4.6 C
Munich
Tuesday, March 7, 2023

We have given time according to what the people of the country have given to Rahul Gandhi party, our government is not responsible for it – Pralhad Joshi | ದೇಶದ ಜನ ರಾಹುಲ್ ಪಕ್ಷಕ್ಕೆ ಏನು ತೀರ್ಪು ಕೊಟ್ಟಿದ್ದಾರೋ ಅದರ ಪ್ರಕಾರವೇ ಸಮಯ ನೀಡಿದ್ದೇವೆ, ಅದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ -ಪ್ರಲ್ಹಾದ್ ಜೋಶಿ ತಿರುಗೇಟು

ಓದಲೇಬೇಕು

Rahul Gandhi: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಧ್ವನಿಯನ್ನ ದೇಶದ ಜನರೇ ದಮನ ಮಾಡಿದ್ದಾರೆ. ಪ್ರತಿಪಕ್ಷವಾಗಿಯೂ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವಲ್ಲಿ‌ ವಿಫಲವಾಗಿದೆ. ಹೀಗಾಗಿ ದೇಶದ ಜನರು ಕಾಂಗ್ರೆಸ್ ಅನ್ನ ಪ್ರತಿಪಕ್ಷ ಸ್ಥಾನಕ್ಕೂ ಪುರಸ್ಕರಿಸಿಲ್ಲ – ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು

ಪ್ರಲ್ಹಾದ್ ಜೋಶಿ

ಲೋಕಸಭೆಯಲ್ಲಿ (Lok Sabha) ಪ್ರತಿಪಕ್ಷ ನಾಯಕರ ಮೈಕ್ ಅನ್ನ ಆಫ್ ಮಾಡುವ ಮೂಲಕ ಪ್ರತಿಪಕ್ಷಗಳ ಧ್ವನಿಯನ್ನ ದಮನ ಮಾಡಲಾಗ್ತಿದೆ ಎಂಬ ಕಾಂಗ್ರೆಸ್ (Congress)​ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪವನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಳ್ಳಿ ಹಾಕಿದ್ದಾರೆ. ರಾಹುಲ್ ಗಾಂಧಿ ಹೊರದೇಶದ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ‌ ಎಂದು ಜೋಶಿ ಕಿಡಿಕಾರಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಪತ್ರಕರ್ತರ ಜೊತೆ ಸಂವಾದದ ವೇಳೆ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಲ್ಲಗೆಳೆದಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರ ಧ್ವನಿಯನ್ನ ಹತ್ತಿಕ್ಕುವ, ದಮನ ಮಾಡುವ ಪ್ರಯತ್ನವನ್ನ ಸರ್ಕಾರವಾಗಲಿ, ಸ್ಪೀಕರ್ ಆಗಲಿ ಮಾಡಿಲ್ಲ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಧ್ವನಿಯನ್ನ ದೇಶದ ಜನರೇ ದಮನ ಮಾಡಿದ್ದಾರೆ. ಪ್ರತಿಪಕ್ಷವಾಗಿಯೂ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವಲ್ಲಿ‌ ವಿಫಲವಾಗಿದೆ. ಹೀಗಾಗಿ ದೇಶದ ಜನರು ಕಾಂಗ್ರೆಸ್ ಅನ್ನ ಪ್ರತಿಪಕ್ಷ ಸ್ಥಾನಕ್ಕೂ ಪುರಸ್ಕರಿಸಿಲ್ಲ.

ಲೋಕಸಭೆ ಅಧಿವೇಶನದಲ್ಲಿ‌ ಮೋಷನ್ ಆಫ್ ಥ್ಯಾಂಕ್ಸ್​​ ವೇಳೆ ರಾಹುಲ್ ಗಾಂಧಿಯವರಿಗೆ ನಿಯಮದ ಪ್ರಕಾರ 1 ಗಂಟೆ 9 ನಿಮಷ ಅವಕಾಶ ಕಲ್ಪಿಸಿಕೊಡಬಹುದು. ಆದರೂ, ಲೋಕಸಭೆ ಸ್ಪೀಕರ್ ಅವರು ರಾಹುಲ್ ಗಾಂಧಿಯವರಿಗೆ 2 ಗಂಟೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸದನದಲ್ಲಿ ಅವಕಾಶ ಕಲ್ಪಿಸಿದರೂ, ರಾಹುಲ್ ಗಾಂಧಿ ಸರ್ಕಾರದ ಮೇಲೆ ಆಧಾರರಹಿತ ಆರೋಪಗಳನ್ನ ಮಾಡುತ್ತಿದ್ದರು. ಸದನದ ನಿಯಮದ ಪ್ರಕಾರ ಯಾವುದೇ ಪ್ರಾಥಮಿಕ ಮಾಹಿತಿ, ದಾಖಲೆಗಳನ್ನ ರಾಹುಲ್ ಗಾಂಧಿ ಒದಗಿಸಿರಲಿಲ್ಲ.

ಇದನ್ನೂ ಓದಿ:  ಉಗ್ರರ ವಿಚಾರದಲ್ಲಿ ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಬಿಟ್ಟು, ದೇಶದ ಜೊತೆ ನಿಲ್ಲುವುದನ್ನ ಕಲಿಯಲಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಸದನದಲ್ಲಿ ಪ್ರತಿಪಕ್ಷಗಳ ನಾಯಕರ ಮೈಕ್ ಗಳನ್ನ ಆಫ್ ಮಾಡಲಾಗ್ತಿದೆ ಎಂದು ಆರೋಪಿಸುವ ರಾಹುಲ್ ಗಾಂಧಿ, ತಮ್ಮ ಅಜ್ಜಿ ತುರ್ತು ಪರಿಸ್ಥಿತಿ ಹೇರಿ ದೇಶದ ಎಲ್ಲ ವಿಪಕ್ಷ ನಾಯಕರನ್ನ ಬಂಧಿಸಲು ಆದೇಶಿಸಿದ್ದನ್ನ ಮರೆತಂತಿದೆ. ಇವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕನ ಧೋರಣೆಯನ್ನು ಜೋಶಿ ಲೇವಡಿ ಮಾಡಿದರು.

ಸದನದ ನಿಯಮಾವಳಿ ಪ್ರಕಾರ ಸಂಸದ ರಾಹುಲ್ ಗಾಂಧಿ ಅವರಿಗೆ ಎಷ್ಟು ಸಮಯ ಕೊಡಬಹುದು ಅಷ್ಟನ್ನ ಕೊಡಲಾಗ್ತಿದೆ. ಅದಕ್ಕೆ ಜನರು ರಾಹುಲ್ ಗಾಂಧಿಯವರ ಪಕ್ಷಕ್ಕೆ ಕೊಟ್ಟಿರುವ ತೀರ್ಪು ಕಾರಣವೇ ಹೊರತು ಸರ್ಕಾರವಲ್ಲ. ಆದರೂ, ವಿದೇಶದ ನೆಲದಲ್ಲಿ ಸ್ಪೀಕರ್ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡ್ತಿರುವುದು ಅವರ ಬಾಲಿಶತನವನ್ನ ತೋರಿಸುತ್ತದೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!