9.5 C
Munich
Thursday, March 30, 2023

WPL 2023 Points Table Standings Ranking Women’s premier league online in Kannada | WPL 2023 Points Table: ಮುಂಬೈ ನಂ.1.. ಆರ್​ಸಿಬಿಗೆ ಯಾವ ಸ್ಥಾನ? ಹೀಗಿದೆ ಪಾಯಿಂಟ್ ಪಟ್ಟಿ

ಓದಲೇಬೇಕು

WPL 2023 Points Table: ಮೊದಲ ಸುತ್ತಿನ ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲೂ ಪರಿಸ್ಥಿತಿ ಸ್ಪಷ್ಟವಾಗಿದೆ. ಮುಂಬೈ, ದೆಹಲಿ ಮತ್ತು ಯುಪಿ ಮೊದಲ ಪಂದ್ಯಗಳನ್ನು ಗೆದ್ದು ತಲಾ 2 ಅಂಕಗಳನ್ನು ಪಡೆದಿವೆ.

ಮಹಿಳಾ ಪ್ರೀಮಿಯರ್ ಲೀಗ್‌

ಐತಿಹಾಸಿಕ ಮಹಿಳಾ ಪ್ರೀಮಿಯರ್ ಲೀಗ್​ಗೆ (WPL 2023) ಅದ್ಭುತ ಆರಂಭ ಸಿಕ್ಕಿದೆ. ಕೇವಲ ಐದು ತಂಡಗಳೊಂದಿಗೆ ಆರಂಭವಾದ ಟೂರ್ನಿಯ ಮೊದಲೆರಡು ದಿನಗಳಲ್ಲಿ 3 ಪಂದ್ಯಗಳು ಪೂರ್ಣಗೊಂಡಿದ್ದು, ಎಲ್ಲ ತಂಡಗಳು ತಲಾ ಒಂದು ಪಂದ್ಯವನ್ನು ಆಡಿವೆ. ಮೊದಲ ಡಬಲ್ ಹೆಡರ್ ಮಾರ್ಚ್ 5 ರಂದು ಭಾನುವಾರ ನಡೆದಿದ್ದು, ಇದರ ಅಂತ್ಯದೊಂದಿಗೆ, ಪಾಯಿಂಟ್ಸ್ ಟೇಬಲ್​ನ ಸ್ಥಾನವು ಮೊದಲ ಬಾರಿಗೆ ಸ್ಪಷ್ಟವಾಗಿದೆ. ಡಬ್ಲ್ಯುಪಿಎಲ್‌ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ್ದ ಮುಂಬೈ ಇಂಡಿಯನ್ಸ್ ( Mumbai Indians), ಸೀಸನ್​ನ ಮೊದಲ ಪಂದ್ಯಗಳ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮತ್ತೊಂದೆಡೆ ಗುಜರಾತ್ ದೈತ್ಯ ತಂಡ ಸತತ ಎರಡು ಸೋಲಿನೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಲೀಗ್​ನ ಮೊದಲ ಸೀಸನ್ ಶನಿವಾರ, ಮಾರ್ಚ್ 4 ರಂದು ಮುಂಬೈನ DY ಪಾಟೀಲ್ ಸ್ಟೇಡಿಯಂನಲ್ಲಿ ಪ್ರಾರಂಭವಾಯಿತು.ಮೊದಲ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 143 ರನ್‌ಗಳ ಏಕಪಕ್ಷೀಯ ಅಂತರದಿಂದ ಸೋಲಿಸುವ ಮೂಲಕ ಸ್ಫೋಟಕ ಆರಂಭವನ್ನು ಮಾಡಿತು. ನಂತರ ಭಾನುವಾರ ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಆರ್​ಸಿಬಿ ತಂಡವನ್ನು 60 ರನ್‌ಗಳಿಂದ ಸೋಲಿಸಿತು. ಇದಾದ ನಂತರ ಮುಂದಿನ ಪಂದ್ಯದಲ್ಲಿ ಗುಜರಾತ್ ಮತ್ತು ಯುಪಿ ವಾರಿಯರ್ಸ್ ನಡುವೆ ನಡೆದ ಪಂದ್ಯದಲ್ಲಿ ಯುಪಿ ಗುಜರಾತ್ ತಂಡವನ್ನು 3 ವಿಕೆಟ್ ಗಳಿಂದ ರೋಚಕವಾಗಿ ಸೋಲಿಸಿತು.

MIW vs RCBW, WPL 2023: ಮಂಧಾನ vs ಕೌರ್: ಡಬ್ಲ್ಯೂಪಿಎಲ್​ನಲ್ಲಿಂದು ಹೈವೋಲ್ಟೇಜ್ ಕದನ: ಸ್ಮೃತಿ ಪಡೆಯ ಮಾಸ್ಟರ್ ಪ್ಲಾನ್ ಏನು?

ಮುಂಬೈ ನಂಬರ್ ಒನ್

ಮೊದಲ ಸುತ್ತಿನ ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲೂ ಪರಿಸ್ಥಿತಿ ಸ್ಪಷ್ಟವಾಗಿದೆ. ಮುಂಬೈ, ದೆಹಲಿ ಮತ್ತು ಯುಪಿ ಮೊದಲ ಪಂದ್ಯಗಳನ್ನು ಗೆದ್ದು ತಲಾ 2 ಅಂಕಗಳನ್ನು ಪಡೆದಿವೆ. ಅದೇನೇ ಇದ್ದರೂ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ನೆಟ್ ರನ್‌ರೇಟ್‌ (NRR), ಗುಜರಾತ್ ವಿರುದ್ಧ 143 ರನ್‌ಗಳ ಜಯದೊಂದಿಗೆ, ಮುಂಬೈನ NRR (+) 7.150 ಆಗಿದೆ.

ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (+) 3.000 ರನ್ ರೇಟ್ ಹೊಂದಿದ್ದರೆ, ಯುಪಿ ವಾರಿಯರ್ಸ್ (+) 0.374 ರೊಂದಿಗೆ ಮೂರನೇ ಸ್ಥಾನದಲ್ಲಿದೆ.

ಸೋಮವಾರ ಯಾರು ಗೆಲ್ಲುತ್ತಾರೆ?

ಆರ್‌ಸಿಬಿ ಮತ್ತು ಗುಜರಾತ್ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಬೆಂಗಳೂರು ಒಂದು ಪಂದ್ಯವನ್ನು ಸೋತಿದ್ದರೆ, ಗುಜರಾತ್ ಜೈಂಟ್ಸ್ ತನ್ನ ಎರಡೂ ಪಂದ್ಯಗಳಲ್ಲಿ ಸೋತಿದೆ. ಇದೀಗ ಸೋಮವಾರ ಮುಂಬೈ ಮತ್ತು ಬೆಂಗಳೂರು ನಡುವೆ ಪಂದ್ಯ ನಡೆಯಲಿದ್ದು, ಅದರಲ್ಲಿ ಬೆಂಗಳೂರು ಖಾತೆ ತೆರೆಯಲು ಅವಕಾಶವಿದ್ದು, ಮುಂಬೈ ಮೊದಲ ಸ್ಥಾನದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಹೋರಾಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!