2.1 C
Munich
Monday, March 27, 2023

World Giants won By Two Runs In Last ball Thriller vs India Maharajas | LLC 2023: ಕೊನೆಯ ಎಸೆತದಲ್ಲಿ ಗೆಲುವು; ಗಂಭೀರ್ ತಂಡಕ್ಕೆ 2 ರನ್​ಗಳ ರೋಚಕ ಸೋಲು!

ಓದಲೇಬೇಕು

LLC 2023: ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲೂ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್​ ತಂಡಕ್ಕೆ 2 ರನ್​ಗಳ ರೋಚಕ ಸೋಲಿನ ಶಾಕ್ ಎದುರಾಗಿದೆ.

ಇಂಡಿಯಾ ಮಹಾರಾಜಸ್

ಲೆಜೆಂಡ್ಸ್ ಕ್ರಿಕೆಟ್ ಲೀಗ್ (Legends Cricket League) ಪಂದ್ಯಾವಳಿಯ ಎರಡನೇ ಪಂದ್ಯದಲ್ಲೂ ಗಂಭೀರ್ (Gautam Gambhir) ನಾಯಕತ್ವದ ಇಂಡಿಯಾ ಮಹಾರಾಜಸ್ (India Maharaja)​ ತಂಡಕ್ಕೆ 2 ರನ್​ಗಳ ರೋಚಕ ಸೋಲಿನ ಶಾಕ್ ಎದುರಾಗಿದೆ. ವರ್ಲ್ಡ್ ಜೈಂಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ತಂಡದ ನಾಯಕ ಗೌತಮ್ ಗಂಭೀರ್ ಅವರ ಸತತ ಎರಡನೇ ಅರ್ಧಶತಕದ ಹೊರತಾಗಿಯೂ ಇಂಡಿಯಾ ಮಹಾರಾಜಸ್​ ತಂಡ ಸೋಲಿಗೆ ಶರಣಾಗಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ (world giants) ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಗಂಭೀರ್ ತಂಡ 2 ರನ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಫಿಂಚ್- ವಾಟ್ಸನ್ ಅರ್ಧಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 7 ರನ್ ಇರುವಾಗ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ಆರೋನ್ ಫಿಂಚ್ ಹಾಗೂ ಶೇನ್ ವಾಟ್ಸನ್ ತಲಾ ಅರ್ಧಶತಕ ಬಾರಿಸುವುದರೊಂದಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಟಿನೋ ಬೆಸ್ಟ್ 13 ರನ್ ಗಳಿಸಿದ್ದು ಬಿಟ್ಟರೆ ತಂಡದ ಮತ್ತ್ಯಾವ ಆಟಗಾರನು ಎರಡಂಕಿ ತಲುಪಲ್ಲಿಲ್ಲ ಹೀಗಾಗಿ ವರ್ಲ್ಡ್ ಜೈಂಟ್ಸ್ ತಂಡ 20 ಓವರ್​ಗಳಲ್ಲಿ 166 ರನ್ ಕಲೆಹಾಕಿತು.

IND vs AUS: ಶ್ರೇಯಸ್ ಅಯ್ಯರ್​ಗೆ ಇಂಜುರಿ; ಅಂತಿಮ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡುವುದು ಅನುಮಾನ?

ಇನ್ನು ಈ ಗುರಿ ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡಕ್ಕೆ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಅರ್ಧಶತಕದ ಜೊತೆಯಾಟ ನಡೆಸುವುದರೊಂದಿಗೆ ಉತ್ತಮ ಆರಂಭ ತಂದುಕೊಟ್ಟರು. ಆದರೆ ಈ ಇಬ್ಬರನ್ನು ಬಿಟ್ಟರೆ ತಂಡದ ಉಳಿದ ಆಟಗಾರರು ಗೆಲುವಿಗಾಗಿ ಹೋರಾಟ ಕೊಡಲಿಲ್ಲ. ಉತ್ತಪ್ಪ 29 ರನ್ ಗಳಿಸಿ ಔಟಾದರೆ, ನಾಯಕ ಗಂಭಿರ್ 68 ರನ್ ಬಾರಿಸಿದರು. ಇನ್ನುಳಿದಂತೆ ಮೊಹಮದ್ ಕೈಫ್ ಅಜೇಯ 21 ರನ್ ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ಗಂಭೀರ್ ಸತತ 2ನೇ ಅರ್ಧಶತಕ

ಇನ್ನು ತಂಡದ ಪರ ನಾಯಕನ ಆಟವಾಡಿದ ಗಂಭೀರ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿದರು. ಈ ಅರ್ಧಶತಕವನ್ನು ಕೇವಲ 28 ಎಸೆತಗಳಲ್ಲಿ ಪೂರ್ಣಗೊಳಿಸಿದ ಗಂಭೀರ್, ಈ ಮೊದಲು ಮಾರ್ಚ್ 10 ರಂದು ಏಷ್ಯಾ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ 41 ಎಸೆತಗಳನ್ನು ಎದುರಿಸಿದ ಗಂಭೀರ್, 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 68 ರನ್ ಚಚ್ಚಿದರು.

ಇದಕ್ಕೂ ಮುನ್ನ ಮಾರ್ಚ್ 10ರಂದು ನಡೆದ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧದ ಆ ಪಂದ್ಯದಲ್ಲಿ 39 ಎಸೆತಗಳನ್ನು ಎದುರಿಸಿದ ಗಂಭೀರ್ 7 ಬೌಂಡರಿಗಳ ಸಹಾಯದಿಂದ 54 ರನ್ ಬಾರಿಸಿದ್ದರು. ಆದರೆ ಈ ಅರ್ಧಶತಕದ ನಂತರವೂ ಗಂಭೀರ್ ತಂಡ ಆರಂಭಿಕ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ 9 ರನ್‌ಗಳ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಆ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡ ಗೆಲುವಿಗೆ ಕೇವಲ 166 ರನ್‌ಗಳ ಸವಾಲನ್ನು ನೀಡಿತ್ತು. ಆದರೆ ಈ ಗುರಿ ಬೆನ್ನಟ್ಟಿದ ಇಂಡಿಯಾ ಮಹಾರಾಜ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!