ಚುನಾವಣಾ ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿ ಬಳಕೆ, ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಯಲ್ಲಿ ವ್ಯತ್ಯಯ | Use of health personnel for karnataka election duty Services to be disrupted in government hospitals tomorrow

ಚುನಾವಣಾ ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿ ಬಳಕೆ, ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಯಲ್ಲಿ ವ್ಯತ್ಯಯ

ಕರ್ನಾಟಕ ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿ ವರ್ಗವನ್ನೂ ಬಳಕೆ ಮಾಡಲಾಗಿದೆ. ಹೀಗಾಗಿ ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಚುನಾವಣಾ ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿ ಬಳಕೆ, ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ (Karnataka Assembly Elections 2023) ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿ ವರ್ಗವನ್ನೂ ಬಳಕೆ ಮಾಡಲಾಗಿದೆ. ಹೀಗಾಗಿ ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕೆಲವು ಆಸ್ಪತ್ರೆಗಳು ಒಳರೋಗಿ ದಾಖಲಾತಿ ಸ್ಥಗಿತಗೊಳಿಸಿದ್ದು, ಲ್ಯಾಬ್, ಎಕ್ಸ್​ರೇ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ. ಅದಾಗ್ಯೂ, ಒಪಿಡಿ ಸೇವೆ ಮಾತ್ರ ಸಿಗುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಬುಧವಾರ ಸಂಜೆ ವೇಳೆಗೆ ಮತಯಂತ್ರ ಸೇರಲಿದೆ. ಮೇ 13ರಂದು ಫಲಿತಾಂಶವೂ ಪ್ರಕಟಗೊಳ್ಳಲಿದೆ.

ನೀವು ನಿಮ್ಮ ಜನಪ್ರತಿನಿಧಿಯನ್ನು ಆರಿಸುವ ದಿನವಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಒಂದು ಮತ ಬಹಳ ಮುಖ್ಯವಾಗಿದೆ. ನಿಮ್ಮ ಒಂದು ಮತ ರಾಜ್ಯಕ್ಕೆ ಹಿತ ತರಲಿ. ಹೀಗಾಗಿ ತಪ್ಪದೇ ಮತ ಚಲಾಯಿಸಿ. ಇದು ಟಿವಿ9 ಡಿಜಿಟಲ್​ನ ಕಳಕಳಿ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

LEAVE A REPLY

Please enter your comment!
Please enter your name here