11.4 C
Munich
Thursday, March 30, 2023

ttd to inaugurate its second temple in Chennai, know more details | Tirupati: ಚೆನ್ನೈನಲ್ಲಿ ನಿರ್ಮಾಣವಾಯ್ತು ತಿರುಪತಿ ತಿಮ್ಮಪ್ಪನ ಎರಡನೇ ದೇವಾಲಯ, ಮಾರ್ಚ್​ 17ಕ್ಕೆ ಉದ್ಘಾಟನೆ

ಓದಲೇಬೇಕು

ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಚೆನ್ನೈನಲ್ಲಿ ತನ್ನ ಎರಡನೇ ದೇವಸ್ಥಾನವನ್ನು ನಿರ್ಮಿಸಿದೆ.

ತಿರುಪತಿ ದೇವಸ್ಥಾನ

Image Credit source: Wikipedia

ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಚೆನ್ನೈನಲ್ಲಿ ತನ್ನ ಎರಡನೇ ದೇವಸ್ಥಾನವನ್ನು ನಿರ್ಮಿಸಿದೆ. ತಿರುಪತಿ ತಿರುಮಲ ದೇವಸ್ಥಾನವು ವಿಶ್ವದ ಶ್ರೀಮಂತ ದೇವಸ್ಥಾನ ಎನಿಸಿಕೊಂಡಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಟಿಟಿಡಿಯ ಎರಡನೇ ದೇವಸ್ಥಾನ ನಿರ್ಮಾಣವಾಗಿದ್ದು, ಮಾರ್ಚ್​ 17ರಂದು ತೆರೆಯಲಾಗುತ್ತದೆ. ಚೆನ್ನೈನ ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ ಸ್ಥಾಪಿಸಲಾದ ಈ ಹೊಸ ದೇವಾಲಯವು ಟಿಟಿಡಿಯ ಎರಡನೇ ದೇವಾಲಯವಾಗಿದೆ. ಇದು ಟಿ ನಗರದ ವೆಂಕಟನಾರಾಯಣ ರಸ್ತೆಯಲ್ಲಿರುವ ಟಿಟಿಡಿಯ ಮೊದಲ ದೇವಸ್ಥಾನ ಹಾಗೂ ಮಾಹಿತಿ ಕೇಂದ್ರಕ್ಕೆ ಬಹಳ ಹತ್ತಿರದಲ್ಲಿದೆ.

ಈ ದೇವಾಲಯವು ವೆಂಕಟೇಶ್ವರನ ದೈವಿಕ ಪತ್ನಿ ಪದ್ಮಾವತಿ ಅಮ್ಮನವರಿಗೆ ಸಮರ್ಪಿತವಾಗಿದೆ. ಚೆನ್ನೈನ ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ದಕ್ಷಿಣ ಭಾರತದ ಚಲನಚಿತ್ರ ನಟಿ ಪಿ ಕಾಂಚನಾ ಅವರು 14,880 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ದೇವಸ್ಥಾನಕ್ಕಾಗಿ ಧಾನ ಮಾಡಿದ್ದಾರೆ.

ಮತ್ತಷ್ಟು ಓದಿ: TTD Assets: ತಿರುಪತಿ ತಿಮ್ಮಪ್ಪನ ಒಟ್ಟು ಆಸ್ತಿ ಎಷ್ಟು? ಅದರ ಮೌಲ್ಯವೆಷ್ಟು, ಇರುವ ಬಂಗಾರವೆಷ್ಟು? ಇಲ್ಲಿದೆ ಮಾಹಿತಿ

ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಾಲಯವನ್ನು ತೆರೆಯುವ ಮೊದಲು ಅಂಕುರಾರ್ಪಣದೊಂದಿಗೆ ಅನೇಕ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ. ಮಾರ್ಚ್​ 17 ರಂದು ಮಹಾಕುಂಭಾಭಿಷೇಕದೊಂದಿಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಮುಕ್ತಾಯಗೊಳ್ಳಲಿವೆ.

ಮಾರ್ಚ್​ 17 ರಂದು ನಡೆಯುವ ಶ್ರೀ ಪದ್ಮಾವತಿ ಅಮ್ಮನವರ ಮಹಾಕುಂಭಾಭಿಷೇಕದಲ್ಲಿ ಎಲ್ಲಾ ಭಕ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ವಿಷ್ಣುವಿನ ಅವತಾರವಾದ ವೆಂಕಟೇಶ್ವರನ ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನವು ತಮಿಳುನಾಡಿನ ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!