8.6 C
Munich
Wednesday, March 22, 2023

SVB Bankruptcy Latest Updates, Indian Startups, Mumbai SVC coopt Bank News Today In Kannada | SVB Bankrupt: ಎರಡೇ ದಿನದಲ್ಲಿ ಅಮೆರಿಕದ ಎಸ್​ವಿಬಿ ದಿವಾಳಿ; ಭಾರತೀಯ ಸ್ಟಾರ್ಟಪ್ಸ್​ಗೆ ಭೀತಿ; ಸಂಬಂಧವೇ ಇಲ್ಲದ ಸಹಕಾರಿ ಬ್ಯಾಂಕ್​ಗೂ ಫಜೀತಿ

ಓದಲೇಬೇಕು

Silicon Valley Bank Effect: ಫೋರ್ಬ್ಸ್ ಪಟ್ಟಿಯಲ್ಲಿ ಬೆಸ್ಟ್ ಬ್ಯಾಂಕ್ ಎನಿಸಿದ್ದ ಎಸ್​ವಿಬಿ ಎರಡನೇ ದಿನದಲ್ಲಿ ದಿವಾಳಿಯಾಗಿದ್ದು ಹೇಗೆ? ಭಾರತೀಯ ಸ್ಟಾರ್ಟಪ್​ಗಳು ಕಳವಳಪಡುತ್ತಿರುವುದು ಯಾಕೆ? ಸಂಬಂಧವೇ ಇಲ್ಲದ ಮುಂಬೈನ ಸಹಕಾರಿ ಬ್ಯಾಂಕ್ ಶಾಕ್ ಆಗಿದ್ದು ಯಾಕೆ? ತಪ್ಪದೇ ಓದಿ….

ಸಿಲಿಕಾನ್ ವ್ಯಾಲಿ ಬ್ಯಾಂಕ್

ನವದೆಹಲಿ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ (Silicon Valley Bank Bankruptcy) ಎದ್ದಿರುವುದು ಬಹಳಷ್ಟು ಸಂಚಲನವನ್ನೇ ಸೃಷ್ಟಿಸಿದೆ. ಅಮೆರಿಕದ ಬ್ಯಾಂಕಿಂಗ್ ವಲಯದ ಕಂಪನಿಗಳ ಷೇರುಗಳು ಅಲ್ಲಿಯ ಷೇರುಪೇಟೆಗಳಲ್ಲಿ ಭಾರೀ ಕುಸಿತ ಕಂಡಿವೆ. ಅದರ ಪರಿಣಾಮ ಭಾರತೀಯ ಬ್ಯಾಂಕುಗಳ ಷೇರುಗಳ ಮೇಲೂ ಆಗಿದೆ. ಇದು ಸಹಜ ಪರಿಣಾಮದ ಎಫೆಕ್ಟ್. ಆದರೆ, ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿರುವುದು ಭಾರತದ ಹಲವು ಸ್ಟಾರ್ಟಪ್​ಗಳಿಗೆ (Indian Startups) ಮತ್ತು ಅದರಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತಲೆ ಮೇಲೆ ಕೈಹೊತ್ತುಕೊಳ್ಳುವಂತೆ ಮಾಡಿದೆ. ಈ ಸ್ಟಾರ್ಟಪ್​ಗಳ ಬಹುತೇಕ ಹಣ ಎಸ್​​ವಿಬಿಯಲ್ಲಿ ಸಿಕ್ಕಿಕೊಂಡಿದೆ. ಈಗ ಹಣ ಹಿಂಪಡೆಯುವುದು ಹೇಗೆಂದು ದಾರಿ ತೋಚದಂತಾಗಿದೆ ಈ ಸ್ಟಾರ್ಟಪ್​ಗಳಿವೆ.

ಯಾವುವು ಈ ಸ್ಟಾರ್ಟಪ್​ಗಳು?

