11.9 C
Munich
Tuesday, March 21, 2023

Tamil Nadu BJP chief K Annamalai Says Will quit if BJP leadership decides to align with AIADMK | K Annamalai: ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಪಕ್ಷ ತೊರೆಯುವೆ: ಕೆ ಅಣ್ಣಾಮಲೈ

ಓದಲೇಬೇಕು

ಒಂದೊಮ್ಮೆ ಭಾರತೀಯ ಜನತಾ ಪಕ್ಷವು ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ನಾನು ಪಕ್ಷ ತೊರೆಯುತ್ತೇನೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ

ಕೆ ಅಣ್ಣಾಮಲೈ

Image Credit source: The Hindu

ಒಂದೊಮ್ಮೆ ಭಾರತೀಯ ಜನತಾ ಪಕ್ಷವು ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ನಾನು ಪಕ್ಷ ತೊರೆಯುತ್ತೇನೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಪಕ್ಷದಲ್ಲಿರುವುದಿಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಅಣ್ಣಾಮಲೈ ಅವರ ಈ ಅಭಿಪ್ರಾಯಕ್ಕೆ ಸಭೆಯಲ್ಲಿ ಪರ-ವಿರೋಧ ಎರಡೂ ಅಭಿಪ್ರಾಯಗಳು ಕೂಡ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ಬಿಜೆಪಿಯ ಐಟಿ ವಿಭಾಗದ ಹಲವು ಪದಾಧಿಕಾರಿಗಳು ಬಿಜೆಪಿಗೆ ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದರು. ಈ ವಿಷಯದಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ವಾಕ್ಸಮರ ನಡೆದಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದ್ರಾವಿಡ ಪಕ್ಷಗಳ ನಡುವೆ ಜನರಿಗೆ ಪ್ರಮುಖ ಆಯ್ಕೆ ನಾವಾಗಬೇಕೆ ವಿನಃ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ಮಾತ್ರವೇ ಉತ್ತಮ ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕೀಯದ ವಿರುದ್ಧ ಸ್ಪಷ್ಟನಿಲುವುಗಳನ್ನು ಜನರ ಮುಂದಿಡಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಬಿಹಾರ ವಲಸಿಗರ ಮೇಲಿನ ದಾಳಿ ವದಂತಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

ನಾವು ರಾಜ್ಯದಲ್ಲಿ ನೆಲೆ ಕಾಣಬೇಕಾದರೆ ಏಕಾಂಗಿಯಾಗಿ ಕಣಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಎಐಎಡಿಎಂಕೆಯ (AIADMK) ಕಿರಿಯ ಮಿತ್ರನಾಗಿ ಇರಲು ಅಲ್ಲ ಎಂದರು.
ಅಣ್ಣಾಮಲೈ ಅವರ ಭಾಷಣಕ್ಕೆ ಇತರ ಪದಾಧಿಕಾರಿಗಳ ಬೆಂಬಲ ಸಿಕ್ಕಿದ್ದು, ಬಿಜೆಪಿ ಸ್ವಂತವಾಗಿ ಚುನಾವಣೆ ಎದುರಿಸಬೇಕು ಎಂದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಮೈತ್ರಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ಸಮಯ ಕೇಳಿರುವುದಾಗಿ ಅಣ್ಣಾಮಲೈ ಅವರು ಸಭೆಯಲ್ಲಿ ತಿಳಿಸಿದ್ದಾರೆ. ಎಐಎಡಿಎಂಕೆ ಮತ್ತು ಬಿಜೆಪಿ ಎರಡೂ 2024ರ ಲೋಕಸಭೆ ಚುನಾವಣೆಗೂ ತಮ್ಮ ಮೈತ್ರಿ ಮುಂದುವರಿಯಲಿದೆ ಎಂದು ಹೇಳುತ್ತಿರುವುದರ ನಡುವೆ ಅಣ್ಣಾಮಲೈ ಈ ಹೇಳಿಕೆ ನೀಡಿರುವುದು ಮಹತ್ವವೆನಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!