ಚಪ್ಪಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಟ್ರಾಕ್ಟರ್ ಇದ್ದಕ್ಕಿದ್ದಂತೆ ತಾನಾಗಿಯೇ ಸ್ಟಾರ್ಟ್ ಆಗಿ ಅಂಗಡಿಯೊಳಗೆ ನುಗ್ಗಿದೆ. ಘಟನೆಯಲ್ಲಿ ಶೋರೂಮ್‌ನ ಗ್ಲಾಸ್ಗಳು ಪುಡಿ ಪುಡಿಯಾಗಿವೆ.
ಅಂಗಡಿಗೆ ನುಗ್ಗಿದ ಚಾಲಕನಿಲ್ಲದ ಟ್ಯಾಕ್ಟರ್
ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವಂತಹ, ಭಯ ಭೀತರನ್ನಾಗಿಸುವ ವಿಡಿಯೋಗಳು ಹರಿದಾಡುತ್ತಿರುತ್ತವೆ. ಪಾರ್ಕ್ ಮಾಡಲಾಗಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆಯೇ ಸ್ಟಾರ್ಟ್ ಆಗಿ ಅಂಗಡಿಯೊಂದಕ್ಕೆ ನುಗ್ಗಿ ಅಂಗಡಿಯ ಮುಂಭಾಗದ ಗಾಜನ್ನು ಪೀಸ್ ಪೀಸ್ ಮಾಡಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎದೆ ಜಲ್ ಎನಿಸುವಂತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಚಪ್ಪಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಟ್ರಾಕ್ಟರ್ ಇದ್ದಕ್ಕಿದ್ದಂತೆ ತಾನಾಗಿಯೇ ಸ್ಟಾರ್ಟ್ ಆಗಿ ಅಂಗಡಿಯೊಳಗೆ ನುಗ್ಗಿದೆ. ಘಟನೆಯಲ್ಲಿ ಶೋರೂಮ್‌ನ ಗ್ಲಾಸ್ಗಳು ಪುಡಿ ಪುಡಿಯಾಗಿವೆ. ಹಾಗೂ ಹಲವು ಸೈಕಲ್‌ಗಳು ಜಖಂಗೊಂಡಿವೆ. ಟ್ವಿಟ್ಟರ್ ಖಾತೆಯೊಂದರಲ್ಲಿ ಒಂದು ನಿಮಿಷದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಟ್ರಾಕ್ಟರ್ ಅಂಗಡಿಯೊಳಕ್ಕೆ ನುಗ್ಗುತ್ತಿರುವುದು ತಿಳಿಯುತ್ತಿದ್ದಂತೆ ಅಂಗಡಿಯವರು ಭಯದಿಂದ ಹೊರಗೆ ಓಡಿ ಟ್ರ್ಯಾಕ್ಟರ್ ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಅಷ್ಟರಲ್ಲಾಗಲೇ ಟ್ರ್ಯಾಕ್ಟರ್ ಮತ್ತಷ್ಟು ಮುಂದಕ್ಕೆ ಬಂದು ಅಂಗಡಿಯ ಗಾಜನ್ನು ಪುಡಿ ಮಾಡಿತ್ತು. ಕೊನೆಗೆ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಹೋಗಿ ಟ್ರ್ಯಾಕ್ಟರ್ ಎಂಜಿನ್ ಆಫ್ ಮಾಡುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಈ ಮಳಿಗೆಯವರಿಗೆ ಸಾಕಷ್ಟು ನಷ್ಟವಾಗಿದೆ. ಹಾಗೂ ಕೆಲವು ಸೈಕಲ್‌ಗಳು ಪುಡಿ ಪುಡಿಯಾಗಿವೆ.
ಇದನ್ನೂ ಓದಿ: Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್
#Tarzan #tractor #bijnaur #CCTV #बिजनौर में जब बिना चालक के अचानक चल पड़ा ट्रैक्टर pic.twitter.com/MCl6RK3ORE
— Preety Pandey Bhardwaj (@prreeti1) March 3, 2023
ಸಮಾಧಾನ್ ದಿವಸ್ ಕಾರ್ಯಕ್ರಮ ನಡೆಯುತ್ತಿದ್ದ ಬಿಜ್ನೋರ್ ಕೊತ್ವಾಲಿ ಸಿಟಿ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಅನೇಕರು ತಮ್ಮ ಕಾರುಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಆ ಪ್ರದೇಶದಲ್ಲಿ ಪಾರ್ಕ್ ಮಾಡಿ ಕಾರ್ಯಕ್ರಮಕ್ಕೆ ತೆರಳಿದ್ದರು. ಕಿಶನ್ ಕುಮಾರ್ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಇಷ್ಟೊಂದು ಅವಘಡಕ್ಕೆ ಕಾರಣವಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