1.6 C
Munich
Saturday, February 25, 2023

WPL 2023 Mumbai Indians unveil their new jersey for inaugural Womens Premier League see photos | WPL 2023: ಚೊಚ್ಚಲ ಆವೃತ್ತಿಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್; ಫೋಟೋ ನೋಡಿ

ಓದಲೇಬೇಕು

WPL 2023: ಮಹಿಳಾ ತಂಡದ ಜೆರ್ಸಿಗೂ, ಪುರುಷರ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯತೆ ಇದೆ. ಈ ಜೆರ್ಸಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ತಂಡ ಮಾಹಿತಿ ಹಂಚಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡ

ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್​ಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಂದು ಮೊದಲ ಪಂದ್ಯ ನಡೆಯುವುದರೊಂದಿಗೆ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರ ಮೇಲೆ ಹಣದ ಮಳೆಯನ್ನೇ ಸುರಿಸಿದವು. ಇದರೊಂದಿಗೆ ತಮ್ಮ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿದ್ದವು. ಆ ಬಳಿಕ ತಮ್ಮ ತಮ್ಮ ತಂಡಗಳಿಗೆ ನಾಯಕಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದೀಗ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ತನ್ನ ಮಹಿಳಾ ತಂಡದ ಜೆರ್ಸಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಮುಂಬೈನ ಮಹಿಳಾ ತಂಡದ ಜೆರ್ಸಿ ತಿಳಿ ನೀಲಿ ಬಣ್ಣದ್ದಾಗಿದ್ದು, ಇದು ಬದಿಯಲ್ಲಿ ಕಿತ್ತಳೆ ಬಣ್ಣ ಮತ್ತು ಗೋಲ್ಡನ್ ಬಣ್ಣದ ಗೆರೆಗಳನ್ನು ಹೊಂದಿದೆ. ಮಹಿಳಾ ತಂಡದ ಜೆರ್ಸಿಗೂ, ಪುರುಷರ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯತೆ ಇದೆ. ಈ ಜೆರ್ಸಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ತಂಡ ಮಾಹಿತಿ ಹಂಚಿಕೊಂಡಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!