ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ವಿದ್ಯಾರ್ಥಿಗಳು ದಿನಾಂಕ 5- 11 -2022 ಹಾಗೂ6-11-2022 ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಖಿಲ ಕರ್ನಾಟಕ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನ್ನ ಶೀಟೋರಿಯೋ ಕರಾಟೆ ಸ್ಕೂಲ್ ಸೇಡಂ ನಗರದ ಎಚ್ ಟಿ ಎಸ್ ನಂಬರ್ ಟು ವಿದ್ಯಾನಗರ ಶಾಲೆ ಸೇಡಂ ತಾಲೂಕಿನ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ ಎಂದು ಕಲ್ಬುರ್ಗಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಜನ್ನ್ ಶೀಟೋರಿಯೋ ಅಸೋಸಿಯೇಷನ್ ಅಧ್ಯಕ್ಷರಾದ ದಶರಥ್ ದುಮ್ಮನ್ಸೂರ್ ಹರ್ಷ ವ್ಯಕ್ತಪಡಿಸಿದ್ದಾರೆ.
13ನೇ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಕರಾಟೆ ಪಂದ್ಯಾವಳಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಪೂರ್ವ ತಂದೆ ಅನಂತಯ್ಯ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈಶಾನ್ಯ ತಂದೆ ಮೋಹನ್ ಗೌಡ ಕಂಚಿನ ಪದಕ, ಶರತ್ ತಂದೇ ರಮೇಶ್ ಕಂಚಿನ ಪದಕ, ಅರ್ಪಿತ ತಂದೆ ರಮೇಶ್ ಕಂಚಿನ ಪದಕ ಪಡೆದುಕೊಂಡಿದ್ದಾರೆ ಎಂದು ಕರಾಟೆ ಶಿಕ್ಷಕರು ಸುನಿಲ್ ಕುಮಾರ್ ಹಳಿಮನಿ ತಿಳಿಸಿದ್ದಾರೆ. ಹಾಗೂ ಸೇಡಂ ತಾಲೂಕಿನ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಹನುಮಂತ್ ಭರತ್ ನೂರ್ ಹಾಗೂ ಅಖಿಲ ಕರ್ನಾಟಕ ತಾಲೂಕ ಅಧ್ಯಕ್ಷರು ಬಸವರಾಜ್ ಕಾಳಿಗೆಕಾರ್ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಶಾಲೆಯ ಮುಖ್ಯ ಗುರುಗಳು ಅನಂತಯ್ಯ ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಗುಂಡಪ್ಪ ಅಲ್ಲೂರ್ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ವಿಶೇಷ ಕರಾಟೆ ಪರಿಣಿತ ಶಿಕ್ಷಕರು ಸೆನ್ಸಾಯಿ ಅನಿಲ್ ಕುಮಾರ್ ಹಳಿಮನಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ ಎಂದು ಸೆನ್ಸಾಯ ಸೈಬಣ್ಣ ಸಿ ಅಳ್ಳೊಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.