4.6 C
Munich
Monday, March 27, 2023

Supreme Court refuses to entertain PIL for menstrual pain leaves for women in schools, workplaces | ಶಾಲೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕೋರಿ ಸಲ್ಲಿಸಿದ ಪಿಐಎಲ್ ತಳ್ಳಿದ ಸುಪ್ರೀಂಕೋರ್ಟ್

ಓದಲೇಬೇಕು

ನೀತಿಯ ದೃಷ್ಟಿಕೋನಗಳನ್ನು ಪರಿಗಣಿಸಿ, ಅರ್ಜಿದಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಿದರೆ ಅದು ಸೂಕ್ತವಾಗಿರುತ್ತದೆ. ಅದರಂತೆ ಅರ್ಜಿಯನ್ನು ತಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.

ಸುಪ್ರೀಂಕೋರ್ಟ್

ಮಹಿಳಾ ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗದ ಮಹಿಳೆಯರಿಗೆ ತಮ್ಮ ಕೆಲಸದ ಸ್ಥಳಗಳಲ್ಲಿ ಮುಟ್ಟಿನ ರಜೆ/ಋತುಚಕ್ರದ ರಜೆಗಾಗಿ(menstrual leave) ನಿಯಮಗಳನ್ನು ರೂಪಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತಳ್ಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ವಿಷಯವು ನೀತಿ ನಿರ್ಧಾರದ ವ್ಯಾಪ್ತಿಯಲ್ಲಿದೆ. ಈ ರೀತಿಯ ನಿರ್ದೇಶನವು ನಿರೀಕ್ಷಿತ ಉದ್ಯೋಗಿಗಳನ್ನು ಉದ್ಯೋಗಗಳಿಗೆ ನೇಮಿಸಿಕೊಳ್ಳುವುದನ್ನು ತಡೆಯಬಹುದು ಎಂದು ಹೇಳಿದೆ.

ನೀತಿಯ ದೃಷ್ಟಿಕೋನಗಳನ್ನು ಪರಿಗಣಿಸಿ, ಅರ್ಜಿದಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಿದರೆ ಅದು ಸೂಕ್ತವಾಗಿರುತ್ತದೆ. ಅದರಂತೆ ಅರ್ಜಿಯನ್ನು ತಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.  ಸಂಕ್ಷಿಪ್ತ ವಿಚಾರಣೆಯ ಸಮಯದಲ್ಲಿ, ಯಾವುದೇ ನ್ಯಾಯಾಂಗ ಆದೇಶವು ಮಹಿಳೆಯರಿಗೆ ಪ್ರತಿಕೂಲವಾಗಿ ಸಾಬೀತುಪಡಿಸಬಹುದು ಎಂಬ ವಿಷಯದಲ್ಲಿ ಮಧ್ಯಪ್ರವೇಶಿಸಿದ ವಕೀಲರ ಅಭಿಪ್ರಾಯಗಳೊಂದಿಗೆ ಪೀಠವು ಒಲವು ತೋರಿತು.

ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅವರು ಹೇಳಿದ್ದರಲ್ಲಿ ಒಂದು ಪ್ರಧಾನ ಸಂಗತಿ ಇದೆ. ಮುಟ್ಟಿನ ರಜೆ ನೀಡುವಂತೆ ನೀವು ಉದ್ಯೋಗದಾತರನ್ನು ಒತ್ತಾಯಿಸಿದರೆ, ಅದು ಮಹಿಳೆಯರನ್ನು ನೇಮಿಸಿಕೊಳ್ಳುವುದರಿಂದ ಅವರನ್ನು ವಿಮುಖಗೊಳಿಸಬಹುದು. ಅಲ್ಲದೆ, ಇದು ಸ್ಪಷ್ಟವಾಗಿ ನೀತಿ ವಿಷಯವಾಗಿದೆ. ಆದ್ದರಿಂದ, ನಾವು ಈ ಬಗ್ಗೆ ನಿರ್ಧರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಕೀಲರಾದ ಶೈಲೇಂದ್ರ ಮಣಿ ತ್ರಿಪಾಠಿ ಅವರ ಪಿಐಎಲ್ 1961 ರ ಹೆರಿಗೆ ಪ್ರಯೋಜನಗಳ ಕಾಯಿದೆಯ ಮೇಲೆ ಅವರ ಋತುಚಕ್ರದ ಸಮಯದಲ್ಲಿ ಅವರ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ ರಜೆಯನ್ನು ಅನುಮತಿಸುವುದಕ್ಕಾಗಿ ಹರಸಾಹಸಪಟ್ಟಿತು.
ಹೆರಿಗೆಗೆ ಸಂಬಂಧಿಸಿದ ಮಹಿಳೆಯರು ಎದುರಿಸುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಕಾಯಿದೆಯು ಅವರ ನಿಜವಾದ ಉತ್ಸಾಹದಲ್ಲಿ ನಿಬಂಧನೆಗಳನ್ನು ಮಾಡುತ್ತದೆ ಎಂದು ತ್ರಿಪಾಠಿ ವಾದಿಸಿದ್ದಾರೆ.

ಕಾಯಿದೆಯ ನಿಬಂಧನೆಗಳು ಉದ್ಯೋಗದಾತರು ತಮ್ಮ ಮಹಿಳಾ ಉದ್ಯೋಗಿಗಳಿಗೆ ಅವರ ಗರ್ಭಾವಸ್ಥೆಯಲ್ಲಿ, ಗರ್ಭಪಾತದ ಸಂದರ್ಭದಲ್ಲಿ, ಟ್ಯೂಬೆಕ್ಟಮಿಯ ಹೊತ್ತಲ್ಲಿ, ಅನಾರೋಗ್ಯದ ಸಂದರ್ಭದಲ್ಲಿ ಮತ್ತು ವೈದ್ಯಕೀಯ ತೊಡಕುಗಳ ಸಂದರ್ಭದಲ್ಲಿ ನಿರ್ದಿಷ್ಟ ಸಂಖ್ಯೆಯ ದಿನಗಳವರೆಗೆ ವೇತನ ಸಹಿತ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರಗಳು ಈಕಾನೂನನ್ನು ಅನುಸರಿಸಲು ವಿಫಲವಾಗಿವೆ. ಹಾಗಾಗಿ ತಮ್ಮ ಕೆಲಸದ ಸ್ಥಳಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗದ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಗಾಗಿ ಸೂಕ್ತವಾದ ರಜೆ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನವನ್ನು ನೀಡುವಂತೆ ತ್ರಿಪಾಠಿ ನ್ಯಾಯಾಲಯವನ್ನು ಒತ್ತಾಯಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!