6.9 C
Munich
Friday, March 10, 2023

Turkey Earthquake: Death Toll Keep On Rising, Freezing Temperature Hampers Rescue Efforts | Turkey Earthquake: ಸಾವಿನ ಸಂಖ್ಯೆ 8 ಸಾವಿರ, ರಕ್ಷಣಾ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿ

ಓದಲೇಬೇಕು

Death Toll In Turkey and Syria- ಟರ್ಕಿಯಲ್ಲಿ ಗಾಯಾಳುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚು ಇದ್ದಾರೆ. ಇವರಲ್ಲಿ ಬಹಳಷ್ಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ಭೂಕಂಪದ ಬಳಿಕ ಕಣ್ಮರೆಯಾಗಿರುವವರ ಸಂಖ್ಯೆ ಇನ್ನೂ ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ.

ಟರ್ಕಿ ಭೂಕಂಪ

ನವದೆಹಲಿ: ಟರ್ಕಿ, ಸಿರಿಯಾ ದೇಶಗಳಲ್ಲಿ ಸೋಮವಾರ ಸಂಭವಿಸಿದ ನಾಲ್ಕು ಭೂಕಂಪಗಳಿಂದ ಸಾವಿನ ಸಂಖ್ಯೆ (Death Toll In Turkey Earthquake) ಕ್ಷಣಕ್ಷಣವೂ ಹೆಚ್ಚಾಗುತ್ತಿದೆ. ಬುಧವಾರ ಬೆಳಗಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 7,800 ದಾಟಿದೆ. ಇದು ಅಧಿಕೃತವಾಗಿ ದೃಢಪಟ್ಟ ಸಾವುಗಳು. ಟರ್ಕಿಯೊಂದರಲ್ಲೇ 6 ಸಾವಿರದಷ್ಟು ಮಂದಿ ಸಾವನಪ್ಪಿದ್ದಾರೆ. ಸಿರಿಯಾದಲ್ಲಿ ಸಾವಿನ ಸಂಖ್ಯೆ 2 ಸಾವಿರ ಸಮೀಪವಿದೆ.

ಟರ್ಕಿಯಲ್ಲಿ ಗಾಯಾಳುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚು ಇದ್ದಾರೆ. ಇವರಲ್ಲಿ ಬಹಳಷ್ಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ಭೂಕಂಪದ ಬಳಿಕ ಕಣ್ಮರೆಯಾಗಿರುವವರ ಸಂಖ್ಯೆ ಇನ್ನೂ ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ನಿನ್ನೆ ಮಾಡಿರುವ ಅಂದಾಜು ಪ್ರಕಾರ ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ ಕನಿಷ್ಠ 20 ಸಾವಿರವಾದರೂ ಆಗಬಹುದಂತೆ. ಇದೇ ವೇಳೆ ಇನ್ನೂ ಬೆಚ್ಚಿಬೀಳಿಸುವ ಸಂಗತಿಯನ್ನು ಭೂಕಂಪ ತಜ್ಞ ಓವಗುನ್ ಅಹ್ಮತ್ ಎರ್ಕಾನ್ ತಿಳಿಸಿದ್ದಾರೆ. ಅವರ ಪ್ರಕಾರ ಕಟ್ಟಡಗಳ ಅವಶೇಷಗಳಡಿ ಸುಮಾರು 1.8 ಲಕ್ಷ ಜನರು ಸಿಲುಕಿರಬಹುದು. ಅವರೆಲ್ಲರೂ ಬಹುತೇಕ ಸಾವನ್ನಪ್ಪಿರಬಹುದು ಎಂದು ಅವರು ಎಕನಾಮಿಸ್ಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದೇನಾದರೂ ನಿಜವಾದರೆ ಭೂಮಿಯ ಇತಿಹಾಸದಲ್ಲೇ ಅತ್ಯಂತ ಪ್ರಾಣಹಾನಿ ಮಾಡಿದ ಭೂಕಂಪಗಳ ಪೈಕಿ ಟರ್ಕಿಯದ್ದೂ ಒಂದಾಗಬಹುದು.

