1.6 C
Munich
Tuesday, March 7, 2023

Venkatesh Maha Ask Sorry For bad comments on KGF Chapter 2 | ‘ಕ್ಷಮಿಸಿ, ಆ ರೀತಿಯ ಭಾಷೆ ಬಳಕೆ ಮಾಡಬಾರದಿತ್ತು’; ‘ಕೆಜಿಎಫ್ 2’ ಬಗ್ಗೆ ಟೀಕೆ ಮಾಡಿ ಕ್ಷಮೆ ಕೇಳಿದ ತೆಲುಗು ನಿರ್ದೇಶಕ

ಓದಲೇಬೇಕು

Venkatesh Maha: ‘ಪ್ರೇಮಾ ದಿ ಜರ್ನಲಿಸ್ಟ್’ ಯೂಟ್ಯೂಬ್​ ಚಾನೆಲ್​ನಲ್ಲಿ ವೆಂಕಟೇಶ್ ಮಹಾ ಸೇರಿ ಅನೇಕರು ಭಾಗಿ ಆಗಿದ್ದರು. ಸಂದರ್ಶನದಲ್ಲಿ ಮಾತನಾಡುತ್ತಾ ಅವರು ‘ಕೆಜಿಎಫ್ 2’ ಚಿತ್ರದ ಬಗ್ಗೆ ಹಗುರವಾಗಿ ಮಾತನಾಡಿದ್ದರು.

ಯಶ್​-ವೆಂಕಟೇಶ್ ಮಹಾ

ಸೆಲೆಬ್ರಿಟಿಗಳು ಕೆಲ ವಿಚಾರಗಳ ಬಗ್ಗೆ ಮಾತನಾಡುವಾಗ, ಕೆಲ ವಿಷಯಗಳ ಕುರಿತು ಹೇಳಿಕೆ ನೀಡುವಾಗ ಅವರಿಗೆ ಮುಂದೇನಾಗುತ್ತದೆ ಎಂಬುದರ ಕಲ್ಪನೆ ಇರುವುದಿಲ್ಲ. ನಂತರ ವಿರೋಧ ವ್ಯಕ್ತವಾದ ಬಳಿಕ ಕ್ಷಮೆ ಕೇಳುತ್ತಾರೆ. ತೆಲುಗಿನ ನಿರ್ದೇಶಕ ವೆಂಕಟೇಶ್​ ಮಹಾ (Venkatesh Maha) ಕೂಡ ‘ಕೆಜಿಎಫ್ 2’ ಚಿತ್ರದ (KGF Chapter 2) ಬಗ್ಗೆ ಕೆಟ್ಟ ಶಬ್ದಗಳ ಪ್ರಯೋಗ ಮಾಡಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ. ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿರುವ ವೆಂಕಟೇಶ್​, ಬಳಕೆ ಮಾಡಿದ ಭಾಷೆಗೆ ಕ್ಷಮೆ ಕೇಳಿದ್ದಾರೆ.

‘ಪ್ರೇಮಾ ದಿ ಜರ್ನಲಿಸ್ಟ್’ ಯೂಟ್ಯೂಬ್​ ಚಾನೆಲ್​ನಲ್ಲಿ ವೆಂಕಟೇಶ್ ಮಹಾ ಸೇರಿ ಅನೇಕರು ಭಾಗಿ ಆಗಿದ್ದರು. ಸಂದರ್ಶನದಲ್ಲಿ ಮಾತನಾಡುತ್ತಾ ಅವರು ‘ಕೆಜಿಎಫ್ 2’ ಚಿತ್ರದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಅವರು ಬಳಕೆ ಮಾಡಿದ ಶಬ್ದಕ್ಕೆ ಅನೇಕ ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಸಿಟ್ಟಿಗೆದ್ದಿದ್ದರು. ನಿರ್ದೇಶಕನ ವಿರುದ್ಧ ಟ್ವೀಟ್​ಗಳ ಮೂಲಕ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದರು. ಈ ಬೆನ್ನಲ್ಲೇ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಒಂದು ಸಂದರ್ಶನದಲ್ಲಿ ನಾನು ಎಕ್ಸ್​ಪ್ರೆಸ್​ ಮಾಡಿದ ನನ್ನ ಅಭಿಪ್ರಾಯ ಆಕ್ಷೇಪಾರ್ಹ ಎನಿಸಿದೆ. ಆ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದೇನೆ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ಹೇಳಿಕೆಯನ್ನು ನಾನು ಹಿಂತೆಗೆದುಕೊಳ್ಳುತ್ತಿಲ್ಲ. ನಾನು ಆಡಿದ ಮಾತು ಸರಿ ಇರಲಿಲ್ಲ. ಜವಾಬ್ದಾರಿಯುತ ನಿರ್ದೇಶಕನಾಗಿ ಆ ರೀತಿಯ ಭಾಷೆ ಬಳಕೆ ಮಾಡಬಾರದಿತ್ತು’ ಎಂದು ಒಪ್ಪಿಕೊಂಡಿದ್ದಾರೆ ವೆಂಕಟೇಶ್.

ಇದನ್ನೂ ಓದಿ: Venkatesh Maha: ‘ಕೆಜಿಎಫ್​’ ಸಿನಿಮಾ ಬಗ್ಗೆ ಕೆಟ್ಟ ಪದಗಳಿಂದ ಟೀಕಿಸಿದ ತೆಲುಗು ನಿರ್ದೇಶಕ: ವಿಡಿಯೋ ವೈರಲ್​

‘ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಭಾಷೆ ಸರಿ ಇಲ್ಲ ಎನಿಸಿಸುತ್ತಿದೆ. ನನ್ನ ಅಭಿಪ್ರಾಯವನ್ನು ಹೊರಹಾಕಲು ಬಳಕೆ ಮಾಡಿದ ಭಾಷೆ ವಿಚಾರವಾಗಿ ಕ್ಷಮೆ ಕೇಳುತ್ತಿದ್ದೇನೆ. ಇದು ಸಿನಿಮಾ ವಿಚಾರದ ಕುರಿತ ಚರ್ಚೆ ಆಗಿತ್ತು. ಅದೇ ಸಂದರ್ಶನದಲ್ಲಿ ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದೇನೆ. ನನಗೆ ನನ್ನ ಅಭಿಪ್ರಾಯ ಹೊರಹಾಕುವ ಹಕ್ಕು ಇದೆ. ಆದರೆ ಬಳಕೆ ಮಾಡಿದ ಭಾಷೆ ತಪ್ಪು ಎಂದಿದ್ದಾರೆ’ ವೆಂಕಟೇಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!