9 C
Munich
Friday, March 24, 2023

YouTube Shorts: ಟಿಕ್ ಟಾಕ್ ಫೀಚರ್ ಯೂಟ್ಯೂಬ್ ಶಾರ್ಟ್ಸ್ ವಿಡಿಯೋದಲ್ಲಿ ಬಳಕೆದಾರರು ಫುಲ್ ಖುಷ್

ಓದಲೇಬೇಕು

YouTube New Feature: ಯೂಟ್ಯೂಬ್ ಶಾರ್ಟ್​​ ತನ್ನ ಮುಂದಿನ ಅಪ್ಡೇಟ್​ನಲ್ಲಿ ವಿಡಿಯೋದ ವಾಯ್ಸ್ ಓವರ್ ಅನ್ನು ಬದಲಾವಣೆ ಮಾಡುವ ಬಟನ್ ಆಯ್ಕೆ ನೀಡಲಿದೆ. ಈ ಹಿಂದೆ ಇದಕ್ಕಾಗಿ ಪ್ರತ್ಯೇಕ ಥರ್ಡ್ ಪಾರ್ಟಿ ಆ್ಯಪ್​ಗಳ ಸಹಾಯ ಪಡೆಯಬೇಕಿತ್ತು.

ಚೀನಾ ಮೂಲದ ಜನಪ್ರಿಯ ಅಪ್ಲಿಕೇಶನ್‌ ಟಿಕ್‌ ಟಾಕ್ (Tik Tok) ಭಾರತದಲ್ಲಿ ಬ್ಯಾನ್‌ ಆಗಿದ್ದೆ ತಡ ಟಿಕ್‌ ಟಾಕ್‌ಗೆ ಪ್ರತಿಯಾಗಿ ಹಲವು ಆ್ಯಪ್‌ಗಳನ್ನ ಪರಿಚಯಿಸುವ ಪ್ರಯತ್ನವನ್ನ ಅನೇಕ ಸಂಸ್ಥೆಗಳು ಇನ್ನೂ ಮಾಡುತ್ತಿವೆ. ಈಗಾಗಲೇ ಟಿಕ್‌ ಟಾಕ್‌ಗೆ ಪ್ರತಿರೂಪವಾಗಿ ಚಿಂಗಾರಿ, ಟ್ರೆಲ್, ಇನ್‌ಸ್ಟಾಗ್ರಾಮ್‌ (Instagram) ರೀಲ್ಸ್‌ ಆ್ಯಪ್‌ಗಳನ್ನ ಪರಿಚಯಿಸಲಾಗಿದೆ. ಯೂಟ್ಯೂಬ್‌ ಕೂಡ ಟಿಕ್‌ ಟಾಕ್‌ ಮಾದರಿಯ ಶಾರ್ಟ್‌ ವಿಡಿಯೋ ಸ್ಟ್ರೀಮಿಂಗ್‌ ಫೀಚರ್ಸ್‌ ಅನ್ನು 2020 ರಲ್ಲಿ ಪರಿಚಯಿಸಿತ್ತು. ಇದು ದೊಡ್ಡ ಮಟ್ಟದ ಯಶಸ್ಸು ಕೂಡ ಸಾಧಿಸಿದೆ. ಆದರೆ, ಕೆಲವು ಆಯ್ಕೆಗಳು ಈ ಯೂಟ್ಯೂಬ್ ಶಾರ್ಟ್​​ನಲ್ಲಿಲ್ಲ (YouTube Shorts). ಇದರಿಂದ ಬೇಸರಗೊಂಡಿದ್ದ ಬಳಕೆದಾರರಿಗೆ ಯೂಟ್ಯೂಬ್ ಇದೀಗ ಸಿಹಿ ಸುದ್ದಿ ನೀಡಿದೆ. ಸದ್ಯದಲ್ಲೇ ಯೂಟ್ಯೂಬ್ ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ಒಂದು ಬರಲಿದೆ. ಅದುವೇ ವಿಡಿಯೋ ಧ್ವನಿಯನ್ನು ಬದಲಾವಣೆ ಮಾಡುವ ಆಯ್ಕೆ.

ಹೌದು, ಯೂಟ್ಯೂಬ್ ಶಾರ್ಟ್​​ ತನ್ನ ಮುಂದಿನ ಅಪ್ಡೇಟ್​ನಲ್ಲಿ ವಿಡಿಯೋದ ವಾಯ್ಸ್ ಓವರ್ ಅನ್ನು ಬದಲಾವಣೆ ಮಾಡುವ ಬಟನ್ ಆಯ್ಕೆ ನೀಡಲಿದೆ. ಈ ಹಿಂದೆ ಇದಕ್ಕಾಗಿ ಪ್ರತ್ಯೇಕ ಥರ್ಡ್ ಪಾರ್ಟಿ ಆ್ಯಪ್​ಗಳ ಸಹಾಯ ಪಡೆಯಬೇಕಿತ್ತು. ಆದರೀಗ ವಾಯ್ಸ್ ಓವರ್ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.