ಟರ್ಕಿಯಲ್ಲಿ ಒಂದು ಅಂದಾಜು ಪ್ರಕಾರ 11,342 ಕಟ್ಟಡಗಳು ಭೂಕಂಪದಿಂದ ಕುಸಿದುಬಿದ್ದಿವೆಯಂತೆ. ಆದರೆ, ಅಧಿಕೃತ ಲೆಕ್ಕದ ಪ್ರಕಾರ 5,775 ಕಟ್ಟಡಗಳು ಬಿದ್ದಿರುವುದು ದೃಢಪಟ್ಟಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆಯಾದರೂ ಪ್ರತಿಕೂಲ ಹವಾಮಾನದ ಸಮಸ್ಯೆ ಎದುರಾಗಿದೆ. ಆದಾಗ್ಯೂ ಕಟ್ಟಡಗಳ ಅವಶೇಷಗಳ ರಾಶಿಯಿಂದ 8 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸುಮಾರು 4 ಲಕ್ಷದಷ್ಟು ಜನರು ಸರ್ಕಾರ ವ್ಯವಸ್ಥೆ ಮಾಡಿದ ವಸತಿಗಳಲ್ಲಿ ಆಶ್ರಯ ಪಡೆದಿದ್ದಾರೆ. ರಕ್ಷಣಾ ಕಾರ್ಯಗಳು ನಡೆದಂತೆ ಶವಗಳ ರಾಶಿ ರಸ್ತೆಗಳಲ್ಲಿ ಗುಡ್ಡೆಯಂತೆ ಬೀಳುತ್ತಿವೆ. ಈ ಶವಗಳ ವಿಲೇವಾರಿ ಮಾಡಲೂ ರಕ್ಷಣಾ ಕಾರ್ಯಕರ್ತರಿಗೆ ಸಮಯ ಇಲ್ಲದಷ್ಟು ಭೀಕರವಾಗಿ ಅಲ್ಲಿನ ಪರಿಸ್ಥಿತಿ.

ಟರ್ಕಿ ದೇಶದಲ್ಲಿ ಈಗ ಮಹಾ ಚಳಿಯ ವಾತಾವರಣ. ಉಷ್ಣಾಂಶ ಶೂನ್ಯಕ್ಕೆ ಬಂದು ನಿಂತಿದೆ. ಸಿರಿಯಾದಲ್ಲಿ ಮಳೆಯ ಕಾಟ ಇದೆ. ಹೀಗಾಗಿ ಈ ಎರಡು ದೇಶಗಳಲ್ಲಿ ರಕ್ಷಣಾ ಕಾರ್ಯಗಳಿಗೆ ತೊಡಕುಂಟಾಗಿದೆ.

ಇದನ್ನೂ ಓದಿ: Documentary On Balochistan: ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ನ್ಯೂಸ್‌9 ಪ್ಲಸ್‌ ವೆಬ್‌ ಸಿರೀಸ್, ಬೆದರಿದ ಪಾಕ್‌

ಇನ್ನು, ಟರ್ಕಿಯ ಭೂಕಂಪ ಪೀಡಿತ 10 ಪ್ರಾಂತ್ಯಗಳಲ್ಲಿ ಮುಂದಿನ 3 ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದೆ. ಇನ್ನು, ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಹತ್ತಾರು ದೇಶಗಳು ಟರ್ಕಿಗೆ ಸಹಾಯಹಸ್ತ ಚಾಚಿವೆ. ಭಾರತದಿಂದ ನಿನ್ನೆ ರಕ್ಷಣಾ ಪಡೆ, ಉಪಕರಣ ಇತ್ಯಾದಿ ಎಲ್ಲವನ್ನೂ ವಿಮಾನದ ಮೂಲಕ ಟರ್ಕಿಗೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಎನ್​ಡಿಆರ್​ಎಫ್ ಪರಿಣಿತರು, ಶ್ವಾನ ದಳವೂ ಒಳಗೊಂಡಿದ್ದಾರೆ.

ಸೋಮವಾರ ಮತ್ತು ಮಂಗಳವಾರದಂದು 24 ಗಂಟೆಗಳ ಅಂತರದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ 4 ಭೂಕಂಪಗಳು ಸಂಭವಿಸಿದ್ದವು. ರಿಕ್ಟರ್ ಮಾಪಕದಲ್ಲಿ 7.8, 7.7, 6.0 ಮತ್ತು 5.6 ತೀವ್ರತೆಯ ಭೂಕಂಪ ಹಾಗೂ ನೂರಕ್ಕೂ ಹೆಚ್ಚು ಪಶ್ಚಾತ್ ಕಂಪನಗಳು ಟರ್ಕಿ, ಸಿರಿಯಾ, ಲೆಬನಾನ್ ದೇಶಗಳನ್ನು ಅಲುಗಾಡಿಸಿವೆ. ಟರ್ಕಿ ಮತ್ತು ಸಿರಿಯಾಗಳಿಗೆ ಹೆಚ್ಚು ಘಾಸಿಯಾಗಿದೆ. ಭೂಕಂಪದ ಅನುಭವ ದೂರದ ಈಜಿಪ್ಟ್​ನ ಕೈರೋವರೆಗೂ ಆಗಿತ್ತೆನ್ನಲಾಗಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!