4.3 C
Munich
Monday, March 27, 2023

Viral Video: Person slit his throat with a knife and ran in public near Nathu Colony Chowk in Delhi | ರಸ್ತೆಯಲ್ಲಿ ಕತ್ತು ಸೀಳಿ, ಪಿಸ್ತೂಲಿನಿಂದ ಫಯರ್​​ ಮಾಡಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್

ಓದಲೇಬೇಕು

ಕುತ್ತಿಗೆಯಿಂದ  ಸುರಿಯುತ್ತಿರುವ ರಕ್ತ, ಒಂದು ಕೈಯಲ್ಲಿ ಚಾಕು, ಇನ್ನೊಂದರಲ್ಲಿ ಪಿಸ್ತೂಲ್​​ ಹಿಡಿದು ಫಯರ್​​ ಮಾಡಿಕೊಂಡು ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. 

ಸಿಸಿಟಿವಿ ದೃಶ್ಯಾವಳಿ

Image Credit source: Twitter

ಕುತ್ತಿಗೆಯಿಂದ  ಸುರಿಯುತ್ತಿರುವ ರಕ್ತ, ಒಂದು ಕೈಯಲ್ಲಿ ಚಾಕು, ಇನ್ನೊಂದರಲ್ಲಿ ಪಿಸ್ತೂಲ್​​ ಹಿಡಿದು ಫಯರ್​​ ಮಾಡಿಕೊಂಡು ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಇಂತಹ ಆಘಾತಕಾರಿ ಘಟನೆ ಮಾರ್ಚ್ 16 ರಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ನಾಥು ಕಾಲೋನಿ ಚೌಕ್ ಬಳಿ ವ್ಯಕ್ತಿ ಕತ್ತು ಸೀಳಿಕೊಂಡು ಜನದಟ್ಟನೆ ಇರುವ ಪ್ರದೇಶದಲ್ಲಿ ಓಡಿಕೊಂಡು ಬರುತ್ತಿರುವುದು ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತನನ್ನು ಕಂಡು ಜನರು ಹೆದರಿ ಓಡಿಹೋಗುತ್ತಿರುವುದನ್ನು ಕಾಣಬಹುದು. ಕೆಲ ಹೊತ್ತಿನ ನಂತರ ಇತನನ್ನು ಪೊಲೀಸರು ಬಂಧಿಸಿ, ಆತನ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಎಎನ್‌ಐ ಟ್ಟಿಟರ್​​ ಖಾತೆಯಲ್ಲಿ ಹಂಚಿಕೊಂಡ ಆಘಾತಕಾರಿ ಘಟನೆಯ ವಿಡಿಯೋ ಇಲ್ಲಿದೆ:

ಇದನ್ನೂ ಓದಿ: RRR ಚಿತ್ರಕ್ಕೂ ಟಾಮ್​ ಆ್ಯಂಡ್​ ಜೆರ್ರಿಗೂ ಏನು ಸಂಬಂಧ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​​​​​​ ಕಹಾನಿ

ಆರೋಪಿ ಕ್ರಿಶನ್ ಶೇರ್ವಾಲ್(29) ಎಂದು ಗುರುತಿಸಲಾಗಿದೆ. ಈತ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಇದೇ ಕಾರಣಕ್ಕಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಪೊಲೀಸರ ವಿಚಾರಣೆಯ ವೇಳೆಗೆ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಈ ವ್ಯಕ್ತಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪಿಸಿಆರ್ ವ್ಯಾನ್ ಸ್ಥಳಕ್ಕೆ ಧಾವಿಸಿದೆ. ಆತನ ಕೈಯಿಂದ ಪಿಸ್ತೂಲ್​ ಚಾಕು ವಶಪಡಸಿಕೊಳ್ಳುವ ವೇಳೆ ಪೊಲೀಸ್​​​ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ.
ಶೇರ್ವಾಲ್ ವಿರುದ್ಧ ಐಪಿಸಿ ಸೆಕ್ಷನ್ 307, 394, 397, 186, 353 ಮತ್ತು 27 ಅಡಿಯಲ್ಲಿ ಎಂಎಸ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!