1.6 C
Munich
Saturday, February 25, 2023

Two Producers Applied For Title To Make Movie About Ongoing War Between A IAS and IPS Officer In Karnataka | IAS v/s IPS: ಸಿನಿಮಾ ಆಗುತ್ತಿದೆ ಐಎಎಸ್-ಐಪಿಎಸ್ ಕಿತ್ತಾಟ: ಎರಡು ಟೈಟಲ್ ರಿಜಿಸ್ಟರ್​ಗೆ ಅರ್ಜಿ

ಓದಲೇಬೇಕು

ರಾಜ್ಯದ ಗಮನ ಸೆಳೆದಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಆಗಲಿದೆ. ಇಬ್ಬರು ನಿರ್ಮಾಪಕರು ಈ ‘ಬ್ಯೂರೋಕ್ರಾಟ್ ಬಡಿದಾಟ’ವನ್ನು ಸಿನಿಮಾ ಮಾಡಲು ಮುಂದಾಗಿದ್ದು, ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ ಅರ್ಜಿ ಹಾಕಿದ್ದಾರೆ.

ಐಎಎಸ್-ಐಪಿಎಸ್

ರಾಜ್ಯದ ಗಮನ ಸೆಳೆದಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಆಗಲಿದೆ. ಇಬ್ಬರು ನಿರ್ಮಾಪಕರು ಈ ‘ಬ್ಯೂರೋಕ್ರಾಟ್ ಬಡಿದಾಟ’ವನ್ನು ಸಿನಿಮಾ ಮಾಡಲು ಮುಂದಾಗಿದ್ದು, ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ (Film Chamber) ಅರ್ಜಿ ಹಾಕಿದ್ದಾರೆ. ಈ ಹಿಂದೆ ‘ಐದು ಅಡಿ ಏಳು ಅಂಗುಲ’, ‘ಕೋಡಂಗಿ’ ಸಿನಿಮಾಗಳನ್ನು ನಿರ್ಮಿಸಿರುವ ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹಾಗೂ ಪ್ರವೀಣ್ ಶೆಟ್ಟಿ ಎಂಬ ನಿರ್ಮಾಪಕರು ಎರಡು ಪ್ರತ್ಯೇಕ ಟೈಟಲ್​ ನೀಡುವಂತೆ ಕೋರಿದ್ದಾರೆ.

ಐಎಎಸ್-ಐಪಿಎಸ್ ಜಗಳದ ಕೇಂದ್ರ ಬಿಂದುವಾಗಿರುವ ಅಧಿಕಾರಿಯ ಹೆಸರುಳ್ಳ ಟೈಟಲ್​ಗಾಗಿ ಒಂದು ಅರ್ಜಿ ಬಂದಿದ್ದು ಆ ಸಿನಿಮಾವನ್ನು ಪ್ರವೀಣ್ ಶೆಟ್ಟಿ ಎಂಬುವರು ನಿರ್ಮಾಣ ಮಾಡಲಿದ್ದಾರೆ. R v/s R ಎಂಬ ಮತ್ತೊಂದು ಟೈಟಲ್​ಗಾಗಿಯೂ ಅರ್ಜಿ ಬಂದಿದ್ದು ಈ ಸಿನಿಮಾವನ್ನು ನಿತ್ಯಾನಂದ ಪ್ರಭು ಎಸ್ ಎಂಬುವರು ನಿರ್ದೇಶನ ಮಾಡಲಿದ್ದಾರೆ, ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ.

ಅಧಿಕಾರ, ರಾಜಕೀಯ, ಭ್ರಷ್ಟಾಚಾರ, ಹಣ, ಸೌಂದರ್ಯ, ಮಾದಕತೆ, ಪ್ರೀತಿ, ಮೋಸ, ನಿರಾಸೆ, ಆತ್ಮಹತ್ಯೆ, ಕುಟುಂಬ ಹಲವು ಅಂಶಗಳನ್ನು ಒಳಗೊಂಡ ಈ ಸತ್ಯಕತೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಕಾತರರಾಗಿದ್ದು, ತಾವು ಕೋರಿರುವ ಟೈಟಲ್ ಅನ್ನು ನೀಡುವಂತೆ ಫಿಲಂ ಚೇಂಬರ್​ಗೆ ಮನವಿ ಮಾಡಿದ್ದಾರೆ.

ಟೈಟಲ್ ರಿಜಿಸ್ಟರ್​ಗೆ ಅರ್ಜಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ”ಇಂದಷ್ಟೆ ಸಿನಿಮಾ ಟೈಟಲ್​ಗಾಗಿ ಅರ್ಜಿಗಳು ಬಂದಿವೆ. ಬಂದಿರುವ ಎರಡೂ ಅರ್ಜಿಗಳನ್ನು ಸೋಮವಾರ ಟೈಟಲ್ ಕಮಿಟಿಯ ಮುಂದಿಡುತ್ತೇವೆ. ಸಮಿತಿ ಅನುಮತಿ ನೀಡಿದರೆ ಟೈಟಲ್ ನೀಡುತ್ತೇವೆ. ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಅವರಿಂದ ನಿರಪೇಕ್ಷಣಾ ಪತ್ರ (NOC) ಪಡೆಯಬೇಕಾಗುತ್ತದೆ” ಎಂದಿದ್ದಾರೆ.

ನಿರ್ದೇಶಕ ನಿತ್ಯಾನಂದ ಪ್ರಭು ಮಾತನಾಡಿ, ”ಆರ್ vs ಆರ್ ಟೈಟಲ್ ನೀಡುವಂತೆ ಅರ್ಜಿ ಹಾಕಲಾಗಿದ್ದು, ಇದು ನೈಜ ಘಟನೆ ಆಧರಿತ ಸಿನಿಮಾ ಆಗಿರಲಿದೆ. ಆದರೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಸಹ ಇರುತ್ತದೆ. ಫಿಲಂ ಚೇಂಬರ್ ಟೈಟಲ್ ಕೊಟ್ಟ ನಂತರ ಕಥೆ ಸಾರಾಂಶವನ್ನ ಫಿಲಂ ಚೇಂಬರ್​ಗೆ ನೀಡುತ್ತೇವೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!