4.3 C
Munich
Monday, March 27, 2023

Sukesh Chandrasekhar : Jail raid, 80 thousand jeans, 1.5 lakh shoes seized, Sukesh Chandrasekhar shed tears Entertainment News in kannada | Video Viral: ಜೈಲಿಗೆ ದಾಳಿ, 80 ಸಾವಿರದ ಜೀನ್ಸ್, 1.5 ಲಕ್ಷದ ಶೂ ವಶ, ಕಣ್ಣೀರು ಹಾಕಿದ ಸುಕೇಶ್ ಚಂದ್ರಶೇಖರ್

ಓದಲೇಬೇಕು

ಸುಕೇಶ್ ಚಂದ್ರಶೇಖರ್ ಜೈಲು ಕೋಣೆಯಲ್ಲಿ ಐಷಾರಾಮಿ ವಸ್ತುಗಳು ಪತ್ತೆಯಾಗಿರುವ ಬಗ್ಗೆ ದೃಶ್ಯ ರೆಕಾರ್ಡ್ ಆಗಿದೆ. 200 ಕೋಟಿ ಸುಲಿಗೆ ಪ್ರಕರಣದ ಆರೋಪಿಗಳು ಮಂಡೋಲಿ ಜೈಲಿನಲ್ಲಿ ಗದ್ಗದಿತರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಸುದ್ದಿ ಸಂಸ್ಥೆ ANI ಗುರುವಾರ ಹಂಚಿಕೊಂಡ ವೀಡಿಯೊದಲ್ಲಿ, ಸುಕೇಶ್ ಚಂದ್ರಶೇಖರ್ (sukesh chandrashekar) ಜೈಲು ಕೋಣೆಯಲ್ಲಿ ಐಷಾರಾಮಿ ವಸ್ತುಗಳು ಪತ್ತೆಯಾಗಿರುವ ಬಗ್ಗೆ ದೃಶ್ಯ ರೆಕಾರ್ಡ್ ಆಗಿದೆ. 200 ಕೋಟಿ ಸುಲಿಗೆ ಪ್ರಕರಣದ ಆರೋಪಿಗಳು ಮಂಡೋಲಿ ಜೈಲಿನಲ್ಲಿ ಗದ್ಗದಿತರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ. ವರದಿಗಳ ಪ್ರಕಾರ, ಬುಧವಾರ ಸುಕೇಶ್ ಚಂದ್ರಶೇಖರ್ ಇರುವ ಜೈಲಿನ ಕೋಣೆಯಲ್ಲಿ ನಡೆದ ಹಠಾತ್ ದಾಳಿಯಲ್ಲಿ ಗುಸ್ಸಿ ಚಪ್ಪಲಿಗಳು, 1.5 ಲಕ್ಷ ನಗದು ಮತ್ತು 80,000 ಕ್ಕೂ ಹೆಚ್ಚು ಮೌಲ್ಯದ ಒಂದು ಜೊತೆ ಜೀನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ .

ಸುಕೇಶ್ ಅವರ ಜೈಲಿನಲ್ಲಿನ ಐಷಾರಮಿ ಜೀವನ ನಡೆಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಎಎನ್‌ಐ ವೀಡಿಯೊವನ್ನು ಟ್ವೀಟ್ ಮಾಡಿ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದೆ. ಕಂಮನ್ ಸುಕೇಶ್ ಚಂದ್ರಶೇಖರ್ ಅವರ ಇದ್ದ ಜೈಲಿನಲ್ಲಿ ಐಷಾರಾಮಿ ವಸ್ತುಗಳು ಪತ್ತೆಯಾಗಿವೆ. ಮಂಡೋಲಿ ಜೈಲಿನ ಸಿಸಿಟಿವಿ ದೃಶ್ಯಗಳನ್ನು ಮೂಲಗಳು ಹಂಚಿಕೊಂಡಿದ್ದು, ದಾಳಿಯ ನಂತರ ಸುಕೇಶ್ ಅವರ ಜೈಲಿನ ಸೆಲ್‌ನಲ್ಲಿ ವಸ್ತುಗಳನ್ನು ತೋರಿಸಿದ್ದಾರೆ, ಇದರ ಬಳಿಕೆ ಅಧಿಕಾರಿಗಳು ಅಲ್ಲಿಂದ ತೆರಳಿದ ನಂತರ ಸುಕೇಶ್ ಅವರ ಜೈಲಿನ ಸೆಲ್‌ನ ಮೂಲೆಯಲ್ಲಿ ನಿಂತು ಮುಖವನ್ನು ಮುಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Jacqueline Fernandez: 200 ಕೋಟಿ ರೂ. ವಂಚನೆ ಕೇಸ್​; ‘ರಕ್ಕಮ್ಮ’ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಿಕ್ತು ಮಧ್ಯಂತರ ಜಾಮೀನು

ಕಾರಾಗೃಹದ ಅಧಿಕಾರಿಗಳನ್ನು ತಿಳಿಸಿರುವಂತೆ ಎಎನ್‌ಐ ಈ ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ ಅಪರಾಧಿಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮತ್ತು ಕ್ರಮವನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ. ಕಳೆದ ವಾರ, ದೆಹಲಿ ನ್ಯಾಯಾಲಯವು ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ ಸಿಂಗ್ ಅವರು ಸಲ್ಲಿಸಿದ ಹಣ ವರ್ಗಾವಣೆ ಆರೋಪದ ಮೇಲೆ ಸುಕೇಶ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಒಂಬತ್ತು ದಿನಗಳ ಕಸ್ಟಡಿಗೆ ಕಳುಹಿಸಿತ್ತು. ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ವಂಚಿಸಿದ 200 ಕೋಟಿ ಪ್ರಕರಣದಲ್ಲಿ ಅವರ ಪತ್ನಿ ಲೀನಾ ಮಾರಿಯಾ ಒಡೆತನದ 26 ವಾಹನಗಳನ್ನು ಹರಾಜು ಮಾಡಲು ನ್ಯಾಯಾಲಯವು ಇಡಿಗೆ ಅನುಮತಿ ನೀಡಿದೆ.

ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಸೇರಿದಂತೆ ಹಲವಾರು ಮಹಿಳಾ ಬಾಲಿವುಡ್ ನಟರು ಮತ್ತು ಮಾಡೆಲ್‌ಗಳನ್ನು ಈ 2021 ರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಚಂದ್ರಶೇಖರ್‌ಗೆ ಸಂಪರ್ಕ ಹೊಂದಿದ್ದಕ್ಕಾಗಿ ಪ್ರಶ್ನಿಸಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!