18.8 C
Munich
Wednesday, March 22, 2023

Vijayapura Alleged collection of phone call details Mb Patil files complaint details in kannada | ಕುಟುಂಬದ ಹಾಗೂ ಆಪ್ತಸಹಾಯಕರ ಫೋನ್ ಕಾಲ್ ಡೀಟೇಲ್ಸ್ ಸಂಗ್ರಹ: ದೂರು ನೀಡಿದ ಎಂಬಿ ಪಾಟೀಲ್

ಓದಲೇಬೇಕು

ಚುನಾವಣೆ ಸಮಯದಲ್ಲಿ ದೂರವಾಣಿ ಕದ್ದಾಲಿಕೆ, ಕಾಲ್ ಡಿಟೇಲ್ಸ್ ಸಂಗ್ರಹ ಆರೋಪಗಳು ಕೇಳಿಬರುತ್ತವೆ. ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರ ಕುಟುಂಬದ ಹಾಗೂ ಆಪ್ತ ಸಹಾಯಕರ ಕಾಲ್ ಡೀಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಎಂಬಿ ಪಾಟೀಲ್

ವಿಜಯಪುರ: ಚುನಾವಣೆ (Karnataka Assembly Election 2023) ಸಮಯದಲ್ಲಿ ದೂರವಾಣಿ ಕದ್ದಾಲಿಕೆ, ಕಾಲ್ ಡೀಟೇಲ್ಸ್ ಸಂಗ್ರಹ (CDR) ಆರೋಪಗಳು ಕೇಳಿಬರುತ್ತವೆ. ಇದೀಗ ಬಬಲೇಶ್ವರ ಕ್ಷೇತ್ರ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ (MB Patil) ಕುಟುಂಬದ ಹಾಗೂ ಆಪ್ತ ಸಹಾಯಕರ ಕಾಲ್ ಡೀಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನನ್ನ, ನನ್ನ ಕುಟುಂಬದ ಹಾಗೂ ಆಪ್ತಸಹಾಯಕರ ಪೋನ್ ಕಾಲ್ ಡೀಟೇಲ್ಸ್ ಸಂಗ್ರಹ ಮಾಡಲಾಗುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆಗೆ ದೂರು ಸಲ್ಲಿಕೆ ಮಾಡಿರುವುದಾಗಿ ಎಂಬಿ ಪಾಟೀಲ್ ಹೇಳಿದರು. ಘಟನೆ ಕುರಿತು ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಫೋನ್ ಟ್ಯಾಪ್ ಆಗಿಲ್ಲ, ಫೋನ್ ಸಿಡಿಆರ್ ಆಗಿದೆ ಎಂದರು.

ನಮ್ಮ ಕರೆಗಳ ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಸಿಡಿಆರ್ ತೆಗೆಯುವ ಚಾಳಿ ಇದೆ. ನಮ್ಮ ದೂರವಾಣಿ ಕರೆಗಳ ಡೀಟೇಲ್ಸ್ ಸಂಗ್ರಹ ಯಾರು ಮಾಡಿದ್ದಾರೆ ಎಂದು ಹೆಸರು ಹೇಳುವುದಿಲ್ಲ. ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಆದರೆ ಸರ್ಕಾರ ಜವಾಬ್ದಾರಿಯಾಗಿರುತ್ತದೆ ಎಂದು ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Pre-Poll Survey: ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ತಿಪಟೂರಿನಲ್ಲಿ ಬಿಸಿ ನಾಗೇಶ್ ಗೆಲುವಿನ ಸಾಧ್ಯತೆ; ಸಮೀಕ್ಷೆ

ಫೋನ್ ಡೀಟೇಲ್ಸ್ ಸಂಗ್ರಹವನ್ನು ನನ್ನ ವಿರೋಧಿಗಳು ಮಾಡುತ್ತಿದ್ದಾರೆ, ಇದರಲ್ಲಿ ಯಾವುದೇ ಅನುಮಾನ ಅಲ್ಲ, ಪಕ್ಕಾ ಮಾಹಿತಿ ಇದೆ. ಚುನಾವಣೆಯಲ್ಲಿ ಖಾಸಗಿ ಮಾಹಿತಿ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ವಿಶ್ವಾಸಾರ್ಹ ತಿಳಿದುಕೊಂಡು ಪತ್ರ ಬರೆದಿದ್ದೇನೆ. ಕೆಲವೊಂದು ಅಧಿಕಾರಿಗಳು ಆಮಿಷಕ್ಕಾಗಿ ಸಿಡಿಆರ್ ಕೊಡುವವರು ಇರುತ್ತಾರೆ. ಅದಕ್ಕಾಗಿ ಬಿಜೆಪಿಯವರದ್ದಾಗಲಿ ಸಾಮಾನ್ಯ ವ್ಯಕ್ತಿಯದ್ದಾಗಿ ಫೋನ್ ಡೀಟೇಲ್ಸ್ ಸಂಗ್ರಹ ಮಾಡಬಾರದು. ಹೀಗಾಗಿ ಡಿಜಿ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!