0.1 C
Munich
Wednesday, March 1, 2023

Yash And Rishab Shetty Participated in Dinner Party at Rajabhavana Which is Hosted By PM Narendra Modi | ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ ಭಾಗಿ; ಫೋಟೋ ವೈರಲ್

ಓದಲೇಬೇಕು

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ ಯಶಸ್ಸು ಕಂಡಿದೆ. ಭಾರತದಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಚಿತ್ರರಂಗಕ್ಕೆ ಈ ಸಿನಿಮಾದಿಂದ ಹೊಸ ಹುರುಪು ಸಿಕ್ಕಿದೆ.

ಮೋದಿ ಔತಣಕೂಟದಲ್ಲಿ ಯಶ್-ರಿಷಬ್

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ರಾತ್ರಿ (ಫೆಬ್ರವರಿ 12) ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದಿನಿಂದ (ಫೆಬ್ರವರಿ 13) ಐದು ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನ 2023ರಲ್ಲಿ ಭಾಗಿ ಆಗಲಿದ್ದಾರೆ. ವಿಶೇಷ ಎಂದರೆ ನಟ ಯಶ್(Yash), ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಮೊದಲಾದವರು ರಾಜಭವನದಲ್ಲಿ ನಡೆದ ಮೋದಿ ಅವರ ಔತಣಕೂಟದಲ್ಲಿ ಹಾಜರಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ ಯಶಸ್ಸು ಕಂಡಿದೆ. ಭಾರತದಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಚಿತ್ರರಂಗಕ್ಕೆ ಈ ಸಿನಿಮಾದಿಂದ ಹೊಸ ಹುರುಪು ಸಿಕ್ಕಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಿಂದ ಯಶಸ್ಸು ಕಂಡಿದ್ದಾರೆ. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’​ ಮೂಲಕ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದಾರೆ. ಈ ಕಾರಣಕ್ಕೆ ಇವರೆಲ್ಲರಿಗೂ ಔತಣಕೂಟಕ್ಕೆ ಆಹ್ವಾನ ಸಿಕ್ಕಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ.

ರಾಜಭವನದ ಹೊರ ಭಾಗದಲ್ಲಿ ಯಶ್ ಹಾಗೂ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಅಭಿಮಾನಿಗಳ ಜತೆ ಅವರು ಪೋಸ್ ನೀಡಿದ್ದಾರೆ. ಈ ಫೋಟೋಗೆ ಬಗೆಬಗೆಯ ಕಮೆಂಟ್​ಗಳು ಬರುತ್ತಿವೆ. ಇವರ ಜತೆ ಕೆಲ ಕ್ರಿಕೆಟರ್​ಗಳು ಕೂಡ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಶಿವರಾತ್ರಿಗೆ ಗುಡ್​ನ್ಯೂಸ್ ಕೊಡಲಿದ್ದಾರೆ ನರ್ತನ್​; ಯಶ್ ಜತೆಗಿನ ಸಿನಿಮಾ ಯಾವಾಗ?

ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರರಂಗದ ಬಗ್ಗೆ ಆಗಾಗ ಗಮನ ಹರಿಸುತ್ತಿರುತ್ತಾರೆ. ಕೆಲ ವರ್ಷಗಳ ಹಿಂದೆ ಅವರು ಬಾಲಿವುಡ್​ ಮಂದಿಯನ್ನು ಆಹ್ವಾನಿಸಿ ಔತಣಕೂಟ ನಡೆಸಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಗಲಿದ ಚಿತ್ರರಂಗದ ಅನೇಕರಿಗೆ ಅವರು ಸಂತಾಪ ಸೂಚಿಸಿದ್ದಿದೆ.

ಇದನ್ನೂ ಓದಿ



ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!