2.1 C
Munich
Monday, March 27, 2023

Virat Kohli had some memorabilia to give to his Australian teammates after IND vs AUS 4th Test Kannada News | Virat Kohli: ಪಂದ್ಯ ಮುಗಿದ ಬಳಿಕ ಆಸ್ಟ್ರೇಲಿಯಾದ ಇಬ್ಬರು ಪ್ಲೇಯರ್ಸ್​ಗೆ ಮರೆಯಲಾಗದ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ಓದಲೇಬೇಕು

India vs Australia 4th Test: ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಆಸೀಸ್ ಆಟಗಾರರ ಜೊತೆ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರ ಮನಗೆದ್ದಿತು.

Virat Kohli, Usman Khawaja and Alex Carey

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ (Border-Gavaskar Trophy) ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಈ ಮೂಲಕ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆ ಪಡೆದುಕೊಂಡು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಪ್ರವೇಶ ಪಡೆದಿದೆ. ಕಾಂಗರೂ ಪಡೆ ಕಲೆಹಾಕಿದ ದೊಡ್ಡ ಮೊತ್ತಕ್ಕೆ ಕಠಿಣ ಪೈಪೋಟಿ ನೀಡಿದ ಭಾರತ ವಿರಾಟ್ ಕೊಹ್ಲಿ (Virat Kohli) ಹಾಗೂ ಶುಭ್​ಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ಡ್ರಾ ಸಾಧಿಸಲು ನೆರವಾಯಿತು. 186 ರನ್ ಕಲೆಹಾಕಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಇದರ ನಡುವೆ ಪಂದ್ಯ ಮುಗಿದ ಬಳಿಕ ಆಸೀಸ್ ಆಟಗಾರರ ಜೊತೆ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರ ಮನಗೆದ್ದಿತು.

ಆಸ್ಟ್ರೇಲಿಯದ ಇಬ್ಬರು ಆಟಗಾರರಾದ ಉಸ್ಮಾನ್ ಖವಾಜಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರಿಗೆ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಸ್ಮರಣೀಯ ಉಡುಗೊರೆಯಾಗಿ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ವಿರಾಟ್‌ ಕೊಹ್ಲಿ ಆಸೀಸ್‌ ಆಟಗಾರರನ್ನು ಭೇಟಿಯಾಗಿ ತಮ್ಮ ಟೆಸ್ಟ್‌ ಟೀ-ಶರ್ಟ್‌ಗಳನ್ನು ಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಇದನ್ನೂ ಓದಿ



IND vs AUS: ಸತತ 4ನೇ ಟೆಸ್ಟ್ ಸರಣಿ ಸೋಲು; ಭಾರತದ ಮುಂದೆ ಕಾಂಗರೂಗಳ ಆಟ ನಡೆಯಲ್ಲ..!

ಮೂರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಶತಕ:

ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಶತಕ ಬಂತು. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು​ ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್​ ಇದಾಗಿದೆ. ಈ ಮೂಲಕ ಕೊಹ್ಲಿ ಅವರು ಟೆಸ್ಟ್​ ಕರಿಯರ್​​ನಲ್ಲಿ 28ನೇ ಸೆಂಚುರಿ, ಹಾಗೆಯೇ ತಮ್ಮ ವೃತ್ತಿ ಜೀವನದ 75ನೇ ಶತಕವನ್ನೂ ಪೂರ್ಣಗೊಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಕೊಹ್ಲಿ ಒಟ್ಟು 364 ಎಸೆತಗಳಲ್ಲಿ 15 ಫೋರ್​ನೊಂದಿಗೆ 186 ರನ್ ಗಳಿಸಿ ಔಟಾದರು. ಕೊಹ್ಲಿಯ ಈ ಶತಕ ಬಂದಿದ್ದು ಸುದೀರ್ಘ 41 ಇನ್ನಿಂಗ್ಸ್​​ಗಳ ಅಂತರದಲ್ಲಿ ಎಂಬುದು ವಿಶೇಷ. 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಟೆಸ್ಟ್​​​​ ಇನ್ನಿಂಗ್ಸ್​​​​​ಗಳನ್ನು ತೆಗೆದುಕೊಂಡಿದ್ದರು. 7 ಮತ್ತು 26ನೇ ಶತಕ ಸಿಡಿಸಲು ತಲಾ 10 ಇನ್ನಿಂಗ್ಸ್​ಗಳ ಅಂತರವಿತ್ತು.

ನಾಲ್ಕನೇ ಟೆಸ್ಟ್ ಪಂದ್ಯ ಹೇಗಿತ್ತು?:

ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಬೃಹತ್​ ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕಾಂಗರೂ ಪಡೆ ಉಸ್ಮಾನ್ ಖವಾಜಾ ಅವರ 180 ರನ್ ಮತ್ತು ಕ್ಯಾಮೆರಾನ್​ ಗ್ರೀನ್ ಅವರ 114 ರನ್ ನೆರವಿನಿಂದ 480 ರನ್​ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಶುಭ್​ಮನ್ ಗಿಲ್​ ಅವರ 128, ವಿರಾಟ್​ ಕೊಹ್ಲಿ 186 ಮತ್ತು ಅಕ್ಷರ್​ ಪಟೇಲ್​ ಅವರ 79 ರನ್​ಗಳ ನೆರವಿನಿಂದ 91 ರನ್​ಗಳ ಮುನ್ನಡೆ ಪಡೆದು 571 ರನ್​ಗೆ ಆಲೌಟ್ ಆಯಿತು. ಕೊನೆಯ ದಿನ ಆಸ್ಟ್ರೇಲಿಯಾ ತನ್ನ ಎಡರಡನೇ ಇನ್ನಿಂಗ್ಸ್​ನಲ್ಲಿ 78.1 ಓವರ್​ನಲ್ಲಿ 175 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!