ಸಿಲಿಕಾನ್ ವ್ಯಾಲಿ ಬ್ಯಾಂಕ್ ನೂರಾರು ಸ್ಟಾರ್ಟಪ್​ಗಳಿಗೆ ಪರೋಕ್ಷವಾಗಿ ಫಂಡಿಂಗ್​ಗೆ ಹಣ ಕೊಟ್ಟಿದೆ. ವೈ ಕಾಂಬಿನೇಟರ್ (Y Combinator) ಎಂಬ ಹೂಡಿಕೆದಾರ ಸಂಸ್ಥೆಯಿಂದ ಬೆಂಬಲ ಪಡೆದು ಆರಂಭವಾದ ಸ್ಟಾರ್ಟಪ್​ಗಳ ಪೈಕಿ ಹೆಚ್ಚಿನವು ಎಸ್​ವಿಬಿಯಲ್ಲಿ ಹೆಚ್ಚಾಗಿ ಹಣ ಇರಿಸಿವೆ. ಇದರಲ್ಲಿ ಸುಮಾರು 60 ಭಾರತೀಯ ಸ್ಟಾರ್ಟಪ್ ಕಂಪನಿಗಳು ಇವೆ ಎನ್ನಲಾಗಿದೆ. ಈ ಸ್ಟಾರ್ಟಪ್​ಗಳು ತಮ್ಮ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ಇಟ್ಟಿದ್ದರೆ ತುಸು ಮಟ್ಟಿಗೆ ಉಸಿರಾಡಲು ಸಾಧ್ಯವಾಗುತ್ತಿತ್ತು. ಆದರೆ, ಹೆಚ್ಚಿನ ಕಂಪನಿಗಳು ಎಸ್​ವಿಬಿಯೊಂದರಲ್ಲೇ ತಮ್ಮೆಲ್ಲಾ ನಿಧಿಯನ್ನು ಇರಿಸಿರುವುದು ಕಳವಳಪಡುವಂತಾಗಿದೆ. ಈಗ ಈ ಸ್ಟಾರ್ಟಪ್​ಗಳ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಫಂಡಿಂಗ್ ಅನ್ನು ವೈ ಕಾಂಬಿನೇಟರ್ ಕಂಪನಿ ವ್ಯವಸ್ಥೆ ಮಾಡುತ್ತದಾ ಗೊತ್ತಿಲ್ಲ.

ಆದರೆ, ವೈ ಕಾಂಬಿನೇಟರ್​ನ ನೆರವಿನಿಂದ ಆರಂಭವಾದ ಎಲ್ಲಾ ಭಾರತೀಯ ಸ್ಟಾರ್ಟಪ್​ಗಳು ಎಸ್​ವಿಬಿ ಜೊತೆ ಜೋಡಿತವಾಗಿಲ್ಲ ಎಂಬುದು ನಿಜ. ರೇಜರ್ ಪೇ, ಮೀಶೋ, ಝೆಪ್​ಟೋ ಮೊದಲಾದ ಕಂಪನಿಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್ ಜೊತೆ ವ್ಯವಹಾರವನ್ನೇ ಹೊಂದಿಲ್ಲ.

