7.3 C
Munich
Monday, March 20, 2023

Tamil Nadu Chief Minister MK Stalin slams PM Narendra Modi and state’s Governor RN Ravi | ವಿಪಕ್ಷ ನಾಯಕರ ಮಾತುಗಳನ್ನು ಸಂಸತ್​​ ದಾಖಲೆಯಿಂದ ತೆಗೆದುಹಾಕಬಹುದು, ಜನರ ಮನಸ್ಸಿನಿಂದ ಅಲ್ಲ: ಎಂಕೆ ಸ್ಟಾಲಿನ್

ಓದಲೇಬೇಕು

ಜಾರಿ ನಿರ್ದೇಶನಾಲಯವು ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದೆ ಎಂಬ ಪ್ರಧಾನಿಯವರ ಹೇಳಿಕೆ ತಪ್ಪೊಪ್ಪಿಗೆ. ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಪ್ರತಿಪಕ್ಷಗಳ ವಿರುದ್ಧ ಸೇಡಿನ ರಾಜಕಾರಣ ಮಾಡುವುದನ್ನು ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಇದು ದೇಶಕ್ಕೆ ಒಳ್ಳೆಯದಲ್ಲ.

ನರೇಂದ್ರ ಮೋದಿ ಜತೆ ಎಂಕೆ ಸ್ಟಾಲಿನ್

ಚೆನ್ನೈ: ಇತ್ತೀಚೆಗೆ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಎತ್ತಿರುವ ಹಲವು ಪ್ರಶ್ನೆಗಳು ಸೇರಿದಂತೆ ಯಾರ ಪ್ರಶ್ನೆಗಳಿಗೂ ಉತ್ತರಿಸದೆ ಗಂಟೆಗಟ್ಟಲೆ ಮಾತನಾಡುವ ಕಲೆಯನ್ನು ನಾನು ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi)ಕಲಿತಿದ್ದೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್(MK Stalin) ಕುಟುಕಿದ್ದಾರೆ. ಪ್ರಧಾನಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹಲವಾರು ಆರೋಪಗಳಿವೆ, ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ, ಜನರ ನಂಬಿಕೆಯೇ ತಮ್ಮ ರಕ್ಷಣಾತ್ಮಕ ಗುರಾಣಿ ಎಂದು ಅವರು ಹೇಳುತ್ತಾರೆ, ಜನರು ಹಾಗೆ ಯೋಚಿಸುವುದಿಲ್ಲ,” ಎಂದಿದ್ದಾರೆ ಸ್ಟಾಲಿನ್. ಪ್ರಧಾನಮಂತ್ರಿಯವರ ಭಾಷಣವು “ವಾಕ್ಚಾತುರ್ಯದಿಂದ ತುಂಬಿದೆ. ಆದರೆ ಬಿಬಿಸಿ ಸಾಕ್ಷ್ಯಚಿತ್ರ (2002 ರ ಗುಜರಾತ್ ಗಲಭೆಗಳ ಕುರಿತು) ಅಥವಾ ಅದಾನಿ ವಿಷಯ(ಅದಾನಿ ಸಮೂಹದ ಕಂಪನಿಗಳಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳು) ಬಗ್ಗೆ ಯಾವುದೇ ವಿವರಣೆಯನ್ನು ಹೊಂದಿಲ್ಲ.

ಅದಾನಿ ಗುಂಪಿನ ವಿರುದ್ಧದ ಆರೋಪಗಳು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನೇರ ಆರೋಪಗಳಾಗಿವೆ. ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಕೂಡ ಪ್ರಕರಣವನ್ನು ಗಂಭೀರವಾಗಿ ವಿಚಾರಣೆ ನಡೆಸುತ್ತಿದೆ, ಆದ್ದರಿಂದ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಮತ್ತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆದೇಶಿಸಬೇಕು ಎಂದು ಎಂಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.

ಸಂಸತ್​​ನಲ್ಲಿ ರಾಹುಲ್ ಗಾಂಧಿಯವರು ಪ್ರಶ್ನೆಗಳನ್ನು  ಕೇಳಿದರು.ಆದರೆ ಅವರ ಭಾಷಣದ ಭಾಗಗಳನ್ನು ಸ್ಪೀಕರ್ ತೆಗೆದು ಹಾಕಿದರು. ಆ ಪ್ರಶ್ನೆಗಳು ಮಾನ್ಯವಾಗಿದ್ದವು. ಆದರ ಪ್ರಧಾನಿ ಈ ಆರೋಪಗಳ ಬಗ್ಗೆ ಒಂದೇ ಒಂದು ಮಾತು ಆಡದಿರುವುದು ನನಗೆ ಆಘಾತವುಂಟು ಮಾಡಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳನ್ನು ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂಬ ಟೀಕೆಗಳ ಬಗ್ಗೆ ಮಾತನಾಡಿದ ಸ್ಟಾಲಿನ್, ಅವರು ದಾಖಲೆಯಿಂದ ಹೊರ ಹಾಕಬಹುದು. ಆದರೆ ಜನರ ಮನಸ್ಸಿನಿಂದ ಹೊರಗೆ ಹಾಕಲಾಗುವುದಿಲ್ಲ ಎಂದಿದ್ದಾರೆ.

