9.8 C
Munich
Thursday, March 9, 2023

Turkey Earthquake Videos Go Viral In Social Media | Turkey Earthquake: ಕಟ್ಟಡಗಳು ಕುಸಿದುಬೀಳುತ್ತಿರುವ ಭಯಾನಕ ದೃಶ್ಯಗಳು (Videos)

ಓದಲೇಬೇಕು

Earthquake Videos: ಟರ್ಕಿ ಭೂಕಂಪ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಹಳ ವೈರಲ್ ಆಗಿವೆ. ಭೂಕಂಪ ಆಗಿ ಎಷ್ಟೋ ಹೊತ್ತಿನ ಬಳಿಕ ಕಟ್ಟಡಗಳು ಧರೆಗುರಳಿರುವ ದೃಶ್ಯಗಳು ಭಯಾನಕ ಎನಿಸಿವೆ.

ಕಟ್ಟಡಗಳು ಕುಸಿದುಬೀಳುತ್ತಿರುವ ಭಯಾನಕ ದೃಶ್ಯಗಳು

ಟರ್ಕಿ ಹಾಗು ಅರಬ್ ನಾಡಿನ ಕೆಲವೆಡೆ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಿಂದ (Turkey Earthquake) ಸಾವಿರಾರು ಮಂದಿ ಬಲಿಯಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಮೂರು ಭೂಕಂಪಗಳಿಂದ ಟರ್ಕಿ, ಸಿರಿಯಾ ಮತ್ತು ಒಂದಷ್ಟು ಮಟ್ಟಕ್ಕೆ ಲೆಬನಾನ್ ದೇಶಗಳು ನಲುಗಿಹೋಗಿವೆ. ರಿಕ್ಟರ್ ಮಾಪಕದಲ್ಲಿ 7.7, 7.6 ಮತ್ತು 6.0 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಒಂದು ದಿನದ ಬಳಿಕ, ಅಂದರೆ ಇಂದು 5.6 ತೀವ್ರತೆಯಲ್ಲಿ ಮತ್ತೊಮ್ಮೆ ಭೂಮಿಯ ಕಂಪನ ಆಗಿದೆ. ಇದರ ಮಧ್ಯೆ ನೂರಕ್ಕೂ ಹೆಚ್ಚು ಬಾರಿ ಭೂಮಿ ನಡುಗಿರುವುದು ವರದಿಯಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಸಾವಿನ ಸಂಖ್ಯೆ 5 ಸಾವಿರ ಸಮೀಪಿಸಿದೆ.

ಇದೇ ವೇಳೆ, ಟರ್ಕಿ ಭೂಕಂಪ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ (Social Media) ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಹಳ ವೈರಲ್ ಆಗಿವೆ. ಭೂಕಂಪ ಆಗಿ ಎಷ್ಟೋ ಹೊತ್ತಿನ ಬಳಿಕ ಕಟ್ಟಡಗಳು ಧರೆಗುರಳಿರುವ ದೃಶ್ಯಗಳು ಭಯಾನಕ ಎನಿಸಿವೆ. ಪ್ರಬಲ ಭೂಕಂಪದಿಂದ ದುರ್ಬಲಗೊಂಡ ಕಟ್ಟಡಗಳು ಪಶ್ಚಾತ್ ಕಂಪನಗಳಿಂದ ಕುಸಿದುಹೋಗುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನೋಡನೋಡುತ್ತಿದ್ದಂತೆಯೇ ಕಣ್ಮುಂದೆ ಉರುಳಿಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಿಸಲು ಸಾಧ್ಯವಾಗದೇ ಜನರು ಹತಾಶೆಗೊಳ್ಳುತ್ತಿರುವ ನೋವಿನ ದೃಶ್ಯದ ವಿಡಿಯೋಗಳು ಶೇರ್ ಆಗುತ್ತಿವೆ. ಹಲವು ಮಾಲ್​ಗಳಲ್ಲಿ ವಸ್ತುಗಳು ಅಲುಗಾಡುತ್ತಿರುವ ಸಿಸಿಟಿವಿ ದೃಶ್ಯಗಳೂ ಶೇರ್ ಆಗುತ್ತಿವೆ. ಎಲ್ಲವೂ ಭಯಾನಕ ಭೂಕಂಪದ ವಾಸ್ತವ ದರ್ಶನ ಮಾಡಿಸುವಂತಿವೆ.

ಈ ಭೂಕಂಪದಿಂದ ಟರ್ಕಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ ಸಿರಿಯಾದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ. ಸಾವಿನ ಸಂಖ್ಯೆ ಬಹಳಷ್ಟು ಏರುವ ಭೀತಿ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು ಪ್ರಕಾರ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿ ಹೋಗಬಹುದು ಎನ್ನಲಾಗಿದೆ.

ಭಾರತ ಸೇರಿದಂತೆ ವಿಶ್ವದ ಕೆಲ ಪ್ರಮುಖ ದೇಶಗಳು ಟರ್ಕಿಗೆ ಈ ಸಂದರ್ಭದಲ್ಲಿ ಸಹಾಯಹಸ್ತ ಚಾಚಿವೆ. ಭಾರತವು ರಕ್ಷಣಾ ತಂಡ ಸೇರಿದಂತೆ ಪರಿಹಾರ ಪ್ಯಾಕೇಜ್ ಅನ್ನು ಟರ್ಕಿಗೆ ಕಳುಹಿಸಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!