28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೆ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಗ್ವಾಲಿಯರ್: 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (software engineer) ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೆ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ. ಈ ವ್ಯಕ್ತಿ ತನ್ನ ಇಬ್ಬರು ಹೆಂಡತಿಯರಿಗೆ ಸಮಾನ ಸಮಯವನ್ನು ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಇಬ್ಬರು ಮಹಿಳೆಯರ ನಡುವೆ ತನ್ನ ಸಮಯವನ್ನು ಹಂಚಿಕೊಂಡಿದ್ದಾಋಎ. ವಾರದ ಮೂರು ದಿನಗಳನ್ನು ಒಬ್ಬ ಹೆಂಡತಿಯೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಲು ಅವನು ಒಪ್ಪಿಕೊಂಡಿದ್ದಾರೆ. ಆದರೆ ವಾರ 7 ದಿನಗಲ್ಲಿ ಮೂರು -ಮೂರು ದಿನ ಇಬ್ಬರು ನಡುವೆ ಕಳೆದರೆ ಭಾನುವಾರ ಅವನಿಗೆ ಬಿಟ್ಟುದ್ದು ಇಬ್ಬರಲ್ಲಿ ಯಾರ ಜೊತೆ ಬೇಕಾದರೂ ಸಮಯ ಕಳೆಯಬಹುದು. ಈ ವ್ಯಕ್ತಿ ತನ್ನ ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಫ್ಲಾಟ್‌ಗಳನ್ನು ಒದಗಿಸಬೇಕಾಗಿತ್ತು. ಇದರ ಜೊತೆಗೆ ಆ ಇಬ್ಬರು ಮಹಿಳೆಯರು ಮಕ್ಕಳ ಜವಾಬ್ದಾರಿ ಈ ವ್ಯಕ್ತಿಯ ಮೇಲಿದೆ.
3 ಜನರ ಮಧ್ಯೆ ಒಪ್ಪಂದದ ಏನು?
ಈ ಸಮಸ್ಯೆಯನ್ನು ಪರಿಹರಿಸಲು ಜನವರಿ 2023ರಲ್ಲಿ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ನೇಮಿಸಿದ ಸಲಹೆಗಾರರಾದ ವಕೀಲ ಹರೀಶ್ ದಿವಾನ್ ಅವರು 26 ವರ್ಷದ ಮಹಿಳೆ ಮೇ 2018 ರಲ್ಲಿ ಈ ವ್ಯಕ್ತಿಯನ್ನು ವಿವಾಹವಾದರು ಎಂದು ಹೇಳಿದರು. ಇತ ಗುರುಗ್ರಾಮ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಂತರ ದಂಪತಿಗಳು ಗ್ವಾಲಿಯರ್ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗನೂ ಇದ್ದಾನೆ.
2020ರಲ್ಲಿ, ಕೊರನಾ ಪ್ರಾರಂಭವಾದ ನಂತರ ದಂಪತಿಗಳು ಗ್ವಾಲಿಯರ್‌ಗೆ ಬಂದರು ಮತ್ತು ಆ ವ್ಯಕ್ತಿ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದರು. ಗ್ವಾಲಿಯರ್‌ನಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಅವರು ಗುರುಗ್ರಾಮ್‌ಗೆ ಹಿಂತಿರುಗಿದರು. ಪರಿಸ್ಥಿತಿ ಹದಗೆಟ್ಟರೂ ತನ್ನ ಹೆಂಡತಿ ಮತ್ತು ಮಗುವನ್ನು ಮತ್ತೆ ಕೆರಸಿಕೊಂಡಿಲ್ಲ.
ಗ್ವಾಲಿಯರ್‌ನಿಂದ ಗುರುಗ್ರಾಮ್‌ಗೆ ಬರುವುದಾಗಿ ಪತ್ನಿ ಹೇಳಿದ್ದು, 2021ರಲ್ಲಿ ಆ ವ್ಯಕ್ತಿ ಅದೇ ಕಂಪನಿಯ ತನ್ನ ಸಹೋದ್ಯೋಗಿಯನ್ನು ಮದುವೆಯಾಗಿರುವುದು ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಎರಡನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆ ಜೀವನಾಂಶಕ್ಕಾಗಿ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮಂಗಳವಾರ ನಡೆಯಬೇಕಿದ್ದ ವಿಚಾರಣೆಯ ಮೊದಲು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವಂತೆ ವಕೀಲ ಮತ್ತು ಸಲಹೆಗಾರ ಹರೀಶ್ ದಿವಾನ್ ಅವರಿಗೆ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: Viral News: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ, ಮದುವೆ ಮುರಿದುಕೊಂಡ ವರ
ದಿವಾನ್ ಆ ವ್ಯಕ್ತಿಯೊಂದಿಗೆ ಮಾತನಾಡಿ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಬೇರೆ ಮಹಿಳೆಯನ್ನು ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆಯಡಿ ಶಿಕ್ಷಾರ್ಹ ಎಂದು ಹೇಳಿದರು. ಮೊದಲ ಪತ್ನಿ ಎಫ್‌ಐಆರ್ ದಾಖಲಿಸಿದರೆ ಕೆಲಸ ಕಳೆದುಕೊಳ್ಳಬಹುದು ಎಂದು ವಕೀಲರು ಆ ವ್ಯಕ್ತಿಗೆ ತಿಳಿಸಿದ್ದಾರೆ.
ನಂತರ ನ್ಯಾಯಾಲಯದ ಹೊರಗೆ ಒಪ್ಪಂದಕ್ಕೆ ಬರಲು ಒಪ್ಪಿಕೊಂಡರು. ಒಪ್ಪಂದದ ಪ್ರಕಾರ, ಈ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಭಾನುವಾರ ಯಾರ ಜೊತೆ ಇರಬೇಕು ಎಂಬುದು ಅವನ ಆಯ್ಕೆ ಎಂದು ಹೇಳಿತ್ತು.