13.5 C
Munich
Thursday, March 9, 2023

Valentine’s Day 2023: Different love propose songs in Kannada movie | Valentine’s Day: ಹೀಗೂ ಪ್ರಪೋಸ್​ ಮಾಡಬಹುದಾ? ಕನ್ನಡದ ಸಿನಿಮಾ ಹಾಡುಗಳಲ್ಲಿದೆ ಡಿಫರೆಂಟ್​ ಪ್ರೇಮ ನಿವೇದನೆ

ಓದಲೇಬೇಕು

Kannada Love Songs | Valentine’s Day 2023: ಕೆಲವು ಸಿನಿಮಾಗಳಲ್ಲಿ ಪ್ರೇಮ ನಿವೇದನೆಯ ಸನ್ನಿವೇಶದಲ್ಲಿ ಬರುವ ಹಾಡಿನ ಸಾಲುಗಳು ಕ್ರೇಜಿ ಎನಿಸುತ್ತವೆ. ಜನ ಹಿಂಗೂ ಪ್ರಪೋಸ್​ ಮಾಡ್ತಾರಾ ಅಂತ ಅಚ್ಚರಿ ಮೂಡಿಸುತ್ತವೆ.

ಕನ್ನಡ ಲವ್​ ಸಾಂಗ್ಸ್​

ಪ್ರೇಮಿಗಳ ಪಾಲಿಗೆ ಫೆಬ್ರವರಿ 14 ಅಂದ್ರೆ ಸಂಭ್ರಮ. ವ್ಯಾಲೆಂಟೈನ್​ ಡೇ (Valentine’s Day) ಸಡಗರದಲ್ಲಿ ಯುವ ಜನತೆ ಮಿಂದೇಳುತ್ತದೆ. ಇಂದು ಜೋಡಿಗಳಿಗೆ ಹಬ್ಬದ ವಾತಾವರಣ. ಒನ್​ ಸೈಡ್​​ ಪ್ರೇಮಿಗೆ ಏನೋ ಒಂಥರ ತಳಮಳ. ಈ ಶುಭದಿನದಲ್ಲಿ ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂಬ ತಾತರ. ಪ್ರಪೋಸ್​ (Love Propose) ಮಾಡಲು ಹುಡುಗ-ಹುಡುಗಿಯರು ಲೆಕ್ಕವಿಲ್ಲದಷ್ಟು ದಾರಿ ಕಂಡುಕೊಂಡಿದ್ದಾರೆ. ಮಂಡಿಯೂರಿ, ಹೂಗುಚ್ಛ ನೀಡುವುದು ಕೆಲವರ ಸ್ಟೈಲ್​. ಕವನ ಬರೆದು ಇಂಪ್ರೆಸ್​ ಮಾಡೋದು ಇನ್ನೂ ಕೆಲವರ ಸ್ಟೈಲ್​. ಗಿಫ್ಟ್​ ನೀಡಿ ಮನವೊಲಿಸಿಕೊಳ್ಳಬೇಕು ಎಂಬುವವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಪ್ರೇಮ ನಿವೇದನೆ ಮಾಡಿಕೊಳ್ಳುವ ಸನ್ನಿವೇಶಗಳನ್ನು ಕನ್ನಡ ಸಿನಿಮಾಗಳ ಅನೇಕ ಹಾಡುಗಳಲ್ಲಿ ಕಟ್ಟಿಕೊಡಲಾಗಿದೆ. ಆ ಪೈಕಿ ಕೆಲವು ಒರಟಾಗಿ ಕಾಣುತ್ತವೆ. ಮತ್ತೆ ಕೆಲವು ಏನೋ ಡಿಫರೆಂಟ್​ ಆಗಿದೆ ಎನಿಸುತ್ತವೆ. ಚಂದನವನದಲ್ಲಿ ಒಂದಷ್ಟು ಹಾಡುಗಳು (Kannada Movie Songs) ಈ ಕಾರಣಕ್ಕಾಗಿ ಸೌಂಡು ಮಾಡಿದ್ದುಂಟು.

ಪ್ರೀತ್ಸೇ… ಪ್ರೀತ್ಸೇ…

ಉಪೇಂದ್ರ, ಶಿವರಾಜ್​ಕುಮಾರ್​, ಸೊನಾಲಿ ಬೇಂದ್ರೆ ನಟನೆಯ ‘ಪ್ರೀತ್ಸೆ’ ಸಿನಿಮಾದ ಟೈಟಲ್​ ಟ್ರ್ಯಾಕ್ ಇಂದಿಗೂ ಕೇಳುಗರ ಫೇವರಿಟ್​ ಪಟ್ಟಿಯಲ್ಲಿದೆ. ನಾಯಕಿಯನ್ನು ಪರಿಪರಿಯಾಗಿ ಬೇಡಿಕೊಳ್ಳುವ ಪ್ರೇಮಿಯ ಸಾಲುಗಳು ಈ ಹಾಡಿನಲ್ಲಿವೆ. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ ಬಂದ ಈ ಹಾಡಿಗೆ ಧ್ವನಿ ನೀಡಿರುವುದು ಹೇಮಂತ್​. ‘ಮಾತಾಡ್ತಾ ಪ್ರೀತ್ಸೇ.. ಮುದ್ದಾಡ್ತಾ ಪ್ರೀತ್ಸೆ’ ಎನ್ನುವ ಹೀರೋ ನಂತರ ‘ದಯಮಾಡಿ ಪ್ರೀತ್ಸೇ ಕೃಪೆ ತೋರಿ ಪ್ರೀತ್ಸೇ’ ಅಂತ ಬೇಡಿಕೊಳ್ಳುತ್ತಾನೆ.

ಇದನ್ನೂ ಓದಿ: Valentine’s Day: ಪ್ರೇಮಿಗಳ ದಿನದ ಬಗ್ಗೆ ನಿಮಗೆ ಎಷ್ಟು ಗೊತ್ತು? ಕೆಲವು ಇಂಟರೆಸ್ಟಿಂಗ್​​​ ಸಂಗತಿಗಳು ಇಲ್ಲಿವೆ

ಐ ಲವ್​ ಯೂ ಅಂತ ಒಮ್ಮೆ ಹೇಳೇ..

ಪುನೀತ್​ ರಾಜ್​ಕುಮಾರ್​ ನಟನೆಯ ‘ರಾಜ್​ ದಿ ಶೋ ಮ್ಯಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದು ‘ಜೋಗಿ’ ಪ್ರೇಮ್​. ಆ ಚಿತ್ರಕ್ಕೆ ಸಂಗೀತ ನೀಡಿದ್ದು ವಿ. ಹರಿಕೃಷ್ಣ. ಒಂದೇ ಒಂದು ಬಾರಿ ಐ ಲವ್​ ಯೂ ಅಂತ ಹೇಳು ಎಂದು ನಾಯಕಿಗೆ ಮನವಿ ಮಾಡಿಕೊಳ್ಳುವ ‘ಹೇ ಪಾರೂ..’ ಹಾಡಿನ ಲಿರಿಕ್ಸ್​ ತುಂಬ ಕ್ಯಾಚಿ ಆಗಿದೆ. ವಿ. ನಾಗೇಂದ್ರ ಪ್ರಸಾದ್​ ಬರೆದ ಈ ಗೀತೆ ಟಿಪ್ಪು ಅವರ ಕಂಠದಲ್ಲಿ ಮೂಡಿಬಂದು ಸೂಪರ್​ ಹಿಟ್​ ಆಯಿತು.

ಇದನ್ನೂ ಓದಿ: Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್​ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !

18 ಭಾಷೆಯಲ್ಲಿ ಪ್ರಪೋಸ್​ ಮಾಡಿದ ಉಪೇಂದ್ರ!

ಉಪೇಂದ್ರ ಏನೇ ಮಾಡಿದರೂ ಅದು ಡಿಫರೆಂಟ್​ ಆಗಿರುತ್ತದೆ. ನಟ, ನಿರ್ದೇಶಕನಾಗಿ ಮಾತ್ರವಲ್ಲದೇ ಗೀತರಚನೆಕಾರನಾಗಿಯೂ ತಾವು ಡಿಫರೆಂಟ್​ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ‘ಓಂಕಾರ’ ಸಿನಿಮಾದಲ್ಲಿನ ‘ಬಾಲೋ ಭಾಷಿ ಬೆಂಗಾಲಿಲಿ..’ ತುಂಬ ಭಿನ್ನವಾಗಿದೆ. ‘ಲವ್​ ಲವ್​ ಯೂ’ ಎಂಬುದನ್ನು ಬರೋಬ್ಬರಿ 18 ಭಾಷೆಯಲ್ಲಿ ಹೇಳುವ ಹಾಡು ಇದು. ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಿ, ಸಂಸ್ಕೃತ, ಹಿಂದಿ, ಫ್ರೆಂಚ್, ಬೆಂಗಾಲಿ, ಸ್ಪ್ಯಾನಿಶ್​ ಮುಂತಾದ ಭಾಷೆಗಳಲ್ಲಿ ಪ್ರೀತಿಗೆ ಏನೆನ್ನುತ್ತಾರೆ ಎಂಬುದನ್ನು ತಿಳಿಯಬೇಕೆಂದರೆ ಈ ಹಾಡು ಕೇಳಬೇಕು.

ಎಕ್ಸ್​ಕ್ಯೂಸ್​ ಮೀ.. ಎಕ್ಸ್​ಕ್ಯೂಸ್​ ಮೀ..

ಪ್ರೇಮ್​ ನಿರ್ದೇಶನದ ಸೂಪರ್​ ಹಿಟ್​ ಸಿನಿಮಾ ‘ಎಕ್ಸ್​ಕ್ಯೂಸ್​ ಮೀ’. ಆ ಚಿತ್ರದ ಹಾಡುಗಳು ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿದ್ದವು. ಟೈಟಲ್​ ಟ್ರ್ಯಾಕ್​ ಅಂತೂ ಬೇರೆಯದೇ ರೀತಿಯಲ್ಲಿ ಮೂಡಿಬಂತು. ‘ನಾ ಪ್ರೇಮಿ, ನೀ ಲುಕ್​ ಮೀ, ಯೂ ಕ್ಯಾಚ್​ ಮೀ, ಯೂ ಮ್ಯಾಚ್​ ಮೀ, ಯೂ ಯೂಸ್​ ಮೀ, ಯೂ ಲವ್​ ಮೀ, ಬಾರಮ್ಮಿ..’ ಎಂಬಂತಹ ಸಾಲುಗಳು ಕ್ರೇಜಿ ಎನಿಸುತ್ತವೆ. ಹಿಂಗೂ ಪ್ರಪೋಸ್​ ಮಾಡಬಹುದಾ ಎನಿಸುವಂತಹ ಪ್ರಶ್ನೆ ಹುಟ್ಟುಹಾಕುವಂತಿದೆ ಈ ಗೀತೆಯ ಸಾಹಿತ್ಯ. ವಿ. ನಾಗೇಂದ್ರ ಪ್ರಸಾದ್​ ಬರೆದ ಈ ಹಾಡಗೆ ಧ್ವನಿ ನೀಡಿರುವುದು ಆರ್​.ಪಿ. ಪಟ್ನಾಯಕ್​ ಮತ್ತು ನಂದಿತಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!