8.5 C
Munich
Thursday, March 9, 2023

Super Star Rajinikanth Collaborate with Lyca Production for his 170th Movie | Rajinikanth: ರಜನಿಕಾಂತ್ 170ನೇ ಚಿತ್ರ ಘೋಷಣೆ; ‘ಜೈ ಭೀಮ್​’ ನಿರ್ದೇಶಕನ ಜೊತೆ ಸೂಪರ್​ ಸ್ಟಾರ್ ಸಿನಿಮಾ  

ಓದಲೇಬೇಕು

Thalaivar 170: ಇಂದು (ಮಾರ್ಚ್​ 2) ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಅವರ ಜನ್ಮದಿನ. ಈ ವಿಶೇಷ ದಿನದಂದು ಲೈಕಾ ಸಂಸ್ಥೆ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

ರಜನಿಕಾಂತ್

ರಜನಿಕಾಂತ್ (Rajinikanth) ಅವರ ವಯಸ್ಸು 72 ದಾಟಿದೆ. ಈ ವಯಸ್ಸಿನಲ್ಲೂ ಅವರು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 169ನೇ ಸಿನಿಮಾ ಆಗಿ ‘ಜೈಲರ್​’ ಬರುತ್ತಿದೆ. ಈ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿರುವಾಗಲೇ ರಜನಿ ಅವರ 170ನೇ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಜೈ ಭೀಮ್​’ ಖ್ಯಾತಿಯ ಟಿಜಿ ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್​’ (Lyca Production) ಬಂಡವಾಳ ಹೂಡುತ್ತಿದೆ. ಈ ಮೊದಲು ರಜನಿ ನಟನೆಯ ‘ದರ್ಬಾರ್’ ಹಾಗೂ ‘ಕಾಲ’ ಚಿತ್ರಗಳು ಇದೇ ಪ್ರೊಡಕ್ಷನ್​ಹೌಸ್ ಅಡಿಯಲ್ಲಿ ಸಿದ್ಧಗೊಂಡಿದ್ದವು.

‘ಜೈಲರ್​’ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಈ ಚಿತ್ರದಲ್ಲಿ ರಜನಿ ಜೊತೆ ಶಿವರಾಜ್​ಕುಮಾರ್ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ನಡೆದಿತ್ತು. ಸೆಟ್​ನ ಫೋಟೋಗಳು ವೈರಲ್ ಆಗಿದ್ದವು. ನೆಲ್ಸನ್ ದಿಲೀಪ್​ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಾಕಿ ಶ್ರಾಫ್​, ಯೋಗಿ ಬಾಬು, ರಮ್ಯಾ ಕೃಷ್ಣ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. ಹೀಗಿರುವಾಗಲೇ ರಜನಿ ಹೊಸ ಚಿತ್ರದ ಘೋಷಣೆ ಆಗಿದೆ.

ಇದನ್ನೂ ಓದಿಇದನ್ನೂ ಓದಿ: Jailer: ಮಂಗಳೂರಿನಲ್ಲಿ ‘ಜೈಲರ್​’ ಶೂಟಿಂಗ್; ಒಟ್ಟಿಗೆ ಕುಳಿತು ಹರಟೆ ಹೊಡೆದ ಶಿವಣ್ಣ-ರಜನಿ

ಇಂದು (ಮಾರ್ಚ್​ 2) ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಅವರ ಜನ್ಮದಿನ. ಈ ವಿಶೇಷ ದಿನದಂದು ಲೈಕಾ ಸಂಸ್ಥೆ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ. ‘ಜೈ ಭೀಮ್​’ ಚಿತ್ರ 2021ರಲ್ಲಿ ರಿಲೀಸ್ ಆಯಿತು. ಸೂರ್ಯ ನಟನೆಯ ಈ ಚಿತ್ರ ಸೂಪರ್ ಹಿಟ್ ಆಯಿತು.  ಈ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡಿದ್ದರು. ಬಳಿಕ ಅವರ ಬೇಡಿಕೆ ಹೆಚ್ಚಿದೆ. ಈಗ ರಜನಿ ಜೊತೆ ಕೆಲಸ ಮಾಡುವ ಅವಕಾಶ ಅವರದ್ದಾಗಿದೆ.

ರಜನಿಕಾಂತ್ ಅವರು ಈ ಮೊದಲು ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ರಯತ್ನ ಮಾಡಿದ್ದರು. ಹೊಸ ಪಕ್ಷ ಕಟ್ಟಲೂ ಮುಂದಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಅವರಿಗೆ ಅನಾರೋಗ್ಯ ಕಾಡಿತು. ಈ ಕಾರಣಕ್ಕೆ ಪಕ್ಷ ಕಟ್ಟುವ ನಿರ್ಧಾರದಿಂದ ಹಿಂದೆ ಸರಿದರು. ಈಗ ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!