ಬೆಂಗಳೂರ: ನಗರದ ಕೋರಮಂಗಲ ನಗರದಲ್ಲಿ ಹಮ್ಮಿಕೊಂಡ 13ನೇ ಅಖಿಲ ಕರ್ನಾಟಕ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜನ್ನ ಶೀಟೋರಿಯೋ ಕರಾಟೇ ಅಸೋಸಿಯೇಷನ್ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ದಶರತ್ ದುಮ್ಮನ್ಸೂರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕರಾಟೆ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳಲ್ಲಿ ನರ್ಮದಾ ದೇವಿ ಕಾಲೇಜು ಸೇಡಂ ನಗರದ ವಿದ್ಯಾರ್ಥಿನಿ ವಿದ್ಯಾಶ್ರೀ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಅದೇ ರೀತಿಯಾಗಿ ಈಶಾನ್ಯ ಎಚ್‌ಪಿ ಎಸ್ ಸ್ಕೂಲ್ ಸೇಡಂ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಕುಮಾರಿ ಅಪೂರ್ವ ಎಚ್ ಪಿ ಎಸ್ ಸ್ಕೂಲ್ ಸೇಡಂ ವಿದ್ಯಾರ್ಥಿನಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಹಾಗೂ ಕಲ್ಬುರ್ಗಿ ನಗರದ ಡೂಮಿನಟ್ಸ್ ಶಾಲೆಯ ವಿದ್ಯಾರ್ಥಿ ಹರ್ಷ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಲ್ಯಾಣ ಕರ್ನಾಟಕದ ಜನ್ನ್ ಶೀಟೊರಿಯೋ ಕರಾಟೆ ಅಸೋಸಿಯೇಷನ್ ಮುಖ್ಯ ಸಲಹೆಗಾರರಾದ ಶ್ರೀಮತಿ ಶಶಿಕಲಾ ಡಿ ದುಮ್ಮನಸೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬ ಕರಾಟೆ ತರಬೇತಿದಾರರು ಕರಾಟೆಯನ್ನು ಒಂದು ಹವ್ಯಾಸವಾಗಿ ಒಂದು ಕ್ರೀಡೆಯಾಗಿ ರೂಡಿಸಿಕೊಳ್ಳಬೇಕು ಇದರಿಂದ ಅಕಾಲಿಕ ಮುಪ್ಪು ತಡೆಯಬಹುದು ಸದೃಢವಾದ ಆರೋಗ್ಯ ಹೊಂದಬಹುದು ಅಲ್ಲದೆ ಪ್ರತಿಕೂಲ ಸನ್ನಿವೇಶದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು ಅಲ್ಲದೆ ಮತ್ತೊಬ್ಬರ ರಕ್ಷಣೆ ಸಹಿತ ನಾವು ಮಾಡಬಹುದು ಎಂದು ತರಬೆತಿದರಿಗೆ ಕಿವಿ ಮಾತು ಹೇಳಿದರು ಈಗಾಗಲೇ ನಮ್ಮ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಆರಿಸಿದ್ದಾರೆ ಅದೇ ರೀತಿಯಾಗಿ ಪ್ರತಿಯೊಬ್ಬರು ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರಿ ಇಟ್ಟುಕೊಂಡು ಪ್ರಾಕ್ಟೀಸ್ ಮಾಡಿದರೆ ನೀವು ಅಂದುಕೊಂಡ ಗುರಿಯನ್ನು ಸಾಧಿಸಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸೆನ್ಸಯ ಹಣಮಂತ್ ಭರತನೂರ್ ಸೇಡಂ ತಾಲೂಕಿನ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಭಾಗವಹಿಸಿದ್ದರು ಅದೇ ರೀತಿಯಾಗಿ ಸೇಡಂ ತಾಲೂಕಿನ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರು ಕಾಶಿನಾಥ ತರದೊಳ್ಳಿ ಹಾಗೂ ಸೇನ್ಸಾಯ ಅನಿಲ್ ಕುಮಾರ್ ಹಳಿಮನಿ ಸೇಡಂ ಸೆನ್ಸಯ ಸೈಬಣ್ಣ ಹಳ್ಳೊಳ್ಳಿ ಸೇಡಂ ಹಾಗೂ ಮಾಹದೇವಿ ಆಪಜಲ್ಲಪುರ ಹಾಗೂ ಭಾಗ್ಯಶ್ರೀ ಪರತಾಬಾದ್ ಹಾಗೂ ರಂಜಿತಾ ಗುಲ್ಬರ್ಗ. ಮಾಲಾಶ್ರೀ ಗುಲ್ಬರ್ಗ. ಅನುಸೂಯ ಅಶೋಕ್ ನಗರ. ಜಟ್ಟಪ್ಪ ಎಸ್ ಪೂಜಾರಿ ಜೇವರ್ಗಿ ತಾಲೂಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಅಮರನಾಥ್ ಮಧುರಕರ ಜೇವರ್ಗಿ ತಾಲೂಕ ಉಪಾಧ್ಯಕ್ಷರು ಹಾಗೂ ಮುತ್ತಪ್ಪ ಶಿವಾಯ ನಮಃ ಕರಾಟೆ ವೀರೇಶ್ ಜೇವರ್ಗಿ ಹಾಗೂ ಲಕ್ಷ್ಮಿ ರಾಠೋಡ್ ಚಿತ್ತಾಪುರ ತಾಲೂಕ ಕರಾಟೆ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು