9.4 C
Munich
Thursday, February 23, 2023

US President Joe Biden ex-Mastercard CEO Ajay Banga to head World Bank | Ajay Banga: ವಿಶ್ವ ಬ್ಯಾಂಕ್ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗರನ್ನು ನಾಮನಿರ್ದೇಶನ ಮಾಡಿದ ಬೈಡೆನ್

ಓದಲೇಬೇಕು

63ರ ಹರೆಯದ ಬಂಗ ಭಾರತೀಯ-ಅಮೆರಿಕನ್ ಮತ್ತು ಪ್ರಸ್ತುತ ಈಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಮಾಸ್ಟರ್‌ಕಾರ್ಡ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

ವಿಶ್ವ ಬ್ಯಾಂಕ್ (World Bank)  ಮುಖ್ಯಸ್ಥ ಡೇವಿಡ್ ಮಾಲ್ಪಾಸ್ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ ನಂತರ, ಅದನ್ನು ಮುನ್ನಡೆಸಲು ಮಾಜಿ ಮಾಸ್ಟರ್‌ಕಾರ್ಡ್ ಮುಖ್ಯ ಕಾರ್ಯನಿರ್ವಾಹಕ ಅಜಯ್ ಬಂಗ (Ajay Banga) ಅವರನ್ನು ವಾಷಿಂಗ್ಟನ್ ನಾಮನಿರ್ದೇಶನ ಮಾಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ಗುರುವಾರ ಹೇಳಿದ್ದಾರೆ. ವಿಶ್ವ ಬ್ಯಾಂಕ್ ಮಾರ್ಚ್ 29 ರವರೆಗೆ ನಡೆಯುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿ ನಾಮನಿರ್ದೇಶನಗಳನ್ನು ಸ್ವೀಕರಿಸಲಿದೆ. ಮಹಿಳಾ ಅಭ್ಯರ್ಥಿಗಳನ್ನು “ಹೆಚ್ಚು” ಪ್ರೋತ್ಸಾಹಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.ವಿಶ್ವಬ್ಯಾಂಕ್‌ನ ಅಧ್ಯಕ್ಷರು ಸಾಮಾನ್ಯವಾಗಿ ಅಮೆರಿಕನ್ ಆಗಿದ್ದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರು ಸಾಂಪ್ರದಾಯಿಕವಾಗಿ ಯುರೋಪಿಯನ್ ಆಗಿರುತ್ತಾರೆ.

63ರ ಹರೆಯದ ಬಂಗ ಭಾರತೀಯ-ಅಮೆರಿಕನ್ ಮತ್ತು ಪ್ರಸ್ತುತ ಈಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಮಾಸ್ಟರ್‌ಕಾರ್ಡ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

ಬಂಗ ಅವರು “ಹವಾಮಾನ ಬದಲಾವಣೆ ಸೇರಿದಂತೆ ನಮ್ಮ ಕಾಲದ ಅತ್ಯಂತ ತುರ್ತು ಸವಾಲುಗಳನ್ನು ನಿಭಾಯಿಸಲು ಸಾರ್ವಜನಿಕ-ಖಾಸಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ನಿರ್ಣಾಯಕ ಅನುಭವವನ್ನು ಹೊಂದಿದ್ದಾರೆ” ಎಂದು ಬೈಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ವಶಕ್ತನು ಪ್ರಧಾನಿಯಾಗಿ ನಮಗೆ ಮೋದಿಯನ್ನು ನೀಡಲಿ, ಅವರು ಮಹಾನ್ ವ್ಯಕ್ತಿ ಎಂದು ಹೇಳಿದ ಪಾಕಿಸ್ತಾನಿ; ವಿಡಿಯೊ ವೈರಲ್

ಸಾಲದಾತರ ಪ್ರಮುಖ ಮಾದರಿಗಳು, ಅಭಿವೃದ್ಧಿಯ ನಿರ್ಬಂಧಗಳನ್ನು ಪರಿಹರಿಸುವ ನಿರ್ದಿಷ್ಟ ಹೂಡಿಕೆಗಳನ್ನು ಮಾಡಲು ದೇಶಗಳು ಎರವಲು ಪಡೆಯುತ್ತವೆ, ಕೆಲವೊಮ್ಮೆ ಪೂರೈಸಲು ಸಾಕಾಗುವುದಿಲ್ಲ ಎಂದು ಅಮೆರಿಕದ ಟ್ರಶರಿ ಕಾರ್ಯದರ್ಶಿ ಜಾನೆಟ್ ಯೆಲೆನ್ ಈ ಹಿಂದೆ ಹೇಳಿದ್ದರು. ಯುನೈಟೆಡ್ ಸ್ಟೇಟ್ಸ್ ವಿಶ್ವಬ್ಯಾಂಕ್‌ನ ಅತಿದೊಡ್ಡ ಷೇರುದಾರ ಆಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!