6.4 C
Munich
Friday, March 10, 2023

Two Governors Resignation Accepted, As President Draupadi Murmu Appoints 12 New Governors | New Governors: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ರಾಜೀನಾಮೆ; ರಾಷ್ಟ್ರಪತಿಗಳಿಂದ 12 ರಾಜ್ಯಪಾಲರ ನೇಮಕ; ಇಲ್ಲಿದೆ ಪಟ್ಟಿ

ಓದಲೇಬೇಕು

The President Appoints 12 New Governors: ಇಬ್ಬರು ರಾಜ್ಯಪಾಲರು ರಾಜೀನಾಮೆ ನೀಡಿದ್ದು, 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.

ದ್ರೌಪದಿ ಮುರ್ಮು

ನವದೆಹಲಿ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ (Bhagat Singh Koshyari) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥುರ್ ಅವರು ರಾಜೀನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು (The President Draupadi Murmu) ಅವರು 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರುಗಳ ನೇಮಕಾತಿ ಮಾಡಿದ್ದಾರೆ.

ಅದರಂತೆ ಮಹಾರಾಷ್ಟ್ರದಲ್ಲಿ ನಿರ್ಗಮಿತ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸ್ಥಾನವನ್ನು ಮಾಜಿ ಕೇಂದ್ರ ಸಚಿವ ಹಾಗೂ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ (Ramesh Bais) ತುಂಬಿದ್ದಾರೆ. ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ. ರಾಧಾಕೃಷ್ಣನ್ ನೇಮಕವಾಗಿದೆ.

ಅರುಣಾಚಲಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಡಿ. ಮಿಶ್ರಾ ಅವರನ್ನು ಲಡಾಖ್​ಗೆ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಅರುಣಾಚಲ ಪ್ರದೇಶಕ್ಕೆ ಹೊಸ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕವಾಗಿದ್ದಾರೆ. ಇನ್ನು, ಕರ್ನಾಟಕ ಮೂಲದ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರದ ರಾಜ್ಯಪಾಲರಾಗಿ ನೇಮಿಸಲಾಗಿದೆ.

ಇದನ್ನೂ ಓದಿ: NHAI: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಮಿಳುನಾಡು ಸಹಕಾರ ನೀಡುತ್ತಿಲ್ಲ ಎಂಬುದು ಸರಿಯಲ್ಲ; ಗಡ್ಕರಿಗೆ ಸ್ಟಾಲಿನ್

ರಾಷ್ಟ್ರಪತಿಗಳಿಂದ ನೇಮಕವಾದ 12 ರಾಜ್ಯಪಾಲರು

ಅರುಣಾಚಲಪ್ರದೇಶ ರಾಜ್ಯಪಾಲ: ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕ

ಸಿಕ್ಕಿಂ ರಾಜ್ಯಪಾಲ: ಲಕ್ಷ್ಮಣ್ ಪ್ರಸಾದ್ ಆಚಾರ್ಯ

ಜಾರ್ಖಂಡ್ ರಾಜ್ಯಪಾಲ: ಸಿ.ಪಿ. ರಾಧಾಕೃಷ್ಣನ್

ಹಿಮಾಚಲಪ್ರದೇಶ ರಾಜ್ಯಪಾಲ: ಶಿವಪ್ರತಾಪ್ ಶುಕ್ಲಾ

ಅಸ್ಸಾಂ ರಾಜ್ಯಪಾಲ: ಗುಲಾಬ್ ಚಂದ್ ಕಟಾರಿಯಾ

ಛತ್ತೀಸ್​ಗಡ ರಾಜ್ಯಪಾಲ: ಬಿಸ್ವ ಭೂಸನ್ ಹರಿಚಂದನ್

ಮಣಿಪುರ ರಾಜ್ಯಪಾಲ: ಅನುಸೂಯ ಊಕ್ಯೆ

ನಾಗಾಲೆಂಡ್ ರಾಜ್ಯಪಾಲ: ಲಾ ಗಣೇಸನ್

ಮೇಘಾಲಯ ರಾಜ್ಯಪಾಲ: ಫಾಗು ಚೌಹಾಣ್

ಬಿಹಾರ ರಾಜ್ಯಪಾಲ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್

ಅರುಣಾಚಲ ಕೇಂದ್ರಾಡಳಿತದ ಲೆಫ್ಟಿನೆಂಟ್ ಗವರ್ನರ್: ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!