10.6 C
Munich
Friday, March 10, 2023

Tamil Actor Simbu Marrying Sri Lankan Buinessman Daughter Soon | Simbhu Marriage: ವಿದೇಶಿ ಉದ್ಯಮಿಯ ಪುತ್ರಿಯೊಟ್ಟಿಗೆ ತಮಿಳು ಸ್ಟಾರ್ ನಟ ಸಿಂಭು ವಿವಾಹ

ಓದಲೇಬೇಕು

ನಟ ಸಿಂಭು ವಿವಾಹದ ಬಗ್ಗೆ ಕಾಲಿವುಡ್​ನ ಗಲ್ಲಿಗಳಲ್ಲಿ ಗುಸು-ಗುಸು ಹಬ್ಬಿದ್ದು, ಭಾರತದ ನೆರೆಯ ದೇಶದ ಜನಪ್ರಿಯ ಉದ್ಯಮಿಯೊಬ್ಬರ ಮಗಳನ್ನು ಸಿಂಭು ವರಿಸಲಿದ್ದಾರೆ ಎನ್ನಲಾಗುತ್ತಿದೆ.

ತಮಿಳಿನ (Tamil) ಸ್ಟಾರ್ ನಟರಲ್ಲಿ ಒಬ್ಬರಾದ ಸಿಲಂಬರಸನ್ (Silambarasan) ಅಲಿಯಾಸ್ ಸಿಂಭುಗೆ ಕಂಕಣ ಭಾಗ್ಯ ತುಸು ತಡವಾಗಿ ಕೂಡಿಬಂದಂತಿದೆ. ತ್ರಿಶಾ (Trisha) ಸೇರಿದಂತೆ ಹಲವು ನಟಿಯರೊಟ್ಟಿಗೆ ಸಿಂಭು ಹೆಸರು ಕೇಳಿ ಬಂದಿತ್ತಾದರೂ ಈ ಪ್ರೇಮಕತೆಗಳ್ಯಾವುವು ಕಲ್ಯಾಣ ಮಂಟಪದ ಮೆಟ್ಟಿಲು ಹತ್ತಿರಲಿಲ್ಲ. ಈಗ ಕೊನೆಗೂ ಸಿಂಭು ಗೃಹಸ್ಥಾಶ್ರಮ ಸೇರುವ ಸಮಯ ಹತ್ತಿರ ಬಂದಂತಿದೆ.

ನಟ ಸಿಂಭು ವಿವಾಹದ ಬಗ್ಗೆ ಕಾಲಿವುಡ್​ನ ಗಲ್ಲಿಗಳಲ್ಲಿ ಗುಸು-ಗುಸು ಹಬ್ಬಿದ್ದು, ಭಾರತದ ನೆರೆಯ ದೇಶದ ಜನಪ್ರಿಯ ಉದ್ಯಮಿಯೊಬ್ಬರ ಮಗಳನ್ನು ಸಿಂಭು ವರಿಸಲಿದ್ದಾರೆ ಎನ್ನಲಾಗುತ್ತಿದೆ.

40 ವರ್ಷ ವಯಸ್ಸಿನ ಸಿಂಭು, ನೆರೆಯ ಶ್ರೀಲಂಕಾ ದೇಶದ ಜನಪ್ರಿಯ ಉದ್ಯಮಿಯೊಬ್ಬರ ಪುತ್ರಿಯನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಅದ್ಧೂರಿ ವಿವಾಹಕ್ಕೆ ಈಗಾಗಲೇ ಯೋಜನೆಗಳು ಶುರುವಾಗಿವೆಯಂತೆ.

ಶ್ರೀಲಂಕಾದ ತಮಿಳು ಕುಟುಂಬಕ್ಕೆ ಸೇರಿದ ಯುವತಿಯನ್ನೇ ಸಿಂಭು ವಿವಾಹವಾಗುತ್ತಿದ್ದು, ಸಿಂಭು ಮದುವೆಯಾಗಲಿರುವ ಯುವತಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದಾರಂತೆ. ಕಳೆದ ಕೆಲ ವರ್ಷಗಳಿಂದಲೂ ಇವರು ಪರಿಚಿತರೇ ಆಗಿದ್ದಾರೆ ಎಂಬ ಮಾತುಗಳು ಸಹ ಇವೆ.

ಸಿಂಭು, ತಮಿಳಿನ ಜನಪ್ರಿಯ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಟಿ ರಾಜೇಂದರ್ ಹಿರಿಯ ಪುತ್ರ. ಸಿಂಭುವಿನ ಕಿರಿಯ ಸಹೋದರಿ ಹಾಗೂ ಸಹೋದರನಿಗೆ ಮದುವೆಯಾಗಿದೆಯಾದರೂ ಸಿಂಭುಗೆ ಇನ್ನೂ ಆಗಿಲ್ಲ. ಇತ್ತಿಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಂಭು ತಂದೆ ರಾಜೇಂದರ್, ಸಿಂಭುಗೆ ಶೀಘ್ರದಲ್ಲಿಯೇ ಮದುವೆ ಮಾಡುವುದಾಗಿ ಹೇಳಿದ್ದಾರೆ. ಅದರ ನಡುವೆಯೇ ಈಗ ವಿವಾಹದ ಸುದ್ದಿ ಹರಿದಾಡುತ್ತಿದೆ.

ಇನ್ನು ನಟ ಸಿಂಭು ಹೆಸರು ಹಲವು ನಟಿಯರೊಟ್ಟಿಗೆ ಈ ಮುಂಚೆ ಕೇಳಿ ಬಂದಿತ್ತು. ಅದರಲ್ಲಿಯೂ ನಟಿ ನಯನತಾರಾ, ತ್ರಿಶಾ ಅವರುಗಳೊಟ್ಟಿಗೆ ಸಿಂಭು ಹೆಸರು ಹೆಚ್ಚಿಗೆ ಕೇಳಿಬಂದಿತ್ತು. ಆದರೆ ಆ ಪ್ರೇಮಕತೆಗಳೆಲ್ಲ ಗಾಸಿಪ್​ ಕಾಲಂಗಳಿಗೆ ಸರಕಾಗಿದ್ದು ಬಿಟ್ಟರೆ ಮದುವೆಯ ವರೆಗೂ ಮುಂದುವರೆಯಲಿಲ್ಲ. ಈಗಲಾದರೂ ಸಿಂಭು ವಿವಾಹವಾಗಲಿ ಎಂಬುದು ಅವರ ಅಭಿಮಾನಿಗಳ ಆಸೆ.

ಸಿಂಭು ಅವರ ಸಿನಿಮಾ ಸುದ್ದಿಗಳನ್ನು ಗಮನಿಸುವುದಾದರೆ, ತಮ್ಮ ತೂಕ, ದೇಹಪರಿಸ್ಥಿತಿಯ ಕಾರಣದಿಂದ ಕೆಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದ ಸಿಂಭು ಇದೀಗ ಬೌನ್ಸ್ ಬ್ಯಾಕ್ ಮಾಡಿದ್ದು ಸತತ ಪರಿಶ್ರಮದಿಂದ ಉತ್ತಮ ಶೇಪ್​ಗೆ ಮರಳಿದ್ದಾರೆ.

2021 ರ ಅಂತ್ಯದಲ್ಲಿ ಬಿಡುಗಡೆ ಆದ ಸಿಂಭು ನಟನೆಯ ‘ಮಾನಾಡು’ ಸಿನಿಮಾ ಹಿಟ್ ಎನಿಸಿಕೊಂಡಿತು. ಆ ನಂತರ ಬಂದ ‘ವೆಂದು ತಣಿದತು ಕಾಡು’ ಸಿನಿಮಾ ಸಹ ಹಿಟ್ ಆಗುವ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯಿತು. ಇದೀಗ ಪತ್ತು ತಲ ಹೆಸರಿನ ಸಿನಿಮಾದಲ್ಲಿ ಸಿಂಭು ನಟಿಸುತ್ತಿದ್ದಾರೆ. ಇದು ಕನ್ನಡದ ‘ಮಫ್ತಿ’ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ.

ಮತ್ತಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!