10.5 C
Munich
Thursday, March 30, 2023

Turkey Earthquake: Romeo, Julie NDRF dogs who helped rescue 6-year-old in quake hit Turkey | Turkey Earthquake: ಅವಶೇಷಗಳಡಿ ಸಿಲುಕಿದ್ದ 6ರ ಬಾಲಕಿ 80 ಗಂಟೆಗಳ ಬಳಿಕವೂ ಬದುಕಿ ಬಂದಿದ್ದು ಹೇಗೆ?

ಓದಲೇಬೇಕು

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 37 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲವು ಮಂದಿ ಪವಾಡವೆಂಬಂತೆ ಬದುಕಿ ಬಂದಿದ್ದಾರೆ.

ರೋಮಿಯೋ-ಜೂಲಿ ಶ್ವಾನಗಳು

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 37 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲವು ಮಂದಿ ಪವಾಡವೆಂಬಂತೆ ಬದುಕಿ ಬಂದಿದ್ದಾರೆ. ಎನ್​ಡಿಆರ್​ಎಫ್​ನ ರೋಮಿಯೋ ಹಾಗೂ ಜೂಲಿ ಶ್ವಾನದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಭೂಕಂಪ ಸಂಭವಿಸಿ ಸತತ 80 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ನರಳುತ್ತಿದ್ದ 6 ವರ್ಷದ ಬಾಲಕಿಯನ್ನು ಹುಡುಕಿ ಜೀವಂತವಾಗಿ ರಕ್ಷಿಸಲು ಈ ಶ್ವಾನಗಳು ಸಹಾಯ ಮಾಡಿವೆ.

ಇವರಿಬ್ಬರ ಜೋಡಿ ಟರ್ಕಿಯ 6 ವರ್ಷದ ಬಾಲಕಿಯ ಜೀವ ಉಳಿಸಿದೆ. ಇಬ್ಬರ ಸಹಾಯದಿಂದ 80 ಗಂಟೆಗಳ ನಂತರ ಬಾಲಕಿಯನ್ನು ಅವಶೇಷಗಳಿಂದ ಹೊರತೆಗೆಯಲಾಯಿತು. ಮೂರು ದಿನಗಳ ಕಾಲ ಟನ್​ಗಟ್ಟಲೆ ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: Turkey Earthquake: ಸಾವಿನ ಸಂಖ್ಯೆ 37,000ಕ್ಕೂ ಹೆಚ್ಚು; ಟರ್ಕಿಗೆ ಆದ ನಷ್ಟ ಎಷ್ಟು?

ರೋಮಿಯೋ ಹಾಗೂ ಜೂಲಿ ಎಂಬ ಎರಡು ಸ್ನಿಫರ್ ಡಾಗ್​ಗಳು ಭಾರತೀಯ ಎನ್​ಡಿಆರ್​ಎಫ್​ ತಂಡದ ಭಾಗವಾಗಿದ್ದವು. ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದವು.

7.8 ತೀವ್ರತೆಯ ಭೂಕಂಪದಿಂದ ದೇಶವು ನಲುಗಿದ ನಂತರ ಎನ್​ಡಿಆರ್​ಎಫ್ ಟರ್ಕಿಗೆ ತೆರಳಿದೆ. ಅಲ್ಲಿ ವಿಪತ್ತು ಕಾರ್ಯಾಚರಣೆ ನಡೆಸುತ್ತಿದೆ.
ನಿವೇಶನವೊಂದರಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದುಬಿದ್ದಿತ್ತು, ಜೂಲಿ, ರೋಮಿಯೋ ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು.
ಜೂಲಿಯನ್ನು ಅವಶೇಷಗಳಡಿ ಹೋಗಲು ಸೂಚನೆ ನೀಡಲಾಗಿತ್ತು, ಒಳಗೆ ಹೋದ ಶ್ವಾನವು ಬೊಗಳಲು ಶುರು ಮಾಡಿತ್ತು.

ಬಳಿಕ ಮತ್ತೊಂದು ಶ್ವಾನವನ್ನು ದೃಢೀಕರಣಕ್ಕಾಗಿ ಕಳುಹಿಸಲಾಗಿತ್ತು. ಬಾಲಕಿ ಜೀವಂತವಾಗಿರುವುದನ್ನು ದೃಢಪಡಿಸಿದ್ದವು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಎನ್​ಡಿಆರ್​ಎಫ್ ಸಿಬ್ಬಂದಿ ಬೆರೆನ್​ನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!