8.8 C
Munich
Monday, March 20, 2023

Tamil Actor Simbhu Praised Shiva Rajkumar Said He Is Legendary Actor And Rajinikanth Of Sandalwood | ಶಿವಣ್ಣನಂತೆ ನಟಿಸಲು ಆಗುವುದೇ ಇಲ್ಲ, ಅವರು ಕನ್ನಡದ ರಜನೀಕಾಂತ್: ತಮಿಳು ನಟನಿಂದ ಹೊಗಳಿಕೆಯ ಸುರಿಮಳೆ

ಓದಲೇಬೇಕು

ತಮಿಳು ನಟರೊಬ್ಬರು ನಟ ಶಿವರಾಜ್ ಕುಮಾರ್ ಅವರನ್ನು ಮನಸಾರೆ ಹೊಗಳಿರುವುದರ ಜೊತೆಗೆ ಶಿವರಾಜ್ ಕುಮಾರ್, ಕನ್ನಡ ಚಿತ್ರರಂಗದ ರಜನೀಕಾಂತ್ ಎಂದು ಹೇಳಿದ್ದಾರೆ.

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ (Shiva Rajkumar) ಕನ್ನಡ ಚಿತ್ರರಂಗಕ್ಕೆ (Sandalwood) ಮಾತ್ರವೇ ಸ್ಟಾರ್ ನಟರಲ್ಲ ಇತರೆ ಚಿತ್ರರಂಗದವರಿಗೂ ಅವರು ಸ್ಟಾರ್. ಸೆಲೆಬ್ರಿಟಿಗಳ ಸೆಲೆಬ್ರಿಟಿ ನಮ್ಮ ಶಿವಣ್ಣ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಗೌರವಿಸುವ ಪ್ರೀತಿಸುವ ಶಿವಣ್ಣನಿಗೆ ನೆರೆಯ ಚಿತ್ರರಂಗದಿಂದಲೂ ಅದೇ ಪ್ರೀತಿ-ಗೌರವ ಪ್ರಾಪ್ತಿಯಾಗುತ್ತದೆ. ಈ ಹಿಂದೆಯೇ ಹಲವು ನಟರು ಶಿವಣ್ಣನ ಮೇರು ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ತಮಿಳಿನ ಸ್ಟಾರ್ ನಟ ಸಿಂಭು (Simbhu).

ನಟ ಸಿಂಭು ನಟಿಸಿರುವ ಪತ್ತು ತಲ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಿಂಭು ಶಿವರಾಜ್ ಕುಮಾರ್ ಅವರನ್ನು ಮನಸಾರೆ ಹೊಗಳಿದ್ದಾರೆ ಮಾತ್ರವಲ್ಲ ಶಿವರಾಜ್ ಕುಮಾರ್, ಕನ್ನಡದ ರಜನೀಕಾಂತ್ ಎಂದಿದ್ದಾರೆ.

”ಮೊದಲಿಗೆ ನಾನು ಪತ್ತು ತಲಾ’ ಸಿನಿಮಾವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದೆ. ಏಕೆಂದರೆ ಇದು ಕನ್ನಡದ ಮಫ್ತಿ ಸಿನಿಮಾದ ರೀಮೇಕ್ ಆಗಿತ್ತು. ಅಲ್ಲಿ ಶಿವಣ್ಣ ಮಾಡಿದ್ದ ಪಾತ್ರವನ್ನು ನಾನು ಇಲ್ಲಿ ಮಾಡಬೇಕಿತ್ತು. ಕನ್ನಡ ಚಿತ್ರರಂಗದ ಲೆಜೆಂಡ್ ಶಿವಣ್ಣ. ಅವರು ನಟಿಸಿದಂತೆ ಈ ಪಾತ್ರದಲ್ಲಿ ನನ್ನಿಂದ ನಟಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿತ್ತು. ಶಿವಣ್ಣನ ನಟನೆಯ ಹತ್ತಿರಕ್ಕೂ ನನಗೆ ಬರಲಾಗುವುದಿಲ್ಲ. ಹಾಗಾಗಿ ನಾನು ಹಿಂದೇಟು ಹಾಕಿದೆ. ಶಿವಣ್ಣ ಅತ್ಯುತ್ತಮ ನಟ. ಅವರು ಕನ್ನಡ ಚಿತ್ರರಂಗದ ರಜನೀಕಾಂತ್” ಎಂದಿದ್ದಾರೆ ಸಿಂಭು.

ನಾನು ಈ ಸಿನಿಮಾವನ್ನು ಒಪ್ಪಿಕೊಳ್ಳಲು ಮುಖ್ಯ ಕಾರಣ ಗೌತಮ್, ಈ ಸಿನಿಮಾಕ್ಕಾಗಿ ನಾನು ತೂಕ ಹೆಚ್ಚಿಸಿಕೊಂಡೆ. ಬಹಳ ಕಷ್ಟಪಟ್ಟು ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಒಂದು ಹಂತದಲ್ಲಂತೂ ನಿರ್ಮಾಪಕರಿಗೆ ಹಣ ಮರಳಿಸಿಬಿಡುವ ಆಲೋಚನೆಯನ್ನೂ ಮಾಡಿದ್ದ ಎಂದು ನೆನಪು ಮಾಡಿಕೊಂಡಿದ್ದಾರೆ ಸಿಂಭು.

ಪತ್ತು ತಲಾ ಸಿನಿಮಾವು ಶಿವರಾಜ್ ಕುಮಾರ್ ನಟಿಸಿರುವ ಮಫ್ತಿ ಸಿನಿಮಾದ ರೀಮೇಕ್ ಆಗಿದ್ದು, ಮಫ್ತಿಯಲ್ಲಿ ಶಿವಣ್ಣ ನಟಿಸಿದ್ದ ಭೈರತಿ ರಣಗಲ್ ಪಾತ್ರದಲ್ಲಿ ಸಿಂಭು ನಟಿಸಿದ್ದಾರೆ. ಗೌತಮ್, ಶ್ರೀಮುರಳಿ ನಟಿಸಿದ್ದ ಪಾತ್ರದಲ್ಲ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಶಿವಣ್ಣನಂತೆಯೇ ಕಪ್ಪು ಬಣ್ಣದ ಶರ್ಟ್, ಪಂಚೆ ಧರಿಸಿ ಮರದ ಕುರ್ಚಿಯಲ್ಲಿ ಕುಳಿತ ಸಿಂಭು ಗಮನ ಸೆಳೆಯುತ್ತಿದ್ದಾರೆ.

ಇದೀಗ ಮಫ್ತಿಯಲ್ಲಿನ ಭೈರತಿ ರಣಗಲ್ ಪಾತ್ರವನ್ನೇ ಪ್ರಧಾನವಾಗಿರಿಸಿಕೊಂಡು ಸಿನಿಮಾ ಮಾಡಲು ನರ್ತನ್ ಮುಂದಾಗಿದ್ದು, ಸಿನಿಮಾದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿ ಆಗಿದೆ. ಆ ಸಿನಿಮಾಕ್ಕಾಗಿ ಶಿವಣ್ಣನ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಶಿವರಾಜ್ ಕುಮಾರ್ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ರಜನೀಕಾಂತ್ ಜೊತೆ ಜೈಲರ್ ಹಾಗೂ ಅವರ ಅಳಿಯ ಧನುಶ್​ ಜೊತೆಗೆ ಕ್ಯಾಪ್ಟನ್ ಮುಲ್ಲರ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಲವು ಕನ್ನಡ ಸಿನಿಮಾಗಳಿಗೂ ಶಿವಣ್ಣ ಸಹಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!