. ‘ಹಾಲಿವುಡ್​ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್​’, ‘ಗೋಲ್ಡನ್​ ಗ್ಲೋಬ್’ ಅವಾರ್ಡ್​​ಗಳನ್ನು ಚಿತ್ರ ಪಡೆದಿದೆ. ಇದಕ್ಕಾಗಿ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ.

‘ಆಸ್ಕರ್​ 2023’ಕ್ಕೆ ‘ಆರ್​ಆರ್​ಆರ್’ ಅಧಿಕೃತವಾಗಿ ಆಯ್ಕೆ ಆಗಿದ್ದಲ್ಲ. ಅವರು ‘ಫಾರ್ ಯುವರ್ ಕನ್ಸಿಡರೇಷನ್​’ ಕ್ಯಾಂಪೇನ್ ಮಾಡಿ ಇಲ್ಲಿಗೆ ಎಂಟ್ರಿ ಪಡೆದಿದ್ದಾರೆ. ಎಲ್ಲಾ ಪ್ರಶಸ್ತಿಗಳಿಗೆ ಅವರು ಎಂಟ್ರಿ ನೀಡಿದ್ದು ಹೀಗೆಯೇ. ಇದಕ್ಕಾಗಿ ರಾಜಮೌಳಿ ಖರ್ಚು ಮಾಡಿದ ಹಣ ಬರೋಬ್ಬರಿ 83 ಕೋಟಿ ರೂಪಾಯಿ! ಈ ಹಣದಲ್ಲಿ ಮತ್ತೊಂದು ‘ಕೆಜಿಎಫ್​’ ಚಿತ್ರ ನಿರ್ಮಾಣ ಮಾಡಬಹುದು ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಹಾಗಂತ ರಾಜಮೌಳಿ ಅವರು ಇದಕ್ಕಾಗಿ ನಿರ್ಮಾಪಕರ ಬಳಿ ಹೋಗಿಲ್ಲ. ತಮ್ಮ ವೈಯಕ್ತಿಕ ಖಾತೆಯಿಂದಲೇ ಹಣ ಬಳಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿಇದನ್ನೂ ಓದಿ: SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ರಾಜಮೌಳಿ ಅವರು ಹಾಲಿವುಡ್​ನಲ್ಲಿ ಸಿನಿಮಾ ಮಾಡುವ ಪ್ಲ್ಯಾನ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಅವರು ಇಷ್ಟು ಹಣ ಖರ್ಚು ಮಾಡಿ ಹಾಲಿವುಡ್ ಅಂಗಳದಲ್ಲಿ ಸುದ್ದಿ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಹಾಲಿವುಡ್​ನಲ್ಲಿ ಅವರು ಸಿನಿಮಾ ಮಾಡೋಕೆ ಮುಂದಾದರೆ ಸಹಾಯ ಮಾಡುವುದಾಗಿ ಇಂಗ್ಲಿಷ್​ನ ದೊಡ್ಡ ದೊಡ್ಡ ನಿರ್ದೇಶಕರು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!