Virat Kohli Records: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇದೀಗ ಈ ದಾಖಲೆ ಮುರಿಯುವತ್ತ ವಿರಾಟ್ ಕೊಹ್ಲಿ ದಾಪುಗಾಲಿಟ್ಟಿದ್ದಾರೆ.
Mar 12, 2023 | 3:30 PM






ತಾಜಾ ಸುದ್ದಿ
Updated on:Mar 12, 2023 | 3:30 PM
Mar 12, 2023 | 3:30 PM
ಟೆಸ್ಟ್ ಕ್ರಿಕೆಟ್ನಲ್ಲಿ ಮೂರುವರೆ ವರ್ಷಗಳ ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಶತಕ ಮೂಡಿಬಂದಿದೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಕಿಂಗ್ ಕೊಹ್ಲಿ 28ನೇ ಟೆಸ್ಟ್ ಶತಕದ ಸಾಧನೆ ಮಾಡಿದರು.
ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಶತಕದ ದಾಖಲೆಯನ್ನು ಬರೆದರು. ವಿಶೇಷ ಎಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ಬ್ಯಾಟ್ಸ್ಮನ್ 75 ಶತಕ ಬಾರಿಸಿಲ್ಲ. ಇದೀಗ ಈ ಪಟ್ಟಿಗೆ 2ನೇ ಆಟಗಾರನಾಗಿ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.
ಈ 75 ಶತಕಗಳೊಂದಿಗೆ ಕಿಂಗ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು. ಅಂದರೆ ಸಚಿನ್ ತೆಂಡೂಲ್ಕರ್ಗಿಂತಲೂ ವೇಗವಾಗಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಶತಕ ಪೂರೈಸಿದ್ದಾರೆ.
ಸಚಿನ್ ತೆಂಡೂಲ್ಕರ್ ಒಟ್ಟು 566 ಇನಿಂಗ್ಸ್ನಲ್ಲಿ 75 ಶತಕ ಬಾರಿಸಿದ್ದರು. ಇದೀಗ ಮಾಸ್ಟರ್ ಬ್ಲಾಸ್ಟರ್ ಅವರಿಗಿಂತ ವೇಗವಾಗಿ ಎಪ್ಪತ್ತೈದು ಶತಕಗಳನ್ನು ಪೂರೈಸಿದ್ದಾರೆ.
ಕಿಂಗ್ ಕೊಹ್ಲಿ ಒಟ್ಟು 552 ಇನಿಂಗ್ಸ್ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಶತಕಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 782 ಇನಿಂಗ್ಸ್ ಮೂಲಕ ಸಚಿನ್ ಒಟ್ಟು 100 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, 552 ಇನಿಂಗ್ಸ್ನಲ್ಲಿ 75 ಸೆಂಚುರಿ ಸಿಡಿಸಿರುವ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.