7.3 C
Munich
Saturday, April 1, 2023

Who is Anjali Kaur Deputy Assistant Administrator of USAID visiting India | Anjali Kaur: ಭಾರತಕ್ಕೆ ಭೇಟಿ ನೀಡಿರುವ USAID ಅಧಿಕಾರಿ ಅಂಜಲಿ ಕೌರ್ ಯಾರು?

ಓದಲೇಬೇಕು

ಅವರು ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ
USAID ಗೆ ಸೇರುವ ಮೊದಲು, ಕೌರ್ ಅವರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಹಿರಿಯ ಪ್ರೊಗ್ರಾಂ ಆಫೀಸರ್ ಆಗಿದ್ದರು

ಅಂಜಲಿ ಕೌರ್

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ನ ಡೆಪ್ಯುಟಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟರ್ ಅಂಜಲಿ ಕೌರ್ (Anjali Kaur) ಅಮೆರಿಕ-ಭಾರತದ ಅಭಿವೃದ್ಧಿ ಸಂಬಂಧವನ್ನು ಹೆಚ್ಚಿಸಲು ಈಗ ಭಾರತದಲ್ಲಿದ್ದಾರೆ. ಅವರು ಮಾರ್ಚ್ 15 ರಂದು ದೆಹಲಿಯಲ್ಲಿ ನಡೆಯುವ ಮಹಿಳಾ ಇತಿಹಾಸ ತಿಂಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಲಿಂಗ ಆಧಾರಿತ ಹಿಂಸೆ, ಕಳಂಕ ಮತ್ತು ತಾರತಮ್ಯವನ್ನು ಪರಿಹರಿಸುವ ಮತ್ತು ತಮ್ಮ ಸಮುದಾಯಗಳಲ್ಲಿ ಆರೋಗ್ಯ ಸೇವೆಗಳಿಗೆ ಸಮಾನ ಪ್ರವೇಶಕ್ಕೆ ಅಡೆತಡೆಗಳನ್ನು ಕಡಿಮೆ ಮಾಡುವ ನಾಯಕಿಯರಿಗೆ ಕೌರ್ ಬೆನ್ನು ತಟ್ಟಲಿದ್ದಾರೆ.

ಯಾರು ಈ ಅಂಜಲಿ ಕೌರ್

ಅಂಜಲಿ ಕೌರ್ ಅವರು ಏಷ್ಯಾದ ಬ್ಯೂರೋದ ಉಪ ಸಹಾಯಕ ನಿರ್ವಾಹಕರಾಗಿದ್ದಾರೆ. ಅವರು ಪುರಾವೆ ಆಧಾರಿತ, ಸಮಗ್ರ ಜಾಗತಿಕ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಕ್ಷೇತ್ರ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಸಮಗ್ರ ಅನುಭವವನ್ನು ಹೊಂದಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ವೃತ್ತಿಪರರಾಗಿದ್ದಾರೆ.

ಅವರು ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ
USAID ಗೆ ಸೇರುವ ಮೊದಲು, ಕೌರ್ ಅವರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಹಿರಿಯ ಪ್ರೊಗ್ರಾಂ ಆಫೀಸರ್ ಆಗಿದ್ದರು. ಅಲ್ಲಿ ಅವರು HIV ಮತ್ತು TB ಕಾರ್ಯಕ್ರಮಗಳಿಗೆ ಜಾಗತಿಕ ನೀತಿ ಮತ್ತು ಸಲಹಾ ತಂತ್ರಗಳನ್ನು ಮುನ್ನಡೆಸಿದರು.

ಇದನ್ನೂ ಓದಿ: ದೇಶದಲ್ಲಿ H3N2 ವೈರಸ್ ಆತಂಕ: ರೋಗಿಗಳಿಗೆ ಫ್ಲೂ ಜತೆಗೆ ಕಿವಿ ತುಂಬಿದಂಥಾ ಅನುಭವ; ಇದು ರೋಗ ಲಕ್ಷಣ ಎಂದ ವೈದ್ಯರು

ಅದಕ್ಕೂ ಮೊದಲು, ಅವರು ಮಲೇರಿಯಾ ನೋ ಮೋರ್‌ಗಾಗಿ ಏಷ್ಯಾ ಪೆಸಿಫಿಕ್‌ನ ಹಿರಿಯ ನಿರ್ದೇಶಕರಾಗಿದ್ದರು, ಅಲ್ಲಿ ಅವರು ಭಾರತ ಕಚೇರಿಯನ್ನು ಸ್ಥಾಪಿಸಿದ್ದು ಪ್ರದೇಶದಾದ್ಯಂತ ಸಂಸ್ಥೆಯ ಕೆಲಸವನ್ನು ಸರ್ಕಾರಗಳು, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ಮಾಧ್ಯಮಗಳೊಂದಿಗೆ ವಿಸ್ತರಿಸಿದರು.

ಕೌರ್ ಅವರು ಯುನಿಸೆಫ್‌ನ ಪೋಲಿಯೊ ಕಾರ್ಯಕ್ರಮದೊಂದಿಗೆ ಕೆಲಸ ಮಾಡಿದ್ದು, ಅಲ್ಲಿ ಅವರು ದೇಶ ಮತ್ತು ಪ್ರಧಾನ ಕಚೇರಿ ಹಂತಗಳಲ್ಲಿ, ಹಾಗೆಯೇ ವಿಶ್ವ ಬ್ಯಾಂಕ್ ಮತ್ತು UNFPA ಯೊಂದಿಗೆ ಕೆಲಸ ಮಾಡಿದ್ದರು. ಪೋಲಿಯೊ ಸದ್ಭಾವನಾ ರಾಯಭಾರಿಗಳಾಗಿ ಸೇವೆ ಸಲ್ಲಿಸಲು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಸೇರಿದಂತೆ ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!