0.2 C
Munich
Monday, March 27, 2023

World Famous Bodybuilders Nathan Jones and Rubiel Mosquera Acted In Martin Kannada Movie | Martin: ಮಾರ್ಟಿನ್ ಸಿನಿಮಾದಲ್ಲಿ ನಟಿಸಿರುವ ಆ ಇಬ್ಬರು ದೈತ್ಯರು ಯಾರು? ಅವರ ವ್ಯಾಯಾಮ, ಆಹಾರ ಕ್ರಮವೇನು?

ಓದಲೇಬೇಕು

ಮಾರ್ಟಿನ್ ಕನ್ನಡ ಸಿನಿಮಾದಲ್ಲಿ ನಟಿಸಿರುವ ಆ ಇಬ್ಬರು ದೈತ್ಯರು ಯಾರು? ಅವರ ಹಿನ್ನೆಲೆ ಏನು? ಅವರ ವ್ಯಾಯಾಮ ಮತ್ತು ಆಹಾರ ಕ್ರಮವೇನು?

ಮಾರ್ಟಿನ್ ಸಿನಿಮಾದಲ್ಲಿ ನಟಿಸಿರುವ ನ್ಯಾಥನ್ ಜೋನಸ್, ರೂಬಿಲ್ ಮೊಸ್ಕ್ಯುರಾ

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ನಿನ್ನೆಯಷ್ಟೆ (ಫೆಬ್ರವರಿ 23) ಬಿಡುಗಡೆ ಆಗಿದೆ. ಟೀಸರ್ ಅನ್ನು ಸಿನಿ ಪ್ರೇಮಿಗಳು ಇಷ್ಟಪಟ್ಟಿದ್ದು, ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಟೀಸರ್​ನಲ್ಲಿನ ಭರ್ಜರಿ ಆಕ್ಷನ್, ಧ್ರುವ ಸರ್ಜಾರ ಮಾಸ್ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿಯೂ ಟೀಸರ್​ನ ಅಂತ್ಯದಲ್ಲಿ ಧ್ರುವ ಸರ್ಜಾ ಇಬ್ಬರು ಮಹಾನ್ ದೈತರೊಟ್ಟಿಗೆ ಸೆಣೆಸಾಡುವ ದೃಶ್ಯದ ತುಣುಕಂತೂ ಅದ್ಭುತವಾಗಿದೆ. ಟೀಸರ್​ನಲ್ಲಿ ಕಾಣುವ ಆ ಇಬ್ಬರು ನಿಜಕ್ಕೂ ಮನುಷ್ಯರೇನಾ ಎಂಬ ಅನುಮಾನ ಬರುವಷ್ಟು ದೈತ್ಯಾಕಾರ ಅವರದ್ದು.

ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಸೆಣೆಸಾಡಿರುವ ದೈತ್ಯರ ಹೆಸರು ನ್ಯಾಥನ್ ಜೋನಸ್ ಮತ್ತು ರೂಬಿಲ್ ಮೊಸ್ಕ್ಯುರಾ. ವಿಶ್ವದ ಅತ್ಯುತ್ತಮ ಬಾಡಿಬಿಲ್ಡರ್, ರೆಸ್ಟಲರ್​ಗಳಲ್ಲಿ ಇವರ ಹೆಸರು ಆರಂಭದಲ್ಲಿಯೇ ಕೇಳಿ ಬರುತ್ತದೆ.

ಹಾಲಿವುಡ್ ಸಿನಿಮಾಗಳ ಪರಿಚಯ ಅಜಾನುಬಾಹು ನ್ಯಾಥನ್ ಜೋನಸ್ ಹಳಬರೆ. ಜಾಕಿಚಾನ್​ರ ‘ಫಸ್ಟ್ ಸ್ಟ್ರೈಕ್’, ಟೋನಿ ಜಾ ನಟನೆಯ ‘ದಿ ಪ್ರೊಟೆಕ್ಟರ್’, ಆಸ್ಕರ್ ವಿಜೇತ ‘ಮ್ಯಾಡ್​ ಮ್ಯಾಕ್ಸ್; ಫ್ಯೂರಿ ರೋಡ್’, ‘ದಿ ಸ್ಕಾರ್ಪಿಯನ್ ಕಿಂಗ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ಹಾಬ್ಸ್ ಆಂಡ್ ಶಾ’, ‘ಟ್ರಾಯ್’ ಸಿನಿಮಾಗಳ ಜೊತೆಗೆ ತಮಿಳಿನ ‘ಭೂಲಾಹಂ’, ಹಿಂದಿಯ ‘ಎ ಫ್ಲೈಯಿಂಗ್ ಜೆಟ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

Martin Movie: ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರದ ಹೆಸರು ಏನು? ಮಾರ್ಟಿನ್ ಯಾರು?

ಫ್ರೊಫೆಷನಲ್ ರೆಸ್ಲರ್ ಸಹ ಆಗಿದ್ದ ನ್ಯಾಥನ್ ಜೋನಸ್ ಡಬ್ಲುಡಬ್ಲುಎ, ಡಬ್ಲುಡಬ್ಲುಇ ನಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ರೆಸ್ಲಿಂಗ್​ ರಿಂಗ್​ಗೆ ಇಳಿಯುವ ಮುನ್ನ ಆಸ್ಟ್ರೇಲಿಯಾದಲ್ಲಿ ದರೋಡೆಕೋರನಾಗಿದ್ದ ನ್ಯಾಥನ್ 16 ವರ್ಷ ಜೈಲುವಾಸವನ್ನೂ ಅನುಭವಿಸಿದ್ದಾರೆ. ಜೈಲಿನಲ್ಲಿಯೇ ವೇಟ್​ಲಿಫ್ಟಿಂಗ್​, ಬಾಡಿಬಿಲ್ಡಿಂಗ್​ಗೆ ಪರಿಚಯಗೊಂಡ ನ್ಯಾಥನ್ ಅಲ್ಲಿಂದ ತಮ್ಮ ಜೀವನದ ಹಾದಿ ಬದಲಾಯಿಸಿಕೊಂಡರು.