ಜಾರಿ ನಿರ್ದೇಶನಾಲಯವು ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದೆ ಎಂಬ ಪ್ರಧಾನಿಯವರ ಹೇಳಿಕೆ ತಪ್ಪೊಪ್ಪಿಗೆ. ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಪ್ರತಿಪಕ್ಷಗಳ ವಿರುದ್ಧ ಸೇಡಿನ ರಾಜಕಾರಣ ಮಾಡುವುದನ್ನು ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಇದು ದೇಶಕ್ಕೆ ಒಳ್ಳೆಯದಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದಿದ್ದಾರೆ ಸ್ಟಾಲಿನ್.

ಸೇತುಸಮುದ್ರಂ ಹಡಗು ಕಾಲುವೆ ಯೋಜನೆಗೆ ಸಂಬಂಧಿಸಿದಂತೆ ಡಿಎಂಕೆಯ ಪ್ರಶ್ನೆಗಳಿಗೂ ಪ್ರಧಾನಿ ಪ್ರತಿಕ್ರಿಯಿಸಲಿಲ್ಲ. ಈ ಯೋಜನೆಯು 2007 ರಿಂದ ತಡೆಹಿಡಿಯಲ್ಪಟ್ಟಿದೆ. ಇದನ್ನು ತಕ್ಷಣವೇ ಪುನರುಜ್ಜೀವನಗೊಳಿಸಿ ಜಾರಿಗೆ ತರಲು ಡಿಎಂಕೆ ಕೇಂದ್ರವನ್ನು ಒತ್ತಾಯಿಸಿದೆ. ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಿಂದ (NEET) ವಿನಾಯಿತಿ ಕೋರುವ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ, ರಾಜ್ಯಗಳ ಹಕ್ಕುಗಳು, ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ತಮಿಳುನಾಡು ರಾಜ್ಯಪಾಲರ ಆಪಾದಿತ ಹಸ್ತಕ್ಷೇಪಗಳು ಮತ್ತು ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡದಿರುವುದು ಈ ಬಗ್ಗೆ ಡಿಎಂಕೆ ಪ್ರಶ್ನೆ ಕೇಳಿದ್ದರೂ ತಮಿಳುನಾಡಿನ ಬಗ್ಗೆ ಪ್ರಧಾನಿಗೆ ಏನೂ ಹೇಳಲು ಇರಲಿಲ್ಲ. ಅದೇ ವೇಳೆ ತಾವು ಈಡೇರಿಸಿದ ಭರವಸೆಗಳನ್ನು ಪ್ರಧಾನಿ ಪಟ್ಟಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್,, ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ಅಗೌರವಿಸಿದ್ದಾರೆ ಎಂದು ಹೇಳಿದರು.

ಆನ್‌ಲೈನ್ ಗೇಮಿಂಗ್‌ನಲ್ಲಿ ಜನರು ಸಿಕ್ಕಿಬಿದ್ದ ಕಾರಣ ಕಳೆದ ವಾರದಲ್ಲಿ ನಾಲ್ಕು ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ರಾಜ್ಯಪಾಲರಿಗೆ ಅವುಗಳ ಬಗ್ಗೆ ತಿಳಿದಿಲ್ಲವೇ ಎಂದು ಕೇಳಿದರು. ಅಂತಹ ಕಾನೂನನ್ನು ತರಲು ಮದ್ರಾಸ್ ಹೈಕೋರ್ಟ್ ಸೂಚಿಸಿದೆ ಎಂದು ಅವರು ಹೇಳಿದರು. ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರು ಮೂರು ತಿಂಗಳಾದರೂ ಮಸೂದೆಗೆ ಒಪ್ಪಿಗೆ ನೀಡದಿರುವುದು ಅಚ್ಚರಿಯುಂಟು ಮಾಡಿದೆ ಎಂದಿದ್ದಾರೆ ಸ್ಟಾಲಿನ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!