7.4 C
Munich
Thursday, March 9, 2023

Telugu Actor Manchu Manoj second Wedding With politician Daughter Mounika Reddy | Manchu Manoj Wedding: ರಾಜಕಾರಣಿ ಪುತ್ರಿಯೊಟ್ಟಿಗೆ ತೆಲುಗು ನಟ ಮಂಚು ಮನೋಜ್ ಎರಡನೇ ಮದುವೆ

ಓದಲೇಬೇಕು

ತೆಲುಗು ಚಿತ್ರರಂಗದ ನಟ ಮಂಚು ಮನೋಜ್ ಆಂಧ್ರದ ಜನಪ್ರಿಯ ರಾಜಕಾರಣಿಯ ಪುತ್ರಿ ಮೌನಿಕಾ ಅವರೊಟ್ಟಿಗೆ ವಿವಾಹವಾಗುತ್ತಿದ್ದಾರೆ. ಮಂಚು ಮನೋಜ್​ಗೆ ಇದು ಎರಡನೇ ಮದುವೆ.

ಮಂಚು ಮನೋಜ್-ಮೌನಿಕಾ

ತೆಲುಗಿನ ಮಂಚು ಕುಟುಂಬದ ಕುಡಿ, ಹಿರಿಯ ನಟ ಮೋಹನ್​ಬಾಬು ಪುತ್ರ ಮಂಚು ಮನೋಜ್ (Manchu Manoj) ಅವರು ಎರಡನೇ ಬಾರಿ ಹಸೆ ಮಣೆ ಏರುತ್ತಿದ್ದಾರೆ. ಈ ಹಿಂದೆ 2015 ರಲ್ಲಿ ಪ್ರಣಿತಿ ರೆಡ್ಡಿಯನ್ನು ವಿವಾಹವಾಗಿದ್ದ ಮನೋಜ್, 2019 ರಲ್ಲಿ ಅವರಿಂದ ದೂರಾಗಿದ್ದರು. ಇದೀಗ ರಾಜಕಾರಣಿ ಪುತ್ರಿಯೊಬ್ಬರನ್ನು ಮನೋಜ್ ವಿವಾಹವಾಗುತ್ತಿದ್ದು(Marriage) , ನಾಳೆ ಮುಹೂರ್ತ ನಡೆಯಲಿದೆ.

ಆಂಧ್ರ ಪ್ರದೇಶದ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಭೂಮಿ ನಾಗ ರೆಡ್ಡಿ ಅವರ ಪುತ್ರಿ ಭೂಮಿ ಮೌನಿಕ ಅವರನ್ನು ವಿವಾಹವಾಗುತ್ತಿದ್ದು, ಇಂದು ಅರಿಶಿಣ ಶಾಸ್ತ್ರ ನಡೆಯುತ್ತಿವೆ. ತಾವು ಮದುವೆಯಾಗುತ್ತಿರುವ ಮೌನಿಕ ಅವರ ಚಿತ್ರವನ್ನು ಇಂದಷ್ಟೆ ಮಂಚು ಮನೋಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಂಚು ಮನೋಜ್ ಮದುವೆಯಾಗುತ್ತಿರುವ ಮೌನಿಕಾಗೂ ಸಹ ಇದು ಎರಡನೇ ವಿವಾಹ. ಈ ಹಿಂದೆ ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದ ಮೌನಿಕಾಗೆ ಒಬ್ಬ ಗಂಡು ಮಗನಿದ್ದಾನೆ. ಇದೀಗ ಈ ಇಬ್ಬರೂ ಮದುವೆಯಾಗುತ್ತಿದ್ದಾರೆ.

ಮೂಲಗಳ ಪ್ರಕಾರ ಫೆಬ್ರವರಿ 23 ರಂದೇ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಎರಡನೇ ಮದುವೆಯಾದರೂ ಬಹು ಅದ್ಧೂರಿಯಾಗಿಯೇ ವಿವಾಹ ಕಾರ್ಯಗಳು ನಡೆಯುತ್ತಿವೆ. ಮಂಚು ಮನೋಜ್​ರ ಸಹೋದರಿ ಲಕ್ಷ್ಮಿ ಮಂಚು ಸಹ ತಮ್ಮ ಸಹೋದರನ ಮದುವೆಯ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್ 3 ರಂದು ಅರಿಶಿಣ ಶಾಸ್ತ್ರ ನಡೆಯುತ್ತಿದ್ದು, ಮಾರ್ಚ್ 4 ರಂದು ವಿವಾಹ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ.

ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮಂಚು ಮನೋಜ್, 2019 ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗಷ್ಟೆ ತಾವು ಮತ್ತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೆ ವಿವಾಹವೂ ಆಗುತ್ತಿದ್ದಾರೆ.

ಮಂಚು ಮನೋಜ್, ತೆಲುಗಿನ ಹಿರಿಯ ನಟ ಮೋಹನ್​ ಬಾಬು ಪುತ್ರ. ಇವರ ಸಹೋದರ ಮಂಚು ವಿಷ್ಣು ಸಹ ತೆಲುಗಿನ ಜನಪ್ರಿಯ ನಟರಲ್ಲೊಬ್ಬರು. ಜೊತೆಗೆ ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷರು ಸಹ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!