ನ್ಯಾಥನ್​ನ ನೆಚ್ಚಿನ ವ್ಯಾಯಾಮ ವೇಟ್​ಲಿಫ್ಟಿಂಗ್. ಜೈಲಿನಲ್ಲಿ ಇದ್ದಾಗಿನಿಂದಲೂ ವೇಟ್​ಲಿಫ್ಟಿಂಗ್ ಮಾಡುತ್ತಲಿರುವ ನ್ಯಾಥನ್ ತಮ್ಮ 22 ನೇ ವಯಸ್ಸಿನಲ್ಲಿಯೇ 340 ಕೆಜಿ ಡೆಡ್ ಲಿಫ್ಟ್ ಮಾಡಿ ವಿಶ್ವದಾಖಲೆ ಮುರಿದಿದ್ದರು. ಈಗಲೂ ಅವರಿಗೆ ವೇಟ್​ಲಿಫ್ಟಿಂಗ್ ಮೆಚ್ಚಿನ ವ್ಯಾಯಾಮವಂತೆ. ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವ ನ್ಯಾಥನ್, ಮಾಂಸಾಹರ ಹಾಗೂ ಸಸ್ಯಜನ್ಯ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತಾರೆ. ತಾವು ದೈತ್ಯ ದೇಹಿಯಾಗಿರುವ ಕಾರಣ ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇದ್ದು, ಅದಕ್ಕಾಗಿ ಹೆಚ್ಚುವರಿ ಪ್ರೋಟೀನ್ ಸೇವನೆ ಮಾಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಮ್ಮ ವ್ಯಾಯಾಮ ಹಾಗೂ ಆಹಾರದ ಬಗ್ಗೆ ಮಾತನಾಡಿದ್ದಾರೆ.

Martin Teaser: ಬಂದ ಮಹಾನ್ ಕ್ರೂರಿ ಮಾರ್ಟಿನ್, ಆಕ್ಷನ್ ತುಂಬಿದ ಟೀಸರ್​ನಲ್ಲಿ ಅಬ್ಬರಿಸಿದ ಧ್ರುವ ಸರ್ಜಾ

ಟೀಸರ್​ನಲ್ಲಿ ಗಮನ ಸೆಳೆವ ಮತ್ತೊಬ್ಬ ದೈತ್ಯ, ತುಸು ಕುಳ್ಳಗೆ, ಕಪ್ಪಗಿನ ರೂಬಿಲ್ ಮೊಸ್ಕ್ಯುರಾ. ಈತನನ್ನು ದೈತ್ಯ ಜನಗಳ ಲೋಕ ಕರೆಯುವುದು ‘ನೆಕ್​ಜಿಲಾ’ ಎಂದು. ಭಾರಿ ಗಾತ್ರದ ಕತ್ತು ಹೊಂದಿರುವ ಕಾರಣಕ್ಕೆ ರೂಬಿಲ್​ಗೆ ಈ ಹೆಸರು ಬಂದಿದೆ. ಅವರಷ್ಟು ದಪ್ಪ, ದೊಡ್ಡದಾದ ಕತ್ತನ್ನು ಹೊಂದಿರುವ ವ್ಯಕ್ತಿ ವಿಶ್ವದಲ್ಲಿಯೇ ಇಲ್ಲ! ರೂಬಿಲ್​ನ ಕತ್ತಿನ ಸುತ್ತಳತೆ ಬರೋಬ್ಬರಿ 52 ಸೆಂಟಿಮೀಟರ್​ಗಳು. ಇಂಚಿನ ಮಾಪನದಲ್ಲಿ ಹೇಳುವುದಾದರೆ ರೂಬಿಲ್​ನ ಕತ್ತಿನ ಸುತ್ತಳತೆ 20.5 ಇಂಚು. ಭಾರತದ ಕೆಲವು ನಟಿಯರ ಸೊಂಟದ ಸುತ್ತಳತೆಯೂ ಇಷ್ಟಿಲ್ಲ.

ರೂಬಿಲ್ ಕೊಲಂಬಿಯಾ ದೇಶದವರು. ದಿನದ ಹಲವು ಗಂಟೆ ಜಿಮ್​ನಲ್ಲಿ ಕಳೆಯುವ ಈ ದೈತ್ಯ, ಕತ್ತಿನ ಭಾಗಕ್ಕಾಗಿಯೇ ವಿಶೇಷ ವ್ಯಾಯಾಮ, ಲಿಫ್ಟಿಂಗ್​ಗಳನ್ನು ಮಾಡುತ್ತಾರೆ. ವಿಶ್ವದ ಕಠಿಣ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಒಂದಾದ ಐಎಫ್​ಬಿಬಿ ಸ್ಪರ್ಧೆಯಲ್ಲಿ ಸಹ ರೂಬಿಲ್ ಗಮನ ಸೆಳೆದಿದ್ದಾರೆ.

ಇನ್ನು ಇವರಿಬ್ಬರು ದೈತ್ಯರೊಟ್ಟಿಗೆ ಧ್ರುವ ಸರ್ಜಾ ಹೇಗೆ ಸೆಣೆಸಾಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದು, ಅದಕ್ಕೆ ಮಾರ್ಟಿನ್ ಬಿಡುಗಡೆವರೆಗೂ ಕಾಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!