ಇದನ್ನೂ ಓದಿAadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ

ಗಡಗಡ ನಡುಗಿದ ಮುಂಬೈನ ಸಹಕಾರಿ ಬ್ಯಾಂಕ್

ದೂರದ ಅಮೆರಿಕದಲ್ಲಿ ಆಗಿರುವ ಬೆಳವಣಿಗೆಯು ಸಿಲಿಕಾನ್ ವ್ಯಾಲಿ ಬ್ಯಾಂಕ್ ಜೊತೆ ಸಂಬಂಧವೇ ಇಲ್ಲದ ಮುಂವೈನ ಸಹಕಾರಿ ಬ್ಯಾಂಕೊಂದಕ್ಕೆ ಫಜೀತಿ ತಂದಿದೆ. 115 ವರ್ಷದ ಎಸ್​ವಿಸಿ ಕೋ ಆಪರೇಟಿವ್ ಬ್ಯಾಂಕ್ ಕೂಡ ಮುಚ್ಚಿಹೋಗುತ್ತದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೇಗೋ ಹಬ್ಬಿಹೋಗಿದೆ. ಅದಕ್ಕೆ ಕಾರಣ ಆ ಎರಡು ಬ್ಯಾಂಕುಗಳಲ್ಲಿರುವ ಸಾಮ್ಯತೆ. ಎಸ್​ವಿಬಿ ಬ್ಯಾಂಕಿನ ಹೆಸರು ಮುಂಬೈನ ಎಸ್​ವಿಸಿ ಬ್ಯಾಂಕಿಗೆ ಹೋಲಿಕೆಯಾಗುವುದರಿಂದ ಈ ಗೊಂದಲ ಏರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಗೊಂದಲ ನಿವಾರಣೆಗೆ ಎಸ್​ವಿಸಿ ಬ್ಯಾಂಕ್ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ನೀಡಬೇಕಾಯಿತು. ಕ್ಯಾಲಿಫೋರ್ನಿಯಾದಲ್ಲಿರುವ ಎಸ್​ವಿಬಿಗೂ ನಮ್ಮ ಎಸ್​ವಿಸಿ ಬ್ಯಾಂಕಿಗೂ ಯಾವುದೇ ಸಂಬಂಧ ಇಲ್ಲ. ಯಾರೋ ಕಿಡಿಗೇಡಿಗಳು ದುರುದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಸ್​ವಿಸಿ ಸಹಕಾರಿ ಬ್ಯಾಂಕು ಹೇಳಿಕೆ ಬಿಡುಗಡೆ ಮಾಡಿತು.

ಎಸ್​ವಿಬಿ ಪತನ ಹೇಗೆ?

ಸಿಲಿಕಾನ್ ವ್ಯಾಲಿ ಬ್ಯಾಂಕ್ ಹೆಚ್ಚಾಗಿ ತಂತ್ರಜ್ಞಾನ ಕಂಪನಿಗಳ ಜೊತೆ ವ್ಯವಹಾರ ಇಟ್ಟುಕೊಂಡ ಬ್ಯಾಂಕಿಂಗ್ ಸಂಸ್ಥೆ. ಅಮೆರಿಕದ ಸುಲಭ ಹಣಕಾಸು ನೀತಿಯೊಂದಿಗೆ ಸಂಪದ್ಭರಿತವಾಗಿ ಬೆಳೆದ ಬ್ಯಾಂಕು. ಡಿಜಿಟಲೀಕರಣದ ಪರಿಣಾಮವಾಗಿ ಸ್ಟಾರ್ಟಪ್​ಗಳಿಗೆ, ಕಂಪನಿಗಳಿಗೆ ಸಾಲ ನೀಡುವ ವ್ಯವಸ್ಥೆ ಬಹಳ ಸುಲಭಗೊಂಡಿತ್ತು. ಅಮೆರಿಕದ ಅತ್ಯುತ್ತಮ ಬ್ಯಾಂಕುಗಳ ಫೋರ್ಬ್ಸ್ ಪಟ್ಟಿಯಲ್ಲಿ ಎಸ್​ವಿಬಿಯೂ ಇತ್ತು. ಅದು ದಿವಾಳಿಯಾಗುವ 3 ದಿನದ ಹಿಂದಷ್ಟೇ ಪ್ರಕಟವಾಗಿದ್ದ ಫೋರ್ಬ್ಸ್ ಪಟ್ಟಿಯಲ್ಲಿ ಎಸ್​ವಿಬಿ ಹೆಸರೂ ಇತ್ತು. ಹಲವು ದೇಶಗಳಲ್ಲಿ ಎಸ್​ವಿಬಿ ವಿಸ್ತರಣೆಯಾಗಿದೆ. ಬೆಂಗಳೂರಿನಲ್ಲೂ ಎಸ್​ವಿಬಿ ಬ್ರ್ಯಾಂಚ್ ಇದೆ.

ಇದನ್ನೂ ಓದಿFoxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

ಎಸ್​ವಿಬಿ ಕುಸಿದುಬೀಳಲು ಕಾರಣವಾಗಿದ್ದು ಪ್ರಮುಖವಾಗಿ ಉಕ್ರೇನ್ ರಷ್ಯಾ ಯುದ್ಧ. ವಿಶ್ವಾದ್ಯಂತ ವಿವಿಧ ಅರ್ಥಿಕತೆಗಳ, ಅದರಲ್ಲೂ ಮುಂದುವರಿದ ದೇಶಗಳ ಹಣದುಬ್ಬರ ತೀವ್ರವಾಗಿ ಹೆಚ್ಚಾಗಲು ಈ ಯುದ್ಧ ಮುನ್ನುಡಿ ಬರೆದಿತ್ತು. ಹಣದುಬ್ಬರ ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕುಗಳು ಬಡ್ಡಿ ದರ ಏರಿಕೆ ಮಾಡುತ್ತಲೇ ಇವೆ. ಅಮೆರಿಕದ ಆರ್ಥಿಕತೆ ದುರ್ಬಲಗೊಳ್ಳುವ ಭೀತಿಯ ಮಧ್ಯೆ ಟೆಕ್ ಕಂಪನಿಗಳ ಉಬ್ಬಿದ ಮೌಲ್ಯ ಕಡಿಮೆ ಆಗತೊಡಗಿತ್ತು. ವೆಂಚರ್ ಕ್ಯಾಪಿಟಲ್ ರೂಪದಲ್ಲಿ ಟೆಕ್ ಸಂಸ್ಥೆಗಳಿಗೆ ಸಿಗುತ್ತಿದ್ದ ಸುಲಭ ಹಣ ಕಡಿಮೆ ಆಗತೊಡಗಿತು. ಅದರಲ್ಲೂ ಸಣ್ಣ ಟೆಕ್ ಕಂಪನಿಗಳಿಗಂತೂ ದೊಡ್ಡ ಹೊಡೆತವೇ ಬಿದ್ದಿತು. ಇದು ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತಕ್ಕೆ ಒಂದು ಹಿನ್ನೆಲೆ ಅಷ್ಟೇ. ಅಷ್ಟಕ್ಕೂ ಎಸ್​ವಿಬಿ ದಿವಾಳಿಯಾಗಲು ಕಾರಣವಾದ ಘಟನೆ ಇನ್ನೊಂದಿದೆ.

2023 ಮಾರ್ಚ್ 8ರಂದು ಅಮೆರಿಕದಲ್ಲಿ ಒಂದು ಸುದ್ದಿ ಹರಿದಾಡತೊಡಗಿತು. ಪೀಟರ್ ಥೀಲ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆ ಎಸ್​ವಿಬಿಯಿಂದ ಹಣ ಹಿಂಪಡೆಯುತ್ತಿದೆ ಎನ್ನುವಂತಹ ಸುದ್ದಿ. ಇದು ಸಿಲಿಕಾನ್ ವ್ಯಾಲಿಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಮೊದಲೇ ಆರ್ಥಿಕತೆಯ ಹಿನ್ನಡೆ ಭೀತಿಯಲ್ಲಿದ್ದ ಎಸ್​ವಿಬಿ ಗ್ರಾಹಕರು ಈ ಬೆಳವಣಿಗೆಯಿಂದ ಆತಂಕಗೊಂಡು ಎಸ್​ವಿಬಿಯಲ್ಲಿ ತಾವಿರಿಸಿದ್ದ ಠೇವಣಿಗಳನ್ನು ಹಿಂಪಡೆಯಲು ಆರಂಭಿಸಿದರು.

ಈ ದಿಢೀರ್ ಬೆಳವಣಿಗೆ ನಿರೀಕ್ಷಿಸದ ಬ್ಯಾಂಕು ತನ್ನ ಗ್ರಾಹಕರಿಗೆ ಸಮಾಧಾನಗೊಳಿಸಲು ಮಾಡಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಎರಡು ದಿನಗಳ ಬಳಿಕ, ಮಾರ್ಚ್ 10ರಂದು ಎಸ್​ವಿಬಿಯನ್ನು ಬ್ಯಾಂಕ್ರಪ್ಟ್ ಎಂದು ಘೋಷಿಸಲಾಯಿತು. ಅತ್ಯುತ್ತಮ ಬ್ಯಾಂಕ್ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಇದ್ದ ಬ್ಯಾಂಕೊಂದು ಎರಡನೇ ದಿನದಲ್ಲಿ ದಿವಾಳಿಯಾಗಿಹೋಗಿತ್ತು.

ಇದನ್ನೂ ಓದಿNBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ

ಬ್ಯಾಂಕಿಂಗ್ ಎಂಬ ಸಂಕೀರ್ಣತೆ

ಒಂದು ಬ್ಯಾಂಕು ಕುಸಿಯುವುದಕ್ಕೆ ಕೆಲವಾರು ಕಾರಣಗಳುಂಟು. ಭಾರತದಲ್ಲಿ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಕ್ರಮವಾಗಿ ಕೋಟ್ಯಂತರ ಸಾಲ ಪಡೆದು ವಂಚನೆ ಎಸಗಿದ ಪರಿಣಾಮ ಬಹಳಷ್ಟು ಬ್ಯಾಂಕುಗಳು ನಷ್ಟ ಮಾಡಿಕೊಂಡಿವೆ. ವಿಜಯ್ ಮಲ್ಯ, ನೀರವ್ ಮೋದಿ ಇತ್ಯಾದಿ ಹಲವರ ನಿದರ್ಶನಗಳಿವೆ. ಇದೇ ವೇಳೆ ಒಂದು ಸಾಮಾನ್ಯ ಬ್ಯಾಂಕ್ ಕುಸಿಯಲು ಪ್ರಮುಖ ಕಾರಣ ಎಂದರೆ ದಿಢೀರ್ ಹಣ ಹಿಂಪಡೆಯಲು ಯತ್ನಿಸಿದಾಗ.

ಬ್ಯಾಂಕುಗಳ ನೀಡುವ ಸಾಲ ದೀರ್ಘಾವಧಿಯದ್ದು. ಸಾಲಗಾರರು ತೀರಿಸುವವರೆಗೂ ಕಾಯಬೇಕು. ಆದರೆ, ಬ್ಯಾಂಕುಗಳಲ್ಲಿ ಇರಿಸುವ ಗ್ರಾಹಕರ ಹಣಕ್ಕೆ ಕನಿಷ್ಠ ಅವಧಿ ಎಂಬುದು ಅಷ್ಟಾಗಿ ಇರುವುದಿಲ್ಲ. ಗ್ರಾಹಕರು ಯಾವಾಗ ಬೇಕಾದರೂ ತಮ್ಮ ಹಣವನ್ನು ಹಿಂಪಡೆಯಲು ಯತ್ನಿಸಬಹುದು. ಒಂದು ವೇಳೆ ಬಹುಸಂಖ್ಯೆಯಲ್ಲಿ ಗ್ರಾಹಕರು ತಮ್ಮ ಹಣ ಹಿಂಪಡೆಯಲು ಮುಂದಾದಾಗ ಬ್ಯಾಂಕಿಗೆ ಹಣ ಹೊಂದಿಸಲು ಆಗುವುದಿಲ್ಲ. ಹೀಗಾಗಿ, ದಿವಾಳಿಯಾಗುತ್ತವೆ. ಭಾರತದಲ್ಲಿ ಕೆಲವಾರು ಸಹಕಾರಿ ಬ್ಯಾಂಕುಗಳ ಹೀಗೆ ದಿವಾಳಿಯಾದ ನಿದರ್ಶನಗಳುಂಟು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!