ರಾಜ್ಯ ಸರಕಾರ ಆಯೋಜನೆ ಮಾಡಿರುವ ಕರಾಟೆ ಪಂದ್ಯಾವಳಿಯು ದಿನಾಂಕ 11-11 -2022 ಹಾಗೂ 12-11-2022 ರಂದು ಶ್ರೀ ದುರ್ಗಾದೇವಿ ದವಳ ಪದವಿಪೂರ್ವ ಕಾಲೇಜು ಕಟೀಲು ಎಂಬಲ್ಲಿ ಈ ಕರಾಟೆ ಪಂದ್ಯಾವಳಿ ನಡೆಯಲಿದ್ದು ಈ ಪಂದ್ಯಾವಳಿಯಲ್ಲಿ ವಿಶೇಷವಾಗಿ ಸೇಡಂ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯಾದ ಕಾಮಾಕ್ಷಿ ತಂದೆ ರಾಜೇಂದ್ರ ಎಂಬುವವರು ಭಾಗವಹಿಸಲಿದ್ದಾರೆ.
ಅದೇ ರೀತಿಯಾಗಿ ಜೀಜೀ ಎಚ್ ಎಸ್ ಶಾಲೆಯ ವಿದ್ಯಾರ್ಥಿನಿಯಾದ ಕಾವ್ಯ ತಂದೆ ಬಸವರಾಜ್ ಎಂಬುವರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸೇಡಂ ತಾಲೂಕಿನ ಕರಾಟೆ ಶಿಕ್ಷಕರಾದ ಸೇನಸಾಯಿ ಸೈಬಣ್ಣ ಸೀ ಅಳ್ಳೊಳ್ಳಿ ಹಾಗೂ ಸೆನ್ಸಾಯ ಅನಿಲ್ ಕುಮಾರ್ ಡಿ ಅಳಿಮನಿ ಹಾಗೂ ಅಪೂರ್ವ ಎಕೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.