Virat Kohli Century Record: 2019 ರಲ್ಲಿ ಕೊನೆಯ ಬಾರಿ ಟೆಸ್ಟ್ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ 1205 ದಿನಗಳ ಬಳಿಕ ಮೂರಂಕಿ ದಾಟಿರುವುದು ವಿಶೇಷ.
Mar 12, 2023 | 4:32 PM





ತಾಜಾ ಸುದ್ದಿ
Updated on: Mar 12, 2023 | 4:32 PM
Mar 12, 2023 | 4:32 PM
ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಸೆಂಚುರಿ ಬಾರಿಸಿದ 2ನೇ ಬ್ಯಾಟರ್ ಆಗಿ ಕಿಂಗ್ ಕೊಹ್ಲಿ ಹೊರಹೊಮ್ಮಿದ್ದಾರೆ.
2019 ರಲ್ಲಿ ಕೊನೆಯ ಬಾರಿ ಟೆಸ್ಟ್ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ 1205 ದಿನಗಳ ಬಳಿಕ ಮೂರಂಕಿ ದಾಟಿರುವುದು ವಿಶೇಷ. ಅದರಲ್ಲೂ ವಿಶೇಷ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಈ ಸಾಧನೆ ಮೂಡಿಬಂದಿದೆ.
ಹೌದು, ಇದು ವಿರಾಟ್ ಕೊಹ್ಲಿ ತವರಿನಲ್ಲಿ ಆಡುತ್ತಿರುವ 50ನೇ ಟೆಸ್ಟ್ ಪಂದ್ಯ. ಈ ಮೈಲುಗಲ್ಲಿನ ಮ್ಯಾಚ್ನಲ್ಲೇ ಶತಕ ಬಾರಿಸುವ ಮೂಲಕ ಕಿಂಗ್ ಕೊಹ್ಲಿ 40 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.
40 ವರ್ಷಗಳ ಹಿಂದೆ, ಅಂದರೆ 1983 ರಲ್ಲಿ ಭಾರತದಲ್ಲಿ 50ನೇ ಟೆಸ್ಟ್ ಪಂದ್ಯವಾಡಿದ್ದ ಸುನಿಲ್ ಗವಾಸ್ಕರ್ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ತವರಿನಲ್ಲಿ ಆಡಿದ 50ನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ ವಿಶೇಷ ದಾಖಲೆಯನ್ನು ಗವಾಸ್ಕರ್ ಬರೆದಿದ್ದರು.
ಇದೀಗ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಆಗಿ ಕಿಂಗ್ ಕೊಹ್ಲಿ ಹೊರಹೊಮ್ಮಿದ್ದಾರೆ. ಈ ಮೂಲಕ 40 ವರ್ಷಗಳ ಹಿಂದೆ ಸುನಿಲ್ ಗವಾಸ್ಕರ್ ಬರೆದಿಟ್ಟ ಇತಿಹಾಸವನ್ನು ವಿರಾಟ್ ಕೊಹ್ಲಿ ಪುನರಾವರ್ತಿಸಿದ್ದಾರೆ.