8.8 C
Munich
Monday, March 20, 2023

Woman With 9 Kids: The now 39 year old was mother to nine kids by the age of 28 | Viral News: 18 ವರ್ಷ ತುಂಬುವ ಮೊದಲೇ ಚೊಚ್ಚಲ ಮಗು ಹೆತ್ತು 28ನೇ ವಯಸ್ಸಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಓದಲೇಬೇಕು

ಡ್ಯೂಕ್ 2001ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಸಲ ಗರ್ಭಿಣಿಯಾಗಿದ್ದಳು. ಇದಾದ ಬಳಿಕ ಹತ್ತು ವರ್ಷಗಳಲ್ಲಿ ಪ್ರತೀ ವರ್ಷ ಒಂದೊಂದು ಮಗುವಿನಂತೆ, ತನ್ನ 28 ನೇ ವಯಸ್ಸಿನಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

28ನೇ ವಯಸ್ಸಿಗೆ 9 ಮಕ್ಕಳನ್ನು ಹೆತ್ತ ಮಹಿಳೆ

Image Credit source: indiatimes

ಮದುವೆಯ ನಂತರ ದಂಪತಿಗಳು ತಮ್ಮ ವಂಶವನ್ನು ಬೆಳೆಸಲು ಮಗುವನ್ನು ಬಯಸುವುದು ಸಹಜ. ಒಂದೋ ಎರಡು, ಹೆಚ್ಚೆಂದರೆ ಮೂರು ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆ ತನ್ನ 17 ನೇ ವಯಸ್ಸಿಗೆ ಮೊದಲ ಮಗು ಹಾಗೂ 28ನೇ ವಯಸ್ಸಿನಲ್ಲಿ ಒಟ್ಟು 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ.  12 ವರ್ಷಗಳ ಹಿಂದೆ ಪ್ರತೀ ವರ್ಷ ಒಂದೊಂದು ಮಗುವನ್ನು ಹೆರುತ್ತಿದ್ದಳು ಈ ಮಹಿಳೆ. ಇತ್ತೀಚಿಗೆ ತನ್ನ 9 ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಇದೀಗಾ ಭಾರೀ ವೈರಲ್​​ ಆಗಿದೆ.

ಲಾಸ್​​ ವೇಗಸ್​​ ಮೂಲದ 39 ವರ್ಷದ ಡ್ಯೂಕ್ ಎಂಬ ಮಹಿಳೆಯ ಕಥೆ ಇದು. ಡ್ಯೂಕ್ 2001ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಳು. ಇದಾದ ಹತ್ತು ವರ್ಷಗಳಲ್ಲಿ ಪ್ರತೀ ವರ್ಷ ಒಂದೊಂದು ಮಗುವಿನಂತೆ, ತನ್ನ 28 ನೇ ವಯಸ್ಸಿನಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅಂದರೆ 2001ರಲ್ಲಿ ಮೊದಲ ಮಗು ಹಾಗೂ 2012ರಲ್ಲಿ ಕೊನೆಯ 9ನೇ ಮಗುವನ್ನು ಹೆತ್ತಿದ್ದಾಳೆ. ಈಗ ಈಕೆಗೆ 39ವರ್ಷ.

ಇದನ್ನೂ ಓದಿ: 47 ನೇ ವಯಸ್ಸಿನಲ್ಲಿ ಗರ್ಭಧಾರಣೆ, ಕಡೆಗೂ ನೆರವೇರಿದ ಕನಸು

ಈಕೆಯ ಒಟ್ಟು 9 ಮಕ್ಕಳಲ್ಲಿ ಮೂರನೇ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಕಾಯಿಲೆಯಿಂದ ಮರಣ ಹೊಂದಿದ್ದು. ಇದೀಗಾ ತನ್ನ ಎಂಟು ಮಕ್ಕಳು ಮತ್ತು ಪತಿಯೊಂದಿಗೆ ಸುಂದರ ಜೀವನ ನಡೆಸುತ್ತಿದ್ದಾರೆ. ಡ್ಯೂಕ್ ತನ್ನ ಒಂಬತ್ತನೇ ಮಗುವಿಗೆ ಜನ್ಮ ನೀಡಿದ ನಂತರ ಟ್ಯೂಬಲ್ ಲಿಗೇಶನ್ ಅಂದರೆ ಜನನ ನಿಯಂತ್ರಣ ಮಾಡಿಸಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!