WPL 2023 auction: ಟೀಮ್ ಇಂಡಿಯಾದ ಮೂವರು ಆಟಗಾರ್ತಿಯರು 2 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾದರು. ಹಾಗಿದ್ರೆ ಅತ್ಯಧಿಕ ಮೊತ್ತ ಪಡೆದ ಟಾಪ್-6 ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ….
Feb 13, 2023 | 9:25 PM








ತಾಜಾ ಸುದ್ದಿ
TV9kannada Web Team | Edited By: Zahir PY
Updated on: Feb 13, 2023 | 9:25 PM
Feb 13, 2023 | 9:25 PM
ಮುಂಬೈನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಒಟ್ಟು 6 ಆಟಗಾರ್ತಿಯರು ಭರ್ಜರಿ ಮೊತ್ತಕ್ಕೆ ಬಿಡ್ ಆಗಿದ್ದಾರೆ. ಇವರಲ್ಲಿ ಅತ್ಯಧಿಕ ಮೊತ್ತ ಪಾವತಿಸಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎಂಬುದು ವಿಶೇಷ.
ಆರ್ಸಿಬಿ ಫ್ರಾಂಚೈಸಿಯು ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಬರೋಬ್ಬರಿ 3.4 ಕೋಟಿ ರೂ. ನೀಡಿ ಖರೀದಿಸಿದೆ. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆ ಸ್ಮೃತಿ ಪಾಲಾಯಿತು. ಇನ್ನುಳಿದಂತೆ ಟೀಮ್ ಇಂಡಿಯಾದ ಮೂವರು ಆಟಗಾರ್ತಿಯರು 2 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾದರು. ಹಾಗಿದ್ರೆ ಅತ್ಯಧಿಕ ಮೊತ್ತ ಪಡೆದ ಟಾಪ್-6 ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ….
1- ಸ್ಮೃತಿ ಮಂಧಾನ: ಟೀಮ್ ಇಂಡಿಯಾ ಆಟಗಾರ್ತಿಯ ಸ್ಮೃತಿ ಮಂಧಾನ ಅವರನ್ನು ಆರ್ಸಿಬಿ ಫ್ರಾಂಚೈಸಿಯು 3.4 ಕೋಟಿ ಕೋಟಿ ರೂ.ಗೆ ಖರೀದಿಸಿದೆ.
2- ಆಶ್ಲೀಗ್ ಗಾರ್ಡ್ನರ್: ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ್ತಿ ಆಶ್ಲೀಗ್ ಗಾರ್ಡ್ನರ್ ಅವರನ್ನು ಗುಜರಾತ್ ಜೈಂಟ್ಸ್ ಫ್ರಾಂಚೈಸಿ 3.2 ಕೋಟಿಗೆ ಖರೀದಿಸಿದೆ.
3- ನ್ಯಾಟ್ ಸ್ಕಿವರ್-ಬ್ರಂಟ್: ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ನ್ಯಾಟ್ ಸ್ಕಿವರ್-ಬ್ರಂಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 3.2 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.
4- ದೀಪ್ತಿ ಶರ್ಮಾ: ಟೀಮ್ ಇಂಡಿಯಾ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ ಫ್ರಾಂಚೈಸಿ ಬರೋಬ್ಬರಿ 2.6 ಕೋಟಿ ರೂ. ನೀಡಿ ಖರೀದಿಸಿದೆ.
5- ಜೆಮಿಮಾ ರೋಡ್ರಿಗಸ್: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಜೆಮಿಮಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 2.2 ಕೋಟಿಗೆ ಖರೀದಿಸಿದೆ.
6- ಶಫಾಲಿ ವರ್ಮಾ: ಭಾರತ ತಂಡದ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ಅವರನ್ನು 2 ಕೋಟಿ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಖರೀದಿಸಿದೆ.