7.5 C
Munich
Tuesday, March 7, 2023

Vidya Balan new photo clicked by Dabboo Ratnani goes viral | Vidya Balan: ನ್ಯೂಸ್​ ಪೇಪರ್​ ಅಡ್ಡ ಹಿಡಿದು ಮೈ ಮುಚ್ಚಿಕೊಂಡ ವಿದ್ಯಾ ಬಾಲನ್​; ಡರ್ಟಿ ಪಿಕ್ಚರ್​ ಎಂದ ನೆಟ್ಟಿಗರು

ಓದಲೇಬೇಕು

Vidya Balan Viral Photo | Dabboo Ratnani: ಬಾಲಿವುಡ್​ನ ಖ್ಯಾತ ನಟಿ ವಿದ್ಯಾ ಬಾಲನ್​ ಅವರ ಹೊಸ ಫೋಟೋ ವೈರಲ್​ ಆಗಿದೆ. ಡಬೂ ರತ್ನಾನಿ ಅವರು ಈ ಫೋಟೋ ಕ್ಲಿಕ್ಕಿಸಿದ್ದಾರೆ.

ವಿದ್ಯಾ ಬಾಲನ್

ನಟಿ ವಿದ್ಯಾ ಬಾಲನ್​ (Vidya Balan) ಅವರು ಯಾವಾಗಲೂ ಸೀರೆಯಲ್ಲಿ ಕಂಗೊಳಿಸುತ್ತಾರೆ. ಸೀರೆಗಳ ಬಗ್ಗೆ ಅವರಿಗೆ ಬಹಳ ಪ್ರೀತಿ. ಅನೇಕ ವಿಶೇಷ ಸಂದರ್ಭದಲ್ಲಿ ಅವರು ಸೀರೆ ಧರಿಸಿ ಮಿಂಚುತ್ತಾರೆ. ಅವರ ಅಂಥ ಇಮೇಜ್ ಜನರು ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಈಗ ವಿದ್ಯಾ ಬಾಲನ್​ ಅವರು ಏಕಾಏಕಿ ಗ್ಲಾಮರಸ್​ ಲುಕ್​ನಲ್ಲಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಕೇವಲ ನ್ಯೂಸ್​ ಪೇಪರ್​ನಿಂದ ತಮ್ಮ ಮೈ ಮುಚ್ಚಿಕೊಂಡಿದ್ದಾರೆ. ವಿದ್ಯಾ ಬಾಲನ್​ ಅವರ ಈ ಫೋಟೋ (Vidya Balan Viral Photo) ವೈರಲ್​ ಆಗಿದೆ. ಇದನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅಂದಹಾಗೆ, ಈ ಹಾಟ್​ ಫೋಟೋವನ್ನು ಕ್ಲಿಕ್ಕಿಸಿರುವುದು ಹಿರಿಯ ಛಾಯಾಗ್ರಾಹಕ ಡಬೂ ರತ್ನಾನಿ.

ಪ್ರತಿ ವರ್ಷ ಡಬೂ ರತ್ನಾನಿ ಅವರು ಬಾಲಿವುಡ್​ ಸೆಲೆಬ್ರಿಟಿಗಳ ಫೋಟೋಶೂಟ್​ ಮಾಡುತ್ತಾರೆ. ಬಹುತೇಕ ಸೆಲೆಬ್ರಿಟಿಗಳು ಬೋಲ್ಡ್​ ಆಗಿಯೇ ಪೋಸ್​ ನೀಡುತ್ತಾರೆ. ಈ ಬಾರಿ ವಿದ್ಯಾ ಬಾಲನ್​ ಅವರು ತುಂಬ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ‘ಡರ್ಟಿ ಪಿಕ್ಚರ್’​ ಸಿನಿಮಾದಲ್ಲಿ ಬೋಲ್ಡ್​ ಆಗಿ ನಟಿಸಿದ್ದರು. ಆ ಸಿನಿಮಾವನ್ನು ಬಹುತೇಕರು ನೆನಪು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Vidya Balan: ‘ನಮ್ಮ ಕಣ್ಣುಗಳೂ ತಂಪಾಗಲಿ ಬಿಡಿ’: ರಣವೀರ್​ ಬೆತ್ತಲೆ ಫೋಟೋ ಕಂಡು ವಿದ್ಯಾ ಬಾಲನ್​ ಪ್ರತಿಕ್ರಿಯೆ

ಇದನ್ನೂ ಓದಿನೆಟ್ಟಿಗರು ಸಾಕಷ್ಟು ಫನ್ನಿಯಾಗಿ ಕಮೆಂಟ್​ ಮಾಡಿದ್ದಾರೆ. ‘ಮೇಡಂ ಅವರು ಐಎಎಸ್​ ಪರೀಕ್ಷೆಗಾಗಿ ಓದುತ್ತಿದ್ದಾರೆ. ಅದಕ್ಕಾಗಿ ಬಟ್ಟೆ ಹಾಕೋದನ್ನೇ ಮರೆತಿದ್ದಾರೆ’ ಎಂಬ ಕಮೆಂಟ್​ ಬಂದಿದೆ. ‘ವಿದ್ಯಾ ಅವರೇ.. ನಿಮ್ಮ ಜೊತೆ ನಾವೂ ನ್ಯೂಸ್​ ಪೇಪರ್​ ಓದಬೇಕು’ ಎಂದು ಪಡ್ಡೆಗಳು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಲಿವ್​ಇನ್ ರಿಲೇಶನ್​ಶಿಪ್, ಮದುವೆ ಎರಡರಲ್ಲೂ ವ್ಯತ್ಯಾಸವಿಲ್ಲ ಅಂದುಕೊಂಡಿದ್ದೆ, ಆದರೆ..’; ವೈಯಕ್ತಿಕ ವಿಚಾರ ಹಂಚಿಕೊಂಡ ವಿದ್ಯಾ ಬಾಲನ್

ವಿದ್ಯಾ ಬಾಲನ್​ ಅವರಿಗೆ ಬಾಲಿವುಡ್​ನಲ್ಲಿ ಬಹಳ ಬೇಡಿಕೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಸ್ತ್ರೀ ಪ್ರಧಾನ ಸಿನಿಮಾಗಳ ಕಡೆಗೆ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಅಂಥ ಚಿತ್ರಗಳಿಗೆ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗದ ಕಾರಣ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ.

ಡಬೂ ರತ್ನಾನಿ ಕುರಿತು:

ಬಾಲಿವುಡ್​ನಲ್ಲಿ ಡಬೂ ರತ್ನಾನಿ ಅವರು ಸೆಲೆಬ್ರಿಟಿಗಳ ನೆಚ್ಚಿನ ಫೋಟೋಗ್ರಾಫರ್​ ಆಗಿ ಗುರುತಿಸಿಕೊಂಡಿದ್ದಾರೆ. ಪ್ರತಿ ವರ್ಷ ಅವರು ಕ್ಯಾಲೆಂಡರ್​ ಬಿಡುಗಡೆ ಮಾಡುತ್ತಾರೆ. ಅದಕ್ಕಾಗಿ ಸೆಲೆಬ್ರಿಟಿಗಳ ಕಲರ್​ಫುಲ್​ ಫೋಟೋಶೂಟ್​ ಮಾಡುತ್ತಾರೆ. ಈ ಹಿಂದೆ ಕಿಯಾರಾ ಅಡ್ವಾಣಿ ಕೂಡ ಇದೇ ರೀತಿ ಹಾಟ್​ ಆಗಿ ಪೋಸ್​ ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!