5.4 C
Munich
Sunday, March 26, 2023

Women Bodybuilders Flex Muscles In Front Of Hanuman’s Image, Video Goes Viral | Women Body Builders: ಆಂಜನೇಯ ವಿಗ್ರಹದೆದುರು ಬಿಕಿನಿ ತೊಟ್ಟು ಪೋಸ್ ಕೊಟ್ಟ ಮಹಿಳಾ ಬಾಡಿ ಬಿಲ್ಡರ್​ಗಳು, ಗಂಗಾಜಲ ಹಾಕಿ ಶುಚಿಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು

ಓದಲೇಬೇಕು

ಆಂಜನೇಯ ವಿಗ್ರಹದೆದುರು ಬಿಕಿನಿ ತೊಟ್ಟು ಮಹಿಳಾ ಬಾಡಿ ಬಿಲ್ಡರ್​ಗಳು ಪೋಸ್​ ಕೊಟ್ಟಿದ್ದು, ವಿವಾಹ ಹುಟ್ಟಿಕೊಂಡಿದೆ.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದ 13ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯು ಇದೀಗ ವಿವಾದವನ್ನು ಹುಟ್ಟುಹಾಕಿದೆ.

ಮಹಿಳಾ ಬಾಡಿ ಬಿಲ್ಡರ್​ಗಳು

ಆಂಜನೇಯ ವಿಗ್ರಹದೆದುರು ಬಿಕಿನಿ ತೊಟ್ಟು ಮಹಿಳಾ ಬಾಡಿ ಬಿಲ್ಡರ್​ಗಳು ಪೋಸ್​ ಕೊಟ್ಟಿದ್ದು, ವಿವಾಹ ಹುಟ್ಟಿಕೊಂಡಿದೆ.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದ 13ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯು ಇದೀಗ ವಿವಾದವನ್ನು ಹುಟ್ಟುಹಾಕಿದೆ. ಬ್ರಹ್ಮಚಾರಿಯಾದ ಆಂಜನೇಯನನ್ನು ನಿಲ್ಲಿಸಿಕೊಂಡು ಯುವತಿಯರು ದೇಹಪ್ರದರ್ಶನ ಮಾಡಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯವರು ಈ ರೀತಿ ಆಂಜನೇಯನಿಗೆ ಅವಮಾನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಖಾರವಾಗಿ ಟೀಕಿಸಿದ್ದಾರೆ.

ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡಿದರೆ ದೇಶವಿರೋಧಿಗಳು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದರೆ ಹಿಂದೂ ವಿರೋಧಿಗಳು ಎನ್ನುವ ಕಲ್ಪನೆ ಸೃಷ್ಟಿಯಾಗಿದೆ. ಇನ್ನೂ ಕೆಲವೊಮ್ಮೆ ಕರ್ನಾಟಕಕ್ಕೆ ಹೋಲಿಕೆ ಮಾಡಿದಾಗ ಮೀನು ಸಾರು ತಿಂದು ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋದರೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು, ನಾನು ಮೀನು ತಿಂದಿಲ್ಲ ಎಂದರೂ ಯಾರೂ ಕೇಳಿಸಿಕೊಳ್ಳಲು ತಯಾರಿರಲಿಲ್ಲ,  ಹಾಗೆಯೇ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಂಸದ ಅಡುಗೆ ಊಟ ಮಾಡಿ, ದೇವರ ಗರ್ಭ ಗುಡಿಯ ಮುಂದೆಯೇ ನಿಂತಿರುವ ವೀಡಿಯೋ ಹರಿದಾಡಿತ್ತು, ನಾನು ಗೇಟ್​ನಲ್ಲೇ ಕೈಮುಗಿದು ಬಂದೆ ಎನ್ನುವ ಹೇಳಿಕೆ ನೀಡಿ ಸುಮ್ಮನಾಗಿದ್ದರು.

ಇನ್ನು ಸಾಹಿತಿ ಭಗವಾನ್ ಶ್ರೀರಾಮಚಂದ್ರ ಮಾಂಸಹಾರಿ ಎಂದು ಬರೆದಿದ್ದಕ್ಕೆ ದೊಡ್ಡ ಗಲಾಟೆ ಆಗಿತ್ತು. ಕಪ್ಪು ಮಸಿ ಬಳಿಯಲಾಗಿತ್ತು. ಇದೀಗ ಆಂಜನೇಯನ ವಿಗ್ರಹದ ಮುಂದೆ ಬಾಡಿ ಬಿಲ್ಡರ್​ಗಳು ಬಿಕಿನಿ ತೊಟ್ಟು ನಿಂತು ಪೋಸ್ ನೀಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಯಾಂಕ್ ಜಾಟ್ ಮಾತನಾಡಿ, ಇದರಲ್ಲಿ ಭಾಗಿಯಾದವರನ್ನು ಹನುಮಂತನು ಶಿಕ್ಷಿಸುತ್ತಾನೆ ಎಂದು ಹೇಳಿದ್ದಾರೆ.

ರಾಜಸ್ಥಾನ ಹಾಗು ಗುಜರಾತ್​ ಗಡಿಯಲ್ಲಿರುವ ಮಧ್ಯಪ್ರದೇಶ ರತ್​ಲಮ್​ ಅನ್ನೋ ನಗರದಲ್ಲಿ ರಾಷ್ಟ್ರೀಯ ಬಾಡಿ ಬಿಲ್ಡರ್ಸ್​ ಚಾಂಪಿಯನ್​ಶಿಪ್​ ಆಯೋಜನೆ ಮಾಡಲಾಗಿತ್ತು. ಬಿಜೆಪಿ ನಾಯಕ ಹಾಗು ರತ್​ಲಮ್​ ನಗರದ ಮೇಯರ್​ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ಆಗಿರುವುದು ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.

ಅಷ್ಟೇ ಅಲ್ಲದೆ ಬಾಡಿ ಬಿಲ್ಡಿಂಗ್​ ಸ್ಪರ್ಧೆ ಆಯೋಜನೆ ಮಾಡಿದ್ದ ಸ್ಥಳವನ್ನು ಕಾಂಗ್ರೆಸ್​ ಕಾರ್ಯಕರ್ತರು ಗಂಗಾಜಲದಿಂದ ಸ್ವಚ್ಛ ಮಾಡಿದ್ದಾರೆ. ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ವಿನಾಯಕ ಸಭಾಭವನದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಸರಿಸುಮಾರು 350 ಯುವತಿಯರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಿಕಿನಿ ತೊಟ್ಟು ಭಾಗವಹಿಸಿದ್ದರು. ಮಹಾರಾಷ್ಟ್ರ, ಹರಿಯಾಣ, ಕರ್ನಾಟಕದಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ಮೇಯರ್​ ಪ್ರಹ್ಲಾದ್​ ಪಟೇಲ್ ಉದ್ಘಾಟನೆ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು, ವೀಡಿಯೋ ವೈರಲ್​ ಆದ ಬಳಿಕ ಬಿಜೆಪಿ ಮುಖಂಡರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಧಾರ್ಮಿಕ ಭಾವನೆ ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!