11.9 C
Munich
Friday, March 10, 2023

Turkey Earthquake: Chilling 180,000 dead estimate given by earthquake expert assessing Turkey, Syria tragedy | Turkey Earthquake: ಟರ್ಕಿಯಲ್ಲಿ 4 ಭೂಕಂಪ: ಅವಶೇಷಗಳಡಿ 1,80,000 ಮಂದಿ ಸಿಲುಕಿರುವ ಶಂಕೆ, ಎಲ್ಲರೂ ಮೃತಪಟ್ಟಿರುವ ಸಾಧ್ಯತೆ

ಓದಲೇಬೇಕು

ಟರ್ಕಿ ಹಾಗೂ ಸಿರಿಯಾದಲ್ಲಿ 4 ಪ್ರಬಲ ಭೂಕಂಪಗಳು ಸಂಭವಿಸಿದ್ದು, ಜನತೆಯನ್ನು ಅಕ್ಷರಶಃ ನರಕಕ್ಕೆ ತಳ್ಳಿದೆ. ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಟರ್ಕಿ ಭೂಕಂಪ

ಟರ್ಕಿ ಹಾಗೂ ಸಿರಿಯಾದಲ್ಲಿ 4 ಪ್ರಬಲ ಭೂಕಂಪಗಳು ಸಂಭವಿಸಿದ್ದು, ಜನತೆಯನ್ನು ಅಕ್ಷರಶಃ ನರಕಕ್ಕೆ ತಳ್ಳಿದೆ. ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕಟ್ಟಡದ ಅವಶೇಷಗಳಡಿ ಇನ್ನೂ 1,80,000 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಟರ್ಕಿಯಲ್ಲಿ 5,894 ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ 1932 ಮಂದಿ ಸಾವನ್ನಪ್ಪಿದ್ದಾರೆ. ಅಂತಿಮವಾಗಿ ಸಾವಿನ ಸಂಖ್ಯೆ 20,000 ಮೀರಬಹುದು ಎಂದು ಅಂದಾಜಿಸಲಾಗಿದೆ. ಟರ್ಕಿ ಹಾಗೂ ಸಿರಿಯಾದಾದ್ಯಂತ ಸುಮಾರು 23 ಮಿಲಿಯನ್ ಜನರು ಈ ದುರಂತದಿಂದ ಪ್ರಭಾವಿತರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮೂರು ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿ ದೇಶದ ನೆರವಿಗೆ ಭಾರತವು ಧಾವಿಸಿರುವ ಬೆನ್ನಲ್ಲೇ ಈಗ ಭಾರತಕ್ಕೆ ಧನ್ಯವಾದವನ್ನು ಅರ್ಪಿಸಿದೆ.

ಮತ್ತಷ್ಟು ಓದಿ: Earthquake: ಗ್ರಹ ರಚನೆ ಆಧಾರದಲ್ಲಿ 3 ದಿನಗಳ ಹಿಂದೆಯೇ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ವ್ಯಕ್ತಿ; ಇದು ಸಾಧ್ಯವಾ?

24 ಗಂಟೆಗಳಲ್ಲಿ ಟರ್ಕಿಯಲ್ಲಿ ಮೂರು ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ಹಣವನ್ನು ಒದಗಿಸಿದ ಉದಾರತೆಗಾಗಿ ಭಾರತವನ್ನು ದೋಸ್ತ್ ಎಂದು ಕರೆಯುತ್ತಾ, ಭಾರತಕ್ಕೆ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ನವದೆಹಲಿಗೆ ಧನ್ಯವಾದ ಅರ್ಪಿಸಿದರು ಮತ್ತು ಅಗತ್ಯಕಾಲದಲ್ಲಿ ನೆರವಿಗೆ ಬಂದವನೇ ನಿಜವಾಗಿಯೂ ಸ್ನೇಹಿತ ಎಂದು ಹೇಳಿದರು.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮೂರು ತಿಂಗಳ ಅವಧಿಗೆ ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ ಎರ್ಡೊಗನ್ ಅವರು, ಮೂರು ತಿಂಗಳ ತುರ್ತು ಪರಿಸ್ಥಿತಿ ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭೂಕಂಪದಿಂದಾಗಿ ಕನಿಷ್ಠ 20,426 ಜನ ಗಾಯಗೊಂಡಿದ್ದಾರೆ ಮತ್ತು 5,775 ಕಟ್ಟಡಗಳು ಧರೆಗುರುಳಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!