11.8 C
Munich
Wednesday, March 8, 2023

Virat Kohli jumping in joy after watching Umesh Yadav take big sixes in IND vs AUS 3rd Test Kannada News | Umesh Yadav: ಉಮೇಶ್ ಯಾದವ್ ಸಿಕ್ಸರ್ ಸಿಡಿಸಿ ತನ್ನ ದಾಖಲೆ ಸರಿಗಟ್ಟಿದಾಗ ಡ್ರೆಸ್ಸಿಂಗ್ ರೂಮ್​ನಲ್ಲಿ ಕೊಹ್ಲಿ ಏನು ಮಾಡಿದ್ರು ನೋಡಿ

ಓದಲೇಬೇಕು

India vs Australia 3rd Test: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಕೋರ್ ಅನ್ನು ಮೂರಂಕಿ ತಲುಪಿಸಿದ್ದು ಉಮೇಶ್ ಯಾದವ್. ಮೊಹಮ್ಮದ್ ಶಮಿ ಬದಲು ಸ್ಥಾನ ಪಡೆದುಕೊಂಡ ಉಮೇಶ್ ಎರಡು ಸಿಕ್ಸರ್​ನೊಂದಿಗೆ 17 ರನ್ ಸಿಡಿಸಿದರು.

Umesh Yadav Six and Virat Kohli

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಸರಣಿಯಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕ್ಯಾಪ್ಟನ್ ನಿರ್ಧಾರವೆಲ್ಲ ಅರ್ಧದಿನದಲ್ಲೇ ತಲೆಕೆಳಗಾಯಿತು. ಕೇವಲ 33.2 ಓವರ್ ಬ್ಯಾಟಿಂಗ್ ಮಾಡಿದ ಭಾರತ 109 ರನ್​ಗೆ ಆಲೌಟ್ ಆಯಿತು. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 52 ಎಸೆತಗಳಲ್ಲಿ 22 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಶುಭ್​ಮನ್ ಗಿಲ್ 18 ಎಸೆತಗಲ್ಲಿ 21 ರನ್ ಬಾರಿಸಿದರು. ಉಳಿದವರ ಸ್ಕೋರ್ 20ರ ಗಡಿ ದಾಟಲಿಲ್ಲ.

ತನ್ನ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದ ಮ್ಯಾಥ್ಯೂ ಕುಹ್ನೆಮನ್ 16 ರನ್​ ಬಿಟ್ಟುಕೊಟ್ಟು ಭಾರತದ 5 ವಿಕೆಟ್​ಗಳನ್ನು ಕಬಳಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ 47 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಆರಂಭದಲ್ಲೇ ಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಭಾರತದ ಸ್ಕೋರ್ 100ರ ಗಡಿ ದಾಟುವುದು ಅನುಮಾನವಿತ್ತು. ರನ್ ಗಳಿಸಲು ಪರದಾಡುತ್ತಿದ್ದ ಭಾರತದ ಸ್ಕೋರ್ ಅನ್ನು ಮೂರಂಕಿ ತಲುಪಿಸಿದ್ದು ಉಮೇಶ್ ಯಾದವ್. ಮೊಹಮ್ಮದ್ ಶಮಿ ಬದಲು ಸ್ಥಾನ ಪಡೆದುಕೊಂಡ ಉಮೇಶ್ ಎರಡು ಸಿಕ್ಸರ್​ನೊಂದಿಗೆ 17 ರನ್ ಸಿಡಿಸಿದರು.

ಇದನ್ನೂ ಓದಿIND vs AUS: ಆಸೀಸ್ ವಿರುದ್ಧ ತವರಿನಲ್ಲಿ ಬೇಡದ ದಾಖಲೆ ಬರೆದ ಟೀಂ ಇಂಡಿಯಾ

ನಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಬೌಲಿಂಗ್​ನಲ್ಲಿ ಸಿಕ್ಸರ್ ಸಿಡಿಸಿದ ಉಮೇಶ್ ಯಾದವ್ ಅವರು ವಿರಾಟ್ ಕೊಹ್ಲಿ ದಾಖಲೆಯನ್ನೂ ಸರಿಗಟ್ಟಿದರು. ಕೊಹ್ಲಿ 181 ಟೆಸ್ಟ್ ಇನಿಂಗ್ಸ್​ಗಳಲ್ಲಿ ಒಟ್ಟು 24 ಸಿಕ್ಸ್​ಗಳನ್ನು ಬಾರಿಸಿದ್ದಾರೆ. 64 ಇನಿಂಗ್ಸ್​ ಮೂಲಕ ಉಮೇಶ್ ಕೂಡ 24 ಸಿಕ್ಸ್ ಬಾರಿಸಿ ಕೊಹ್ಲಿಯ ಸಾಧನೆಯನ್ನು ಸರಿಗಟ್ಟಿದ್ದಾರೆ. ಇತ್ತ ಉಮೇಶ್ ಸಿಕ್ಸ್ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟುತ್ತಿದ್ದಂತೆ ಅತ್ತ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ವಿರಾಟ್ ಕೂತಲ್ಲಿಂದಲೇ ಜಿಗಿದು ವಿಶೇಷವಾಗಿ ಸಂಭ್ರಮ ಪಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಡೇಜಾಗೆ ಸಾಥ್ ನೀಡಬೇಕಿದೆ ಅಶ್ವಿನ್-ಅಕ್ಷರ್:

ಭಾರತವನ್ನು ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ 2ನೇ ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ನಂತರ ಉತ್ತಮ ಜೊತೆಯಾಟ ಆಡಿತು. ಎರಡನೇ ಓವರ್​ ಮಾಡಿದ ಜಡೇಜಾ, ಟ್ರಾವಿಸ್ ಹೆಡ್ (9) ಅವರ ವಿಕೆಟ್​ ತೆಗೆದರು. ನಂತರ ಬಂದ ಮಾರ್ನಸ್ ಲಬುಶೇನ್​ (34) ಮತ್ತು ಉಸ್ಮಾನ್​ ಖವಾಜಾ (60) 100 ರನ್​ಗಳ ಜೊತೆಯಾಟವಾಡಿದರು. ನಾಯಕ ಸ್ಟೀವ್​ ಸ್ಮಿತ್​ (26) ಅವರನ್ನು ಕೂಡ ಜಡೇಜಾ ಪೆವಿಲಿಯನ್​ಗೆ ಅಟ್ಟಿದರು. ದಿನದಾಟದ ಅಂತ್ಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಭಾರತ ಪರ ಆಸ್ಟ್ರೇಲಿಯಾದ 4 ವಿಕೆಟ್ ಪಡೆದುರುವುದು ಜಡೇಜಾ ಮಾತ್ರ. ಇಂದು ಮಹತ್ವದ ದಿನ ಆಗಿರವುದರಿಂದ ಜಡ್ಡಿಗೆ ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!