6.4 C
Munich
Friday, March 10, 2023

Taj: Divided By Blood Review Naseeruddin Shah Series get mixed review | ‘ವಾಸ್ತವತೆ ತಿರುಚಲಾಗಿದೆ​’; ನಸೀರುದ್ದೀನ್​ ಷಾ ನಟನೆಯ ‘ತಾಜ್: ಡಿವೈಡೆಡ್ ಬೈ ಬ್ಲಡ್​’ ಸೀರಿಸ್​ಗೆ ಮಿಶ್ರ ಪ್ರತಿಕ್ರಿಯೆ

ಓದಲೇಬೇಕು

ಅಕ್ಬರ್​ಗೆ ಮೂವರು ಮಕ್ಕಳು. ಈ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ನಿರ್ಧರಿಸುವ ಸಮಯ ಬರುತ್ತದೆ. ಇದೇ ವಿಚಾರ ಇಟ್ಟುಕೊಂಡು ‘ತಾಜ್​: ಡಿವೈಡೆಡ್​ ಬೈ ಬ್ಲಡ್​​’ ವೆಬ್​ ಸೀರಿಸ್​ ಸಿದ್ಧಗೊಂಡಿದೆ.

‘ತಾಜ್: ಡಿವೈಡೆಡ್ ಬೈ ಬ್ಲಡ್’ ತಂಡ

ಒಟಿಟಿ (OTT) ವ್ಯಾಪ್ತಿ ಹೆಚ್ಚಿದೆ. ಹಾಗೆಯೇ ಒಟಿಟಿ ಪ್ಲಾಟ್​ಫಾರ್ಮ್​ಗಳ ಮಧ್ಯೆ ಸ್ಪರ್ಧೆ ಕೂಡ ಹಿರಿದಾಗಿದೆ. ಈ ರೇಸ್​ನಲ್ಲಿ ಗೆಲ್ಲಲು ಹಲವು ರೀತಿಯ ವೆಬ್​ ಸೀರಿಸ್​ಗಳನ್ನು ಸಿದ್ಧಪಡಿಸಿ ವೀಕ್ಷಕರ ಮುಂದಿಡುವ ಪ್ರಯತ್ನ ಒಟಿಟಿ ಪ್ಲಾಟ್​ಫಾರ್ಮ್​​ಗಳಿಂದ ಆಗುತ್ತಿದೆ. ಕೆಲವು ಸಿನಿಮಾ/ಸೀರಿಸ್​​ಗಳು ನೈಜ ಘಟನೆ ಆಧರಿಸಿ ಸಿದ್ಧಗೊಂಡರೆ, ಇನ್ನೂ ಕೆಲವು ಕಾಲ್ಪನಿಕ ಕಥೆಗಳು. ಈಗ ಐತಿಹಾಸಿಕ ಘಟನೆ ಆಧರಿಸಿ ಸಿದ್ಧಗೊಂಡ ನಸೀರುದ್ದೀನ್ ಷಾ ನಟನೆಯ ‘ತಾಜ್: ಡಿವೈಡೆಡ್ ಬೈ ಬ್ಲಡ್’ (Taj: Divided By Blood) ವೆಬ್ ಸೀರಿಸ್ ಜೀ5 ಮೂಲಕ ಪ್ರಸಾರ ಕಂಡಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಕ್ಬರ್​ಗೆ ಮೂವರು ಮಕ್ಕಳು. ಈ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ನಿರ್ಧರಿಸುವ ಸಮಯ ಬರುತ್ತದೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಅಧಿಕಾರ ಸಿಗುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ, ಸಾಮರ್ಥ್ಯದ ಆಧಾರದಲ್ಲಿ ಉತ್ತಾಧಿಕಾರಿಯನ್ನು ​ಆಯ್ಕೆ ಮಾಡಲು ಅಕ್ಬರ್​ ಮುಂದಾಗುತ್ತಾನೆ. ಅಲ್ಲಿಂದ ಸಿಂಹಾಸನಕ್ಕಾಗಿ ಕಿತ್ತಾಟ ಆರಂಭ ಆಗುತ್ತದೆ. ಇದೇ ವಿಚಾರ ಇಟ್ಟುಕೊಂಡು ‘ತಾಜ್​: ಡಿವೈಡೆಡ್​ ಬೈ ಬ್ಲಡ್​​’ ವೆಬ್​ ಸೀರಿಸ್​ ಸಿದ್ಧಗೊಂಡಿದೆ.

ಮಾರ್ಚ್​ 3ಕ್ಕೆ ‘ತಾಜ್: ಡಿವೈಡೆಡ್ ಬೈ ಬ್ಲಡ್’ ರಿಲೀಸ್ ಆಗಲಿದೆ ಎಂದು ಜೀ5 ಕಡೆಯಿಂದ ಘೋಷಣೆ ಆಗಿತ್ತು. ಮಾರ್ಚ್​ 2ರ ತಡರಾತ್ರಿಯಿಂದಲೇ ಈ ವೆಬ್ ಸೀರಿಸ್ ವೀಕ್ಷಣೆಗೆ ಲಭ್ಯವಾಗಿದೆ. ಇದನ್ನು ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ನಸೀರುದ್ದೀನ್​ ಷಾ ಅವರು ಅಕ್ಬರ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅನಾರ್ಕಲಿ ಆಗಿ ಅದಿತಿ ರಾವ್ ಹೈದರಿ ಗಮನ ಸೆಳೆದಿದ್ದಾರೆ ಎನ್ನುವ ಮಾತು ವೀಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಈ ಸೀರಿಸ್​ನಲ್ಲಿ 10 ಎಪಿಸೋಡ್​ಗಳಿವೆ. ಮೊಘಲರು ಹೇಗೆ ಅವನತಿ ಕಂಡರು ಎಂಬುದನ್ನು ವಿವರಿಸಲಾಗಿದೆ.

ಇದನ್ನೂ ಓದಿಇದನ್ನೂ ಓದಿ:  ‘ಮೊಘಲರು ಲೂಟಿ ಮಾಡಲು ಬಂದವರಲ್ಲ, ಭಾರತಕ್ಕೆ ಅವರ ಕೊಡುಗೆಯೂ ಇದೆ’: ನಸೀರುದ್ದೀನ್​ ಷಾ

ಐತಿಹಾಸಿಕ ಘಟನೆಗಳನ್ನು ಹೇಳುವಾಗ ನೈಜತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದರೆ, ಈ ಸೀರಿಸ್​ನಲ್ಲಿ ವಿಚಾರಗಳನ್ನು ತಿರುಚಲಾಗಿದೆ ಎನ್ನುವ ಆರೋಪ ವೀಕ್ಷಕರಿಂದ ಬಂದಿದೆ. ‘ಶೋ ಚೆನ್ನಾಗಿದೆ. ಆದರೆ, ಇಲ್ಲಿ ವಾಸ್ತವ ಹುಡುಕಲು ಹೋಗಬೇಡಿ. ಕಥೆ ಮತ್ತು ಕಲ್ಪನೆಯ ಮಿಶ್ರಣ ಈ ಸೀರಿಸ್. ಇದು ಭಾರತದ ಗೇಮ್ ಆಫ್ ಥ್ರೋನ್ಸ್​’ ಎಂದು ಅನೇಕರು ಹೇಳಿದ್ದಾರೆ.  ಇನ್ನೂ ಕೆಲವರು ಈ ಸೀರಿಸ್​ನ ಮೇಕಿಂಗ್ ಹಾಗೂ ಪಾತ್ರಗಳ ಆಯ್ಕೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!