ಯೂಟ್ಯೂಬ್‌ ಆರಂಭವಾಗಿದ್ದೇ ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಆಗಿ. ಯೂಟ್ಯೂಬ್‌ ಸ್ವತಃ 2005ರಲ್ಲಿ 18 ಸೆಕೆಂಡುಗಳ ಮಿ ಅಟ್‌ ದಿ ಝೂ ನೊಂದಿಗೆ ಪ್ರಾರಂಭವಾಯಿತು. ಇದರ ನಂತರ, ಚಾರ್ಲಿ ಬಿಟ್‌ ಮೈ ಫಿಂಗರ್‌ ಅವರನ್ನು ಜನರನ್ನು ತುಂಬಾ ಇಷ್ಟಪಟ್ಟಿದ್ದರು. ಚಾರ್ಲಿ ಅವರ ಈ ವಿಡಿಯೋ ತುಂಬಾ ವೈರಲ್ ಆಗಿತ್ತು. ಬಳಿಕ 2020 ರಲ್ಲಿ ಯೂಟ್ಯೂಬ್‌ ತನ್ನ ಕಿರು ವಿಡಿಯೋ ಪ್ಲಾಟ್​ಫಾರ್ಮ್‌ ಯೂಟ್ಯೂಬ್‌ ಶಾರ್ಟ್ಸ್ ಅನ್ನು ಪ್ರಾರಂಭಿಸಿ ಮತ್ತಷ್ಟು ಪ್ರಸಿದ್ಧಿ ಪಡೆದಿದೆ.

ದೇಶದಲ್ಲಿ ಜನಪ್ರಿಯತೆ ಪಡೆದಿರುವ ರೀಲ್ಸ್, ಚಿಂಗಾರಿ ಅಪ್ಲಿಕೇಶನ್‌ಗೆ ಯೂಟ್ಯೂಬ್ ಶಾರ್ಟ್ಸ್ ಸ್ಪರ್ಧೆ ನೀಡಿದೆ. 15 ಸೆಕೆಂಡ್‌ಗಳ ವಿಡಿಯೋ ರಚಿಸುವ ಯೂಟ್ಯೂಬ್ ಅಪ್ಲಿಕೇಶನ್ ಇದಾಗಿದ್ದು, ಟಿಕ್‌ ಟಾಕ್ ಮಾದರಿಯಲ್ಲಿಯೇ ಮನರಂಜನೆ, ಶೈಕ್ಷಣಿಕ ವಿಡಿಯೋ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಯೂಟ್ಯೂಬ್‌ ಶಾರ್ಟ್ಸ್ ಕ್ಯಾಮೆರಾಗೆ ಪ್ರವೇಶವಿಲ್ಲದ ಜನರು ಶೀರ್ಷಿಕೆ ಅಥವಾ ವಿವರಣೆಯಲ್ಲಿ # ಶಾರ್ಟ್ಸ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಇನ್ನೂ 60 ಸೆಕೆಂಡುಗಳಿಗಿಂತ ಕಡಿಮೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದು.

ಟಿಕ್‌ ಟಾಕ್‌ ಹೊಂದಿದ್ದ ಜನಪ್ರಿಯತೆಯನ್ನ ರಿಪ್ಲೇಸ್ ಮಾಡುವ ಪ್ರಯತ್ನವನ್ನ ಈಗಾಗಲೇ ಹಲವು ಆ್ಯಪ್​ಗಳು ಮಾಡುತ್ತಿವೆ. ಆದರೆ ಇನ್ನು ಕೂಡ ಯಾವುದೇ ಪರಿಣಾಮಕಾರಿಯಾಗಿ ಪ್ರಭಾವ ಬೀರಿಲ್ಲ. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಕೂಡ ಈ ಹಾದಿಯಲ್ಲಿ ಸೇರಿದೆ. ಯೂಟ್ಯೂಬ್‌ ಶಾರ್ಟ್ಸ್‌ ಇದೀಗ ಒಂದು ಹೆಜ್ಜೆ ಮುಂದದೆಯಿಟ್ಟು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

YouTube Shorts: ಟಿಕ್ ಟಾಕ್ ಫೀಚರ್ ಯೂಟ್ಯೂಬ್ ಶಾರ್ಟ್ಸ್ ವಿಡಿಯೋದಲ್ಲಿ ಬಳಕೆದಾರರು ಫುಲ್ ಖುಷ್

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!