8.6 C
Munich
Wednesday, March 22, 2023

WPL 2023: ಹೀಗಾದ್ರೆ RCB ಎಲಿಮಿನೇಟರ್ ಹಂತಕ್ಕೇರುವುದು ಖಚಿತ..!

ಓದಲೇಬೇಕು

WPL 2023: ವುಮೆನ್ಸ್ ಪ್ರೀಮಿಯರ್ ಲೀಗ್​ನ ದ್ವಿತೀಯ ಸುತ್ತಿನ ಪಂದ್ಯಗಳು ಭರದಿಂದ ಸಾಗುತ್ತಿದೆ. ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಮುಂಬೈ ಇಂಡಿಯನ್ಸ್ (Mumbai Indians) ತಂಡವು ಈಗಾಗಲೇ ಮುಂದಿನ ಹಂತಕ್ಕೇರಿದೆ. ಇನ್ನು ದ್ವಿತೀಯ ಸುತ್ತಿನ ಮೂಲಕ 2 ತಂಡಗಳು ಎಲಿಮಿನೇಟರ್ ಹಂತಕ್ಕೇರಬಹುದು. ಇದೀಗ ತನ್ನ 6ನೇ ಪಂದ್ಯದಲ್ಲಿ ಮೊದಲ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಲಿಮಿನೇಟರ್ ಕನಸನ್ನು ಜೀವಂತವಿರಿಸಿಕೊಂಡಿದೆ. ಅಂದರೆ ಆರ್​ಸಿಬಿ ಉಳಿದ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮುಂದಿನ ಹಂತಕ್ಕೇರಬಹುದು. ಆದರೆ ಇಲ್ಲಿ ಇತರೆ ತಂಡಗಳ ಫಲಿತಾಂಶವು ಗಣನೆಗೆ ಬರಲಿದೆ.

ಆರ್​ಸಿಬಿ ಎಲಿಮಿನೇಟರ್ ಹಂತಕ್ಕೇರುವುದು ಹೇಗೆ?

  1.  RCB ಮುಂದಿನ 2 ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲಬೇಕು. ಇದರಿಂದ ಒಟ್ಟು 6 ಪಾಯಿಂಟ್ ಆಗಲಿದೆ.
  2. ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಗೆಲ್ಲಬೇಕು. ಇಲ್ಲಿ ಮುಂಬೈ ಹಾಗೂ ಡೆಲ್ಲಿ ಗೆದ್ದರೂ ಆರ್​ಸಿಬಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
  3. ಮುಂದಿನ ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ 2 ಸೋಲು ಕಾಣಬೇಕು. ಹಾಗೆಯೇ ಯುಪಿ ವಾರಿಯರ್ಸ್​ 3 ಪಂದ್ಯಗಳನ್ನು ಸೋತರೆ ಆರ್​ಸಿಬಿಗೆ ಅನುಕೂಲವಾಗಲಿದೆ.

ಅಂದರೆ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಗುಜರಾತ್ ಜೈಂಟ್ಸ್ ತಂಡಗಳಿಗೆ ಸೋಲುಣಿಸಬೇಕು. ಅಲ್ಲದೆ ಯುಪಿ ವಾರಿಯರ್ಸ್​ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲುವುದನ್ನು ಎದುರು ನೋಡಬೇಕು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಹೀಗಾದ್ರೆ ಮಾತ್ರ ಆರ್​ಸಿಬಿಗೆ ನೆಟ್​ ರನ್​ ರೇಟ್​ ಮೂಲಕ ಎಲಿಮಿನೇಟರ್ ಪಂದ್ಯವಾಡಬಹುದು.

ಫೈನಲ್ ಎಂಟ್ರಿ ಹೇಗೆ?

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ 5 ತಂಡಗಳು ತಲಾ 8 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು ಇತರ ತಂಡಗಳೊಂದಿಗೆ ಎರಡು ಬಾರಿ ಮುಖಾಮುಖಿಯಾಗುತ್ತದೆ. ಇದರಲ್ಲಿ ಅತ್ಯಧಿಕ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸುತ್ತದೆ.

ಇನ್ನು ಪಾಯಿಂಟ್ ಟೇಬಲ್​ನಲ್ಲಿ 2ನೇ ಹಾಗೂ 3ನೇ ಸ್ಥಾನ ಅಲಂಕರಿಸುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಮುಂದಿನ ಹಂತಕ್ಕೇರಿದೆ. ಇನ್ನು ಮುಂಬೈ ಅಗ್ರಸ್ಥಾನದೊಂದಿಗೆ ಫೈನಲ್ ಆಡುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹಾಗೆಯೇ ಪಾಯಿಂಟ್ ಟೇಬಲ್​ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಎಲಿಮಿನೇಟರ್ ಹಂತಕ್ಕೇರುವುದು ಬಹುತೇಕ ಖಚಿತ ಎನ್ನಬಹುದು.

ಇಲ್ಲಿ ಮೂರನೇ ಸ್ಥಾನಕ್ಕಾಗಿ ಆರ್​ಸಿಬಿ, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ಪೈಪೋಟಿ ಇದೆ. ಆರ್​ಸಿಬಿ ಮುಂದಿನ 2 ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನಕ್ಕೇರಿದರೆ ಎಲಿಮಿನೇಟರ್ ಪಂದ್ಯವಾಡಬಹುದು.

ಈ ಮೇಲೆ ತಿಳಿಸಿದಂತೆ ಆರ್​ಸಿಬಿ 3ನೇ ಸ್ಥಾನ ಪಡೆಯಲು ಯುಪಿ ವಾರಿಯರ್ಸ್ ಮುಂದಿನ 3 ಪಂದ್ಯಗಳಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಾಣಲೇಬೇಕು. ಒಂದು ವೇಳೆ ಆರ್​ಸಿಬಿ ಮುಂದಿನ 2 ಪಂದ್ಯ ಗೆದ್ದು, ಯುಪಿ ವಾರಿಯರ್ಸ್ 1 ಪಂದ್ಯದಲ್ಲಿ ಜಯ ಸಾಧಿಸಿದರೆ ಪಾಯಿಂಟ್​ ಟೇಬಲ್​ನಲ್ಲಿ ಸಮಬಲ ಸಾಧಿಸಲಿದೆ. ಇದರಿಂದ ನೆಟ್​ ರನ್​ ರೇಟ್ ಕೂಡ ಗಣನೆಗೆ ಬರಲಿದೆ.

ಇದನ್ನೂ ಓದಿ: Virat Kohli: 40 ವರ್ಷಗಳ ಹಳೆಯ ಸಾಧನೆಯನ್ನು ಪುನರಾವರ್ತಿಸಿದ ವಿರಾಟ್ ಕೊಹ್ಲಿ

ಹೀಗಾಗಿ ಆರ್​ಸಿಬಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ನೆಟ್​ ರನ್​ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ. ಈ ಲೆಕ್ಕಚಾರದಂತೆ ಮುಂದಿನ ಫಲಿತಾಂಶಗಳು ಮೂಡಿಬಂದರೆ ಆರ್​ಸಿಬಿ ಎಲಿಮಿನೇಟರ್ ಪಂದ್ಯವನ್ನು ಆಡುವುದು ಖಚಿತ.

 